ADVERTISEMENT
Saturday, April 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಡಿಜಿಟಲ್ ಮಾಧ್ಯಮಕ್ಕೆ ಶಕ್ತಿ ತುಂಬಿದ ಸಿಎಂ : ರಾಜ್ಯಕ್ಕೆ ಮೊದಲ ಡಿಜಿಟಲ್ ಜಾಹೀರಾತು ನೀತಿ ಜಾರಿ

Karnataka Implements First Digital Advertising Policy

Shwetha by Shwetha
April 29, 2025
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಡಿಜಿಟಲ್ ಮಾಧ್ಯಮಕ್ಕೂ ಸರಕಾರದ ಅಧಿಕೃತ ಜಾಹೀರಾತು ಲಭ್ಯವಾಗುವಂತೆ ‘ಡಿಜಿಟಲ್ ಜಾಹೀರಾತು ನೀತಿ–2024’ ಅನ್ನು ಜಾರಿಗೆ ತರುವ ಮೂಲಕ ಕರ್ನಾಟಕ ಹೊಸ ಇತಿಹಾಸ ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಬೆಂಗಳೂರು ನಗರದಲ್ಲಿ ವಿಶೇಷವಾದ ಡಿಜಿಟಲ್ ಮಾಧ್ಯಮ ಸಮ್ಮೇಳನವನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದ್ದು, ದೇಶ–ವಿದೇಶಗಳ ಡಿಜಿಟಲ್ ಪತ್ರಕರ್ತರನ್ನು ಆಹ್ವಾನಿಸುವ ಚಿಂತನೆಯಿದೆ ಎಂದು ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ (KSDMF) ಅಧ್ಯಕ್ಷ ಬಿ. ಸಮೀವುಲ್ಲಾ ತಿಳಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆಯುತ್ತಿದ್ದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹಾಗೂ ವಾರ್ತಾ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರಿಗೆ ಫೋರಂ ವತಿಯಿಂದ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಮಾತನಾಡಿದ ಅವರು, ಈ ನೀತಿಯ ಜಾರಿಯ ಮೂಲಕ ಡಿಜಿಟಲ್ ಮಾಧ್ಯಮವೂ ಈಗ ಪತ್ರಿಕೋದ್ಯಮದ ಅಧಿಕೃತ ಭಾಗವಾಗಿದೆ. ಬೇರೆ ರಾಜ್ಯಗಳಲ್ಲೂ ನೀತಿ ಇದ್ದರೂ, ನಮ್ಮ ರಾಜ್ಯದಲ್ಲಿನ ನೀತಿ ಹೆಚ್ಚು ಸಮಗ್ರ ಹಾಗೂ ವೃತ್ತಿಪರವಾಗಿದೆ ಎಂದರು.

Related posts

ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು

ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು

April 4, 2026
ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ

ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ

April 4, 2026

ಡಿಜಿಟಲ್ ಮಾಧ್ಯಮಕ್ಕೂ ಮಾನ್ಯತೆ, ಐಡಿ ಕಾರ್ಡ್ ಭರವಸೆ

ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ಈ ನೀತಿಯ ಜಾರಿಗೆ ಮಹತ್ವದ ಪಾತ್ರ ವಹಿಸಿದ್ದು, ಡಿಜಿಟಲ್ ಮಾಧ್ಯಮದ ಗೌರವ ಹೆಚ್ಚಿಸಲು ನಿರಂತರ ಪ್ರಯತ್ನಿಸುತ್ತಿದ್ದಾರೆ. ಮಾಧ್ಯಮ ಅಕಾಡೆಮಿಯ ಮೂಲಕ ಡಿಜಿಟಲ್ ಪತ್ರಕರ್ತರಿಗೆ ಪ್ರಶಸ್ತಿಗೆ ಪರಿಗಣಿಸಲು ಕ್ರಮ, ಮಾಧ್ಯಮ ಮಾನ್ಯತೆ ಅಥವಾ ಐಡಿ ಕಾರ್ಡ್ ನೀಡಲು ವಾರ್ತಾ ಆಯುಕ್ತ ಹೇಮಂತ್ ನಿಂಬಾಳ್ಕರ್ ಜೊತೆ ಚರ್ಚೆ ನಡೆಯಲಿದೆ ಎಂದು ಅವರು ಭರವಸೆ ನೀಡಿದರು.

ಸಿದ್ದರಾಮಯ್ಯ ಸರ್ಕಾರದಿಂದ ಪತ್ರಕರ್ತರಿಗೆ ಅನೇಕ ಯೋಜನೆಗಳು

ಪ್ರಭಾಕರ್ ಅವರು ಮಾತನಾಡುತ್ತಾ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದಾಗಿ ಪತ್ರಕರ್ತರಿಗೆ ಆರೋಗ್ಯ ಸಂಜೀವಿನಿ ಯೋಜನೆ, ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್, ದಿನಪತ್ರಿಕೆ ಹಂಚುವವರಿಗೂ ಸೌಲಭ್ಯಗಳು ಸಿಗುತ್ತಿವೆ. ಡಿಜಿಟಲ್ ಮಾಧ್ಯಮದವರಿಗೂ ಇದೇ ರೀತಿಯ ಸೌಲಭ್ಯಗಳನ್ನು ತರಲು ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಸಮ್ಮೇಳನದತ್ತ ಮುಂದುವರಿದ ಹೆಜ್ಜೆ

ಕೆಎಸ್ ಡಿಎಂಎಫ್ ವತಿಯಿಂದ ಶೀಘ್ರದಲ್ಲೇ ನಡೆಯಲಿರುವ ಡಿಜಿಟಲ್ ಮಾಧ್ಯಮ ಸಮ್ಮೇಳನದಲ್ಲಿ ರಾಷ್ಟ್ರಮಟ್ಟದ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪತ್ರಕರ್ತರನ್ನು ಆಹ್ವಾನಿಸಿ ಡಿಜಿಟಲ್ ಜಾಗತಿಕತೆಯ ಬಗ್ಗೆಯೂ ಚರ್ಚೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಫೋರಂ ಉಪಾಧ್ಯಕ್ಷ ಸುನಿಲ್ ಶಿರಸಿಂಗಿ, ಕಾರ್ಯದರ್ಶಿ ಕೆ.ಎಂ. ಶಿವಕುಮಾರ್, ಖಜಾಂಚಿ ಸನತ್ ಕುಮಾರ್ ರೈ, ಜಂಟಿ ಕಾರ್ಯದರ್ಶಿಗಳಾದ ಮಾಲತೇಶ್ ಅರಸ್, ರಜನಿ ಹಾಗೂ ಹಿರಿಯ ಪತ್ರಕರ್ತರಾದ ಹಮೀದ್ ಪಾಳ್ಯ, ಶಿವಕುಮಾರ್, ವಿಜಯ್ ಭರಮಸಾಗರ, ಮಂಜು ಬಾಣಗೆರೆ, ರವೀಂದ್ರ ಜೋಶಿ ಮುಂತಾದವರು ಭಾಗವಹಿಸಿದ್ದರು.

ShareTweetSendShare
Join us on:

Related Posts

ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು

ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು

by Shwetha
April 4, 2026
0

ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ಯುವ ನಾಯಕ ರಾಘವ್ ಚಡ್ಡಾ ಅವರನ್ನು ದಿಢೀರನೆ...

ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ

ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ

by Shwetha
April 4, 2026
0

ರಾಜ್ಯ ಸರ್ಕಾರದ ಎಸ್ಎಸ್ಎಲ್ ಸಿ ಪರೀಕ್ಷೆಯ ತೃತೀಯ ಭಾಷೆ ನೀತಿಗೆ ಇದೀಗ ಹೊಸ ತಿರುವು ಸಿಕ್ಕಿದೆ. ಹತ್ತನೇ ತರಗತಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ...

ಅಸಮಾಧಾನ ಮರೆತು ದಾವಣಗೆರೆ ಬಾಗಲಕೋಟೆ ಚುನಾವಣಾ ಅಖಾಡಕ್ಕೆ ಧುಮುಕಿದ ಜಮೀರ್ ಅಹ್ಮದ್ ಖಾನ್ ; ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ಜಮೀರ್ ತಂತ್ರ ಶುರು

ಅಸಮಾಧಾನ ಮರೆತು ದಾವಣಗೆರೆ ಬಾಗಲಕೋಟೆ ಚುನಾವಣಾ ಅಖಾಡಕ್ಕೆ ಧುಮುಕಿದ ಜಮೀರ್ ಅಹ್ಮದ್ ಖಾನ್ ; ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ಜಮೀರ್ ತಂತ್ರ ಶುರು

by Shwetha
April 4, 2026
0

ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯ ಕಾವೇರುತ್ತಿರುವ ಹೊತ್ತಿನಲ್ಲೇ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಕಳೆದ ಕೆಲವು ದಿನಗಳಿಂದ ಪ್ರಚಾರ ಕಣದಿಂದ ಅಂತರ ಕಾಯ್ದುಕೊಂಡಿದ್ದ...

ದೇವೇಗೌಡರ ಶ್ರಮದಿಂದ ಅಧಿಕಾರ ಉಂಡು ದ್ರೋಹ ಬಗೆದ್ರಿ:ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ದೇವೇಗೌಡರು ನಮ್ಮನ್ನು ವಸೂಲಿಗೆ ತಂದಿಲ್ಲ ಜನರ ಸೇವೆಗೆ ತಂದಿದ್ದಾರೆ : ಮಗನನ್ನು ರಾಜಕೀಯಕ್ಕೆ ತಂದು ವಸೂಲಿಗಿಳಿದ ಸಿಎಂ ಸಿದ್ದರಾಮಯ್ಯಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ; ಹೆಚ್ ಡಿಕೆ ವಾಗ್ದಾಳಿ

by Shwetha
April 4, 2026
0

ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ, ಭ್ರಷ್ಟಾಚಾರದ ಆರೋಪಗಳ ನಡುವೆಯೇ ಇದೀಗ ಕುಟುಂಬ ರಾಜಕಾರಣದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಜೆಡಿಎಸ್ ವಿರುದ್ಧ ಕುಟುಂಬ ರಾಜಕಾರಣದ ಟೀಕೆ...

ಎಚ್ ಎಸ್ ಆರ್ ಪಿ ಕಡ್ಡಾಯ ಆದೇಶ ದಿಢೀರ್ ವಾಪಸ್ ನಿಯಮ ಪಾಲಿಸಿದ ಪ್ರಾಮಾಣಿಕ ವಾಹನ ಸವಾರರಿಗೆ ಸರ್ಕಾರದ ಉಂಡೆ ನಾಮ ಗ್ಯಾರಂಟಿ ಆಯ್ತು!

ಎಚ್ ಎಸ್ ಆರ್ ಪಿ ಕಡ್ಡಾಯ ಆದೇಶ ದಿಢೀರ್ ವಾಪಸ್ ನಿಯಮ ಪಾಲಿಸಿದ ಪ್ರಾಮಾಣಿಕ ವಾಹನ ಸವಾರರಿಗೆ ಸರ್ಕಾರದ ಉಂಡೆ ನಾಮ ಗ್ಯಾರಂಟಿ ಆಯ್ತು!

by Shwetha
April 4, 2026
0

ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಹಾಗೂ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದ್ದ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಕಡ್ಡಾಯ ಆದೇಶವನ್ನು ರಾಜ್ಯ ಸರ್ಕಾರ ಅಂತಿಮವಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram