ಆಮದಾದ ಸಿಗಡಿ ಪ್ಯಾಕೆಟ್ ನಲ್ಲಿ ಕೊರೊನಾ ವೈರಸ್ !!
ಬೀಜಿಂಗ್, ಜುಲೈ 12: ಚೀನಾದ ಅಧಿಕಾರಿಗಳು ಆಮದು ಮಾಡಿದ ಹೆಪ್ಪುಗಟ್ಟಿದ ಸಿಗಡಿಗಳ ಪ್ಯಾಕೆಟ್ ನಲ್ಲಿ ಕೊರೋನವೈರಸ್ ಅನ್ನು ಪತ್ತೆ ಹಚ್ಚಿದ್ದಾರೆ. ಆದರೆ ಆಹಾರ ಸುರಕ್ಷತಾ ಮುಖ್ಯಸ್ಥರು ಶುಕ್ರವಾರ ಆಹಾರ ಪ್ಯಾಕೇಜಿಂಗ್ ಮೂಲಕ ವೈರಸ್ ಹರಡಬಹುದೆಂದು ಇದರ ಅರ್ಥವಲ್ಲ ಎಂದು ಹೇಳಿದ್ದಾರೆ ಚೀನಾದ ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್ಸ್ ಅಡಿಯಲ್ಲಿ ಆಮದು ಮತ್ತು ರಫ್ತು ಆಹಾರ ಸುರಕ್ಷತಾ ಬ್ಯೂರೋದ ಮಹಾನಿರ್ದೇಶಕ ಬಿ ಕೆಕ್ಸಿನ್, ಬೀಜಿಂಗ್‌ನಲ್ಲಿ ಆಮದು ಮಾಡಿದ ಹೆಪ್ಪುಗಟ್ಟಿದ ಆಹಾರದಿಂದ ತೆಗೆದ ಸುಮಾರು 223,000 ಮಾದರಿಗಳಿಂದ ಆರು ಕೋವಿಡ್ -19 ಸೋಂಕು ಇರುವ ಮಾದರಿಗಳು ಕಂಡುಬಂದಿವೆ ಎಂದು ಹೇಳಿದೆ. ಆದರೆ ಹೆಪ್ಪುಗಟ್ಟಿದ ಸಿಗಡಿ ಮತ್ತು ಒಳ ಪ್ಯಾಕೇಜಿಂಗ್ ಮೇಲಿನ ಪರೀಕ್ಷೆಗಳು ನಕಾರಾತ್ಮಕವಾಗಿವೆ ಎಂದು ಹೇಳಿವೆ.
ಇತ್ತೀಚಿನ ದಿನಗಳಲ್ಲಿ ಬೀಜಿಂಗ್ ನ ಅತಿದೊಡ್ಡ ಸಗಟು ಮಾರುಕಟ್ಟೆಯ ಆಹಾರ ಪದಾರ್ಥಗಳಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆಮದು ಆಹಾರಗಳ ಪರೀಕ್ಷೆಗಳನ್ನು ಚುರುಕುಗೊಳಿಸಲಾಗಿದೆ.

ಅಮದು ಪ್ಯಾಕೇಜಿಂಗ್‌ನಲ್ಲಿ ಕೊರೋನವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಈಕ್ವೆಡಾರ್‌ನ ಮೂರು ಸಿಗಡಿ ಉತ್ಪಾದಕರಿಂದ ಆಮದನ್ನು ಸ್ಥಗಿತಗೊಳಿಸುವುದಾಗಿ ಕಸ್ಟಮ್ಸ್ ಪ್ರಾಧಿಕಾರ ಶುಕ್ರವಾರ ತಿಳಿಸಿದೆ.
ಚೀನಾದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದ್ದು, ಈ ನಡುವೆ ಆಮದು ಮಾಡಿದ ಆಹಾರ ಪದಾರ್ಥಗಳಲ್ಲಿ ಸೋಂಕು ಪತ್ತೆಯಾಗಿದ್ದು, ಈ ಮೂಲಕ ವೈರಸ್ ಹರಡಬಹುದೆಂಬ ಆತಂಕದಿಂದ ಅಧಿಕಾರಿಗಳು ಪರೀಕ್ಷೆಗಳನ್ನು ಚುರುಕುಗೊಳಿಸಿದ್ದಾರೆ.








