ADVERTISEMENT
Wednesday, March 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ತಿರುಪತಿಯಲ್ಲಿ ನಡೆವ ಪ್ರತಿಯೊಂದು ಪೂಜಾ ವಿಧಾನ ಹಾಗೂ ಕಾರ್ಯ ಕ್ರಮಗಳು ಒಂದಲ್ಲ ಒಂದು ತರದಲ್ಲಿ ವಿಶೇಷವಾಗಿರುತ್ತದೆ..!

The Divine Friday Abhishekam of Lord Venkateshwara in Tirupati

Shwetha by Shwetha
May 31, 2025
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ತಿರುಪತಿಯಲ್ಲಿ ನಡೆವ ಪ್ರತಿಯೊಂದು ಪೂಜಾ ವಿಧಾನ ಹಾಗೂ ಕಾರ್ಯ ಕ್ರಮಗಳು ಒಂದಲ್ಲ ಒಂದು ತರದಲ್ಲಿ ವಿಶೇಷವಾಗಿರುತ್ತದೆ..!
ತಿಮ್ಮಪ್ಪನಿಗೆ ಶುಕ್ರವಾರ ಅಭಿಷೇಕ

ತಿರುಪತಿಯಲ್ಲಿ ನಡೆವ ಪ್ರತಿಯೊಂದು ಪೂಜಾ ವಿಧಾನ ಹಾಗೂ ಕಾರ್ಯ ಕ್ರಮಗಳು ಒಂದಲ್ಲ ಒಂದು ತರದಲ್ಲಿ ವಿಶೇಷವಾಗಿರುತ್ತದೆ. ಶ್ರೀಸಾಮಾನ್ಯರಿಗೆ ಎಲ್ಲಾ ವಿಶೇಷಗಳು ತಿಳಿದಿರುವುದಿಲ್ಲ. ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಿ, ಪ್ರಸಾದ ಸೇವಿಸಿ ಬಂದರೆ ಅದರಲ್ಲೇ ಸಾರ್ಥಕ ಭಾವ ದೊರೆತಿರುತ್ತದೆ. ತಿರುಪತಿಯಲ್ಲಿ ನಡೆವ ಹಲವು ವಿಶೇಷಗಳಲ್ಲಿ ಶುಕ್ರವಾರ ಮಾಡುವ ವಿಶೇಷ ಅಭಿಷೇಕ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗುತ್ತದೆ.‌ ಪ್ರತಿ ಶುಕ್ರವಾರ ತಿಮ್ಮಪ್ಪನಿಗೆ ಮಹಾಭಿಷೇಕದ ಸೇವೆ ಮಾಡುವುದು ಎಂದರೆ ಉತ್ಸವದಷ್ಟೇ ಸಂಭ್ರಮದಿಂದ ದಿವ್ಯವಾದ ಅಭಿಷೇಕ ಮಾಡುತ್ತಾರೆ. ಅಭಿಷೇಕದಲ್ಲೇನು ವಿಶೇಷ ಎಂದು ಕೊಂಡರೆ ತಿಳಿಯುವುದು ಬಹಳವಿದೆ. ತಿಮ್ಮಪ್ಪನಿಗೆ ನಿತ್ಯಾಭಿಷೇಕ ಇರುವುದಿಲ್ಲ ವಾರದಲ್ಲಿ ಒಂದೇ ದಿನ ಅಭಿಷೇಕ ಮಾಡುತ್ತಾರೆ ಅದು “ಶುಕ್ರವಾರ”.

Related posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

March 11, 2026
ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

March 11, 2026

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

“ಶುಕ್ರವಾರ”ದ ಅಭಿಷೇಕ ವಿಶೇಷವಾಗಿರುತ್ತದೆ. ಸಾಮಾನ್ಯವಾಗಿ ವಿಷ್ಣುಗೆ ಸಂಬಂಧಪಟ್ಟಎಲ್ಲಾ ದೇವಸ್ಥಾನಗಳಲ್ಲಿ ಲಕ್ಷ್ಮಿ ಸಹಿತ ನಾರಾಯಣ ವಿಗ್ರಹ ನೋಡಿರುತ್ತೇವೆ. ಆದರೆ ತಿರುಪತಿಯಲ್ಲಿ ಲಕ್ಷ್ಮಿಗೆಂದು ಪ್ರತ್ಯೇಕ ದೇವಸ್ಥಾನವಿಲ್ಲ. ಶ್ರೀನಿವಾಸ ಭೂಲೋಕಕ್ಕೆ ಬರುವಾಗ ಅವನ ಪರಿವಾರವಿಲ್ಲದೆ ಏಕಾಂಗಿಯಾಗಿ ತಿರುಮಲದ ದಟ್ಟಾರಣ್ಯಕ್ಕೆ ಬಂದು “ಏಕಬಿಂಬ” ನಾಗಿ ಬೆಟ್ಟದಲ್ಲಿ ನೆಲೆಸಿದ್ದಾನೆ. ಶ್ರೀನಿವಾಸ ಏಕಾಂತ ಪ್ರಿಯ. ಆದರೆ ಶ್ರೀನಿವಾಸನ ವಕ್ಷಸ್ಥಳದಲ್ಲಿ “ವ್ಯೂಹಲಕ್ಷ್ಮಿ”ಯ ವಾಸಸ್ಥಾನವಿದೆ. ಆದಕಾರಣ ಲಕ್ಷ್ಮಿಗೆ ಪ್ರಿಯವಾದ ಶುಕ್ರವಾರದ ದಿನ ಮಂಗಳ ದ್ರವ್ಯ “ಅರಿಶಿನ” ದಿಂದ ಅಭಿಷೇಕ ಮಾಡುತ್ತಾರೆ. ಅಲಂಕಾರ ಪ್ರಿಯನಾದ ಶ್ರೀನಿವಾಸನಿಗೆ ನಿತ್ಯಾಭಿಷೇಕ ಮಾಡುವುದು ಎಂದರೆ, ವಸ್ತ್ರಾಲಂಕಾರ ಗಳನ್ನು ತೆಗೆಯಬೇಕು, ಹಾಗೆ ಪಚ್ಚ ಕರ್ಪೂರ, ತಿರುವಾಭರಣ, ಮುಖಕ್ಕೆ ಹಚ್ಚಿದ ಪುನುಗು ತೈಲ (ಪುನುಗು ಬೆಕ್ಕಿನಿಂದ ಬರುವ ತುಪ್ಪ) ಮತ್ತು ಕ್ರಮವಾಗಿ ಗಂಧ, ಚಂದನ, ಆಭರಣ ಹೀಗೆ ಎಲ್ಲಾ ತೆಗೆದು ಅಭಿಷೇಕ ಮಾಡಿ ವಿಗ್ರಹಕ್ಕೆ ಕರ್ಪೂರದ ಪುಡಿ ಹಚ್ಚಬೇಕು. ಪ್ರತಿನಿತ್ಯ ಶ್ರೀನಿವಾಸನಿಗೆ ಮುಂಜಾನೆ ಯಿಂದ ರಾತ್ರಿ ಮಲಗುವ ತನಕ ವಿವಿಧ ಸೇವೆಗಳು ಮಾಡಬೇಕು. ಇವುಗಳನ್ನೆಲ್ಲ ಮಾಡಲು ಸಮಯ ಬೇಕು ಹಾಗೆ, ಬರುವ ಲಕ್ಷಾಂತರ ಭಕ್ತರಿಗೆ ದರ್ಶನವಾಗಬೇಕು.

ಈ ಎಲ್ಲಾ ಕಾರಣಗಳಿಂದ ಶ್ರೀನಿವಾಸನಿಗೆ “ಶುಕ್ರವಾರ” ಮಾತ್ರ ಪಂಚಾಮೃತ ಮತ್ತು ಅರಿಶಿನದ ಅಭಿಷೇಕ ಮಾಡಿ ಕ್ರಮವಾಗಿ ಕರ್ಪೂರದ ಪುಡಿ, ಗಂಧ- ಚಂದನಗಳ ಲೇಪನ ಮಾಡಿ ಸುವಾಸನಾಭರಿತ ಪುನುಗು ತೈಲ ಮುಖಕ್ಕೆ ಹಚ್ಚುತ್ತಾರೆ ಇದನ್ನು ಹಚ್ಚುವುದರಿಂದ ಶ್ರೀನಿವಾಸನ ಮುಖ ದೀಪದ ಬೆಳಕಿನಲ್ಲಿ ಮಿರಿ ಮಿರಿ ಮಿಂಚುತ್ತದೆ. ( ಪುನುಗು ಜಾತಿಯ ಬೆಕ್ಕಿನ ಬೆನ್ನಿನ ಭಾಗದಿಂದ ಬರುವ ಸುಗಂಧ ಭರಿತ ತುಪ್ಪ) ನಂತರ ವಸ್ತ್ರ ಆಭರಣಗಳು, ಇಷ್ಟೆಲ್ಲಾ ಮಾಡಲು ದಿನದ ಅರ್ಧ ದಿನವೇ ಬೇಕಾಗುತ್ತದೆ ಆದ್ದರಿಂದ ಶುಕ್ರವಾರ ಮಾತ್ರ ಅಭಿಷೇಕ ಮಾಡುತ್ತಾರೆ.

ಅಭಿಷೇಕ:-
ಏಕಶಿಲಾ ಶ್ರೀನಿವಾಸನ ವಿಗ್ರಹಕ್ಕೆ ಬೆಳಗಿನ ಜಾವ ನಾಲ್ಕರಿಂದ ಐದು ಗಂಟೆಗೆ ಅಭಿಷೇಕ ಮಾಡುತ್ತಾರೆ. ಅರಿಶಿನದ ಅಭಿಷೇಕ ಮಾಡುವುದು ವಿಶೇಷ. ಶುದ್ಧೋದಕ ನಂತರ ಕರ್ಪೂರದ ಪುಡಿಯನ್ನು ವಿಗ್ರಹಕ್ಕೆ ಲೇಪಿಸುತ್ತಾರೆ. ಕಣ್ಣಿಗೆ ಕಾಡಿಗೆ, ಹಣೆಗೆ ತಿಲಕ, ನಂತರ ಅಡಿ ಯಿಂದ ಮುಡಿವರೆಗೆ ವಸ್ತ್ರಾಭರಣದ ಅಲಂಕಾರ ಇದೆಲ್ಲ ಒಂದು ಕ್ರಮದಲ್ಲಿ ಹಾಕುತ್ತಾರೆ. ಮೊದಲು ನಡುವಿಗೆ ಒಡ್ಯಾಣ, ನಾಗಾಭರಣ, ದಶಾವತಾರ ವಡ್ಯಾನ, ಸೂರ್ಯ ಕಠಾರಿ, ಪಗಡಿ, ಸಾಲಿಗ್ರಾಮ, ವಸ್ತ್ರಗಳಲ್ಲಿ ಜರಿಯ ಪಿತಾಂಬರ, ಉತ್ತರಿಯ, ಶಂಕ, ಚಕ್ರ ಕವಚ, ನವರತ್ನ ಖಚಿತ ಮತ್ತು ವಜ್ರಾಭರಣ ಹಾರ ಪದಕಗಳು, ಅಕ್ಷಯ ಹಾರ, ಲಕ್ಷ್ಮಿ ಹಾರ, ಚತುರ್ಭುಜ ಹಾರ, ತುಳಸಿಹಾರ, ಕರ್ಣಾಭರಣ, ಪಾದಗಳಿಗೆ ಚಿನ್ನದ ಪಾದುಕಿ, ಮುಡಿಗೆ ರತ್ನ ಕಚಿತ ಕಿರೀಟ, ಎದೆಯ ಭಾಗದಲ್ಲಿ ಶ್ರೀ ರಾಮಾನುಜಾಚಾರ್ಯರು ಒತ್ತಿ ಅಂಟಿಸಿದ ಬಂಗಾರದ ಲಕ್ಷ್ಮಿ ಪದಕ. ಸರ್ವಾಲಂಕಾರ ಭೂಷಿತ ನವನೀತ ಜೋರನಿಗೆ ಬೆಣ್ಣೆಯನ್ನು ನೈವೇದ್ಯ ಮಾಡಿ ಕರ್ಪೂರದ ಆರತಿ ಮಾಡುತ್ತಾರೆ. ನಂತರ “ಪಾದ ದರ್ಶನ” ಸೇವೆ ಇದನ್ನು “ಸರ್ವ ಸಮರ್ಪಣೆ” ಎಂದು ಕರೆಯುತ್ತಾರೆ.

ಶ್ರೀನಿವಾಸನ ಅಲಂಕಾರಗಳು:-
“ಕಸ್ತೂರಿ ತಿಲಕಂ ಲಲಾಟಫಲಕೆ ವಕ್ಷಸ್ಥಲೇ ಕೌಸ್ತುಭಂ ನಾಸಾಗ್ರೇ ನವಮೌಕ್ತಿಕಂ ಕರತಲೇ ವೇಣುಂ ಕರೆ ಕಂಕಣಂ! ಸರ್ವಾಂಗೇ ಹರಿ ಚಂದನಂ ಚ ಕಲಯನ್ ಕಂಠೇ ಚ ಮುಕ್ತಾವಲೀಂ ಗೋಪಸ್ತ್ರೀಪರಿವೇಷ್ಟಿತೋ ವಿಜಯತೇ ಗೋಪಾಲಚೂಡಾ ಮಣಿ:!!

ಹಣೆಯಲ್ಲಿ ಕಸ್ತೂರಿಯ ತಿಲಕ, ಎದೆಯಲ್ಲಿ ಕೌಸ್ತುಭ ಮಣಿ, ಮೂಗಿನ ಮೇಲೆ ಮುತ್ತಿನ ಮೂಗುತಿ, ಅಂಗೈಯಲ್ಲಿ ಕೊಳಲು, ಕೈಯಲ್ಲಿ ಕಂಕಣ, ಶರೀರದಲ್ಲೆಲ್ಲ ಶ್ರೀಗಂಧ, ಕತ್ತಿನಲ್ಲಿ ಮುತ್ತಿನ ಹಾರ, ಇವುಗಳನ್ನು ಧರಿಸಿ ಗೋಪಿಯರೊಡನೆ ಪುರುಷೋತ್ತಮ ಗೋಪಾಲನು ಶೋಭಿಸುತ್ತಿದ್ದಾನೆ. ಶ್ರೀನಿವಾಸನಿಗೆ ಮಾಡಿದ ಅದ್ದೂರಿಯ ಅಲಂಕಾರದ ನಂತರ ಅರ್ಚನೆ, ತೋಮಾಲೆ, ಅಷ್ಟೋತ್ತರ, ಧೂಪ ದೀಪ ನೈವೇದ್ಯ, ವಿವಿಧ ಆರತಿ ಮಾಡುತ್ತಿದ್ದರೆ ಆ ಬೆಳಕಿನಲ್ಲಿ ಶ್ರೀ ಲಕ್ಷ್ಮಿ ಶ್ರೀನಿವಾಸನನ್ನು ನೋಡಲು ಕಣ್ಣೆರಡು ಸಾಲದು. ತಿರುಪತಿಯಲ್ಲಿ ಶ್ರೀನಿವಾಸನಿಗೆ ಸಲ್ಲಿಸುವ ಹಲವಾರು ವಿಶೇಷವಾದ ಸೇವೆಗಳಲ್ಲಿ ವ್ಯೂಹ ಲಕ್ಷ್ಮಿ ಸಮೇತ ಶ್ರೀನಿವಾಸನಿಗೆ ಮಾಡುವ ಶುಕ್ರವಾರದ ಅರಿಶಿನದ ಅಭಿಷೇಕ ಮಾಡುವುದು ವಿಶೇಷವಾದ ಸೇವೆಯಾಗಿದ್ದು ನೋಡಿದ ಭಕ್ತರ ಕಣ್ಮನ ತುಂಬಿ ಬರುತ್ತದೆ.

ಲಕ್ಷ್ಮಿ ಸ್ತುತಿ:-
ಲಕ್ಷ್ಮೀಂ ಕ್ಷೀರಸಮುದ್ರ ರಾಜತನಯಂ ಶ್ರೀರಂಗಧಾಮೇಶ್ವರೀಂ!
ದಾಸೀಭೂತ ಸಮಸ್ತ ದೇವವನಿತಾಂ ಲೋಕೈಕ ದೀಪಾಂಕುರಾಮ್!
ಶ್ರೀಮನ್ಮಂದ ಕಟಾಕ್ಷ ಲಬ್ಧ ವಿಭವ ಬ್ರಹ್ಮೇಂದ್ರ ಗಂಗಾಧರಾಂ
ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ
ಮುಕುಂದಪ್ರಿಯಾಮ್ !!

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564

ShareTweetSendShare
Join us on:

Related Posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

by Shwetha
March 11, 2026
0

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಅಥವಾ ವಿದೇಶಿ ಗಣ್ಯರು ಭಾರತಕ್ಕೆ...

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

by Shwetha
March 11, 2026
0

ಕುಟುಂಬದ ಆಸ್ತಿ ವಿವಾದಗಳನ್ನು ಬಗೆಹರಿಸಲು, ಪಿಂಚಣಿ ಸೌಲಭ್ಯ ಪಡೆಯಲು ಹಾಗೂ ಸರ್ಕಾರಿ ಕೆಲಸಗಳಲ್ಲಿ ವಾರಸುದಾರಿಕೆಯನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಲು ವಂಶವೃಕ್ಷ ಅಥವಾ ವಂಶಾವಳಿ ಪ್ರಮಾಣಪತ್ರ ಅತ್ಯಂತ ಪ್ರಮುಖ ಹಾಗೂ...

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

by Shwetha
March 11, 2026
0

ಕಲಬುರಗಿ: ಗ್ರಾಮೀಣ ಭಾಗಗಳಲ್ಲಿ ಮುಗ್ಧ ಹಾಗೂ ಬಡ ಜನರನ್ನು ಗುರಿಯಾಗಿಸಿಕೊಂಡು ಸದ್ದಿಲ್ಲದೆ ನಡೆಯುತ್ತಿದ್ದ ವ್ಯವಸ್ಥಿತ ಮತಾಂತರದ ಜಾಲವೊಂದನ್ನು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ದಿಟ್ಟತನದಿಂದ ಬಯಲಿಗೆಳೆದಿದ್ದಾರೆ. ಕಲಬುರಗಿ...

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

by Shwetha
March 11, 2026
0

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ, ತಳಮಟ್ಟದಲ್ಲಿ ಪೂರೈಕೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ರಾಷ್ಟ್ರೀಯ ರೆಸ್ಟೋರೆಂಟ್...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

by Shwetha
March 11, 2026
0

ದೇಶದ ಶಾಲೆಗಳ ಪಠ್ಯಪುಸ್ತಕಗಳನ್ನು ಪ್ರಕಟಿಸುವ NCERT ವಿವಾದದ ನಡುವೆಯೇ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿವಾದಿತ ಅಧ್ಯಾಯವನ್ನು ಮಾತ್ರವಲ್ಲದೆ, ಇಡೀ ಪುಸ್ತಕವನ್ನೇ ಹಿಂಪಡೆಯಲು ಸಂಸ್ಥೆ ಮುಂದಾಗಿದೆ. ಈ ಬಾರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram