ಇಶಾನ್ ಕಿಶಾನ್… ಹಾಗೇ ಸುಮ್ಮನೆ ವಿಕೆಟ್ ಕೈ ಚೆಲ್ಲಿಕೊಂಡ್ರಾ…? ಮುಂಬೈ ಇಂಡಿಯನ್ಸ್ ಮೇಲೆ ಪ್ರೀತಿ ಜಾಸ್ತಿಯಾಯ್ತಾ..? ಮಾಜಿ ತಂಡದ ಗೆಲುವಿಗೆ ಕಾರಣರಾದ್ರಾ…? ನೀತಾ ಅಂಬಾನಿಯವರ ಋಣವನ್ನು ತೀರಿಸಿಕೊಂಡ್ರಾ..? ಹೀಗೆ ಹತ್ತು ಹಲವು ಅನುಮಾನಗಳು, ಪ್ರಶ್ನೆಗಳು ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿವೆ.
ಮುಂಬೈ ಇಂಡಿಯನ್ಸ್ ವಿರುದ್ಧ ಎಸ್‍ಆರ್‍ಎಚ್ ತಂಡದ ಆರಂಭಿಕ ಆಟಗಾರ ಇಶಾನ್ ಕಿಶಾನ್ ನಡೆ ಈಗ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಪಂದ್ಯದ ಮೂರನೇ ಓವರ್‍ನಲ್ಲಿ ದೀಪಕ್ ಚಾಹರ್ ಎಸೆತವನ್ನು ಇಶಾನ್ ಕಿಶಾನ್ ಲೆಗ್ ಸೈಡ್‍ನತ್ತ ಹೊಡೆಯುವ ಪ್ರಯತ್ನ ನಡೆಸಿದ್ರು. ಆಗ ಚೆಂಡು ಮುಂಬೈ ವಿಕೆಟ್ ಕೀಪರ್ ರಯಾನ್ ರಿಕಲ್ಟನ್ ಗ್ಲೌಸ್ ಸೇರಿಕೊಂಡಿತ್ತು. ಆದ್ರೆ ವಿಕೆಟ್ ಕೀಪರ್ ಔಟ್‍ಗೆ ಮನವಿ ಕೂಡ ಮಾಡಲಿಲ್ಲ. ಅಂಪೈರ್ ವಿನೋದ್ ಶೇಷನ್ ವೈಡ್ ಎಂದು ಸೂಚನೆ ನೀಡಲು ಮುಂದಾಗುತ್ತಿದ್ದಂತೆ ಇಶಾನ್ ಕಿಶಾನ್ ಪೆವಿಲಿನ್‍ನತ್ತ ಹೆಜ್ಜೆ ಹಾಕಿದ್ರು. ಬ್ಯಾಟರ್ ಇಶಾನ್ ಕಿಶಾನ್ ನಡೆಯಿಂದ ಅಂಪೈರ್ ಕೂಡ ಆಶ್ಚರ್ಯಗೊಂಡ್ರೂ ಒಲ್ಲದ ಮನಸ್ಸಿನಿಂದಲೇ ಔಟ್ ಎಂದು ತನ್ನ ಬೆರಳನ್ನು ಎತ್ತಿದ್ದರು. ಆದ್ರೆ ರಿಪ್ಲೈನಲ್ಲಿ ಇಶಾನ್ ಬ್ಯಾಟ್‍ಗೆ ಚೆಂಡು ಸ್ಪರ್ಶ ಮಾಡಿಲ್ಲ ಎಂಬುದು ಸ್ಪಷ್ಟವಾಗಿತ್ತು. ಆದ್ರೆ ಇಶಾನ್ ಕಿಶಾನ್ ನಡೆಗೆ ಕ್ರಿಕೆಟ್ ಅಭಿಮಾನಿಗಳು ನಾನಾ ರೀತಿಯ ಕಮೆಂಟ್‍ಗಳನ್ನು ಮಾಡುತ್ತಿದ್ದಾರೆ. ಕ್ರಿಕೆಟ್ ವಿಶ್ಲೇಷಕ ಹರ್ಷ ಬೋಗ್ಲೆ ಅವರು, ಇಶಾನ್ ಕಿಶಾನ್ ಅವರು ಔಟ್ ಆಗಿರುವುದು ನನ್ನನ್ನು ಗೊಂದಲಕ್ಕೀಡು ಮಾಡಿದೆ ಎಂದು ಎಕ್ಸ್‍ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಕೆಲವರು ಇಂದಿನ ಪಂದ್ಯ ಫಿಕ್ಸ್ ಆಗಿದೆ ಎಂದು ಹೇಳಲು ಬೇಸರವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಕ್ರಿಕೆಟ್ ಆಟ ಜಂಟಲ್ ಮ್ಯಾನ್ ಗೇಮ್ ಅಂತನೇ ಫೇಮಸ್. ಆದ್ರೆ ಇಲ್ಲಿ ಕೆಲವೊಂದು ಬಾರಿ ಆಟಕ್ಕೆ ಕಳಂಕ ಬಂದಿರೋದು ಇದೆ. ಹಾಗಂತ ಇಶಾನ್ ಕಿಶಾನ್ ಬೇಕಂತನೇ ವಿಕೆಟ್ ಕೈಚೆಲ್ಲಿಕೊಂಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಆದ್ರೂ ಇಶಾನ್ ಕಿಶಾನ್ ನಡೆಗೆ ವ್ಯಾಪಕ ಟೀಕೆಗಳು ಕೇಳಿಬರುತ್ತಿರುವುದು ಮಾತ್ರ ಸುಳ್ಳಲ್ಲ.
ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮುಖ್ಯಮಂತ್ರಿ ಕುರ್ಚಿ ಬಿಡಲು ಸಿದ್ದರಾಮಯ್ಯ ಸಿದ್ಧ ಕೆ ಎನ್ ರಾಜಣ್ಣ ಸ್ಫೋಟಕ ಹೇಳಿಕೆ
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಕುರಿತಾದ ಚರ್ಚೆಗಳು ಈಗ ಹೊಸ ಆಯಾಮ ಪಡೆದುಕೊಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಣಗಳ ನಡುವೆ...








