ADVERTISEMENT
Thursday, July 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನಾಕೌಟ್ ಪಂದ್ಯಗಳ ಸೂಪರ್ ಮ್ಯಾನ್ ಶ್ರೇಯಸ್ ಅಯ್ಯರ್..!

Knockout Superman – Shreyas Iyer

Shwetha by Shwetha
June 2, 2025
in Newsbeat, Sports, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

ನಾಕೌಟ್ ಪಂದ್ಯಗಳ ಸೂಪರ್ ಮ್ಯಾನ್ ಶ್ರೇಯಸ್ ಅಯ್ಯರ್..!

ಶ್ರೇಯಸ್ ಅಯ್ಯರ್ …ಬಿಗ್ ಮ್ಯಾಚ್ ಪ್ಲೇಯರ್..ಇದರಲ್ಲಿ ಯಾವುದೇ ಸಂದೇಹ ಇಲ್ಲ. ಯಾಕಂದ್ರೆ ಅಯ್ಯರ್ ಅಂಕಿ ಅಂಶಗಳು ಸುಳ್ಳು ಹೇಳುತ್ತಿಲ್ಲ. ಅದು ಟಿ-20 ಕ್ರಿಕೆಟ್ ಆಗಿರಲಿ.. ಏಕದಿನ ಕ್ರಿಕೆಟ್ ಆಗಿರಲಿ.. ದೇಸಿ ಟೂರ್ನಿಗಳೇ ಆಗಿರಲಿ..ತಂಡಕ್ಕೆ ಆಪತ್ಭಾಂದವನಾಗಿದ್ದು ಶ್ರೇಯಸ್ ಅಯ್ಯರ್.
ಹೌದು, ಶ್ರೇಯಸ್ ಅಯ್ಯರ್ ಬ್ಯಾಟ್ ಸೌಂಡ್ ಮಾಡಿದಷ್ಟು ಆತನ ಹೆಸರು ಕ್ರಿಕೆಟ್ ಪ್ರೇಮಿಗಳ ಬಾಯಲ್ಲಿ ನಲಿದಾಡಲಿಲ್ಲ..ಆತನ ಬ್ಯಾಟಿಂಗ್ ವೈಖರಿ ಕೇವಲ ಮೈದಾನಕ್ಕೆ ಸೀಮಿತವಾಗಿತ್ತು. ಪಂದ್ಯ ಗೆದ್ದಾಗ ಸೂಪರ್ ಆಗಿ ಅಯ್ಯರ್ ಆಡಿದ್ದ ಎಂಬುದನ್ನು ಬಿಟ್ರೆ ಬೇರೆ ಯಾವ ಕ್ರೆಡಿಟ್ ಆತನಿಗೆ ಸಿಗಲಿಲ್ಲ.
ಅದಕ್ಕೆ ಬಲವಾದ ಕಾರಣವೂ ಇದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾನ ಝೇಂಕಾರದ ಸದ್ದಿಗೆ ಅಯ್ಯರ್ ಹೆಸರು ಯಾರಿಗೂ ಕೇಳಲಿಲ್ಲ. ಕೇಳಬೇಕಾದವರೂ ಕೇಳಿಸಿಕೊಳ್ಳಲಿಲ್ಲ. ಹಾಗಂತ ಅಯ್ಯರ್ ಇದರ ಬಗ್ಗೆ ತಲೆಕೆಡಿಸಿಕೊಂಡು ಕೂರಲಿಲ್ಲ. ನನಗೂ ಟೈಮ್ ಬರುತ್ತೆ ಅಂತ ಕ್ರಿಕೆಟ್ ಆಟದತ್ತ ಇನ್ನೂ ಹೆಚ್ಚಿನ ಗಮನಹರಿಸಿದ್ದ. ಈ ನಡುವೆ ತನ್ನ ಹೆಸರಿನೊಂದಿಗೆ ಗಾಸಿಪ್, ವಿವಾದಗಳೂ ಸುತ್ತಿಕೊಂಡಾಗಲೂ ಕ್ಯಾರೇ ಮಾಡಲಿಲ್ಲ. ಬದಲಾಗಿ ಅಯ್ಯರ್ ತನ್ನತನವನ್ನು ಬೆಳೆಸಿಕೊಳ್ಳಲು ಮುಂದಾದ. ಮುಖ್ಯವಾಗಿ ತನ್ನ ಬಾಡಿ ಲಾಂಗ್ವೇಜ್ ಅನ್ನು ಸಂಪೂರ್ಣವಾಗಿ ಚೇಂಜ್ ಮಾಡಿಕೊಂಡ.. ಮೈದಾನದಲ್ಲಿ ಹಾವಭಾವಗಳನ್ನೂ ಬದಲಾಯಿಸಿಕೊಂಡ.. ಬ್ಯಾಟಿಂಗ್ ಶೈಲಿಯಲ್ಲೂ ಸುಧಾರಣೆ ಮಾಡಿಕೊಂಡ.. ಸದಾ ಸೀದ ಹುಡುಗರಂತೆ ಕ್ರೀಸ್‍ಗೆ ಬರುತ್ತಿದ್ದ ಅಯ್ಯರ್ ಈಗ ಎದೆ ಉಬ್ಬಿಸಿಕೊಂಡು ಬಂದು ಆಡುತ್ತಿದ್ದಾನೆ. ಮಾತಿನ ಶೈಲಿಯನ್ನು ಬದಲಾಯಿಸಿಕೊಂಡಿದ್ದಾನೆ. ಸದ್ಯ ಶ್ರೇಯಸ್ ಅಯ್ಯರ್‍ನ ಹೊಸ ಅವತಾರವನ್ನು ನೋಡುತ್ತಿದ್ದೇವೆ.
ಹೀಗಾಗಿ ಅಯ್ಯರ್ ಹೆಸರು ಈಗ ಚಾಲ್ತಿಗೆ ಬಂದಿದೆ. ಐಪಿಎಲ್‍ನ ಈ ಸೀಸನ್‍ನಲ್ಲಿ ಸದ್ದು ಗಿದ್ದು ಮಾಡಿದವರು ಈಗ ಎಲ್ಲಾ ಮನೆ ಸೇರಿಕೊಂಡಿದ್ದಾರೆ. ಆದ್ರೆ ಸೈಲೆಂಟ್ ಆಗಿಯೇ ತಂಡವನ್ನು ಮುನ್ನಡೆಸಿಕೊಂಡು ಫೈನಲ್ ತಲುಪಿರುವ ಶ್ರೇಯಸ್ ಅಯ್ಯರ್‍ನÀ ಈ ಹಿಂದಿನ ಸಾಧನೆಗಳು ಮತ್ತೆ ಜೋರಾಗಿ ಮುನ್ನಲೆಗೆ ಬರುತ್ತಿವೆ.
ಹೌದು, ಶ್ರೇಯಸ್ ಅಯ್ಯರ್‍ಗೆ ಈಗ ನಾಕೌಟ್ ಸ್ಟಾರ್ ಎಂಬ ಬಿರುದು ತಾನಾಗಿಯೇ ಒಲಿದು ಬಂದಿದೆ. ಇಲ್ಲಿಯವರೆಗೆ ರಾಜ್ಯ ಹಾಗೂ ಐಪಿಎಲ್‍ನಲ್ಲಿ ಅಯ್ಯರ್ 17 ಟಿ-20 ನಾಕೌಟ್ ಪಂದ್ಯಗಳನ್ನು ಆಡಿದ್ದಾನೆ. 145ರ ಸ್ಟ್ರೈಕ್‍ರೇಟ್‍ನÀಲ್ಲಿ 517 ರನ್ ಕಲೆ ಹಾಕಿದ್ದಾನೆ. ನಾಲ್ಕು ಅರ್ಧಶತಕಗಳನ್ನು ಸಿಡಿಸಿದ್ದಾನೆ.
ಹಾಗೇ ಐಪಿಎಲ್‍ನ 11 ಪ್ಲೇ ಆಫ್ ಇನಿಂಗ್ಸ್‍ಗಳಲ್ಲಿ 51ರ ಸರಾಸರಿ ಹಾಗೂ 143ರ ಸ್ಟ್ರೈಕ್ ರೇಟ್‍ನಲ್ಲಿ 303 ರನ್ ದಾಖಲಿಸಿದ್ದಾನೆ. ಇದರಲ್ಲಿ ಮೂರು ಅರ್ಧಶತಕಗಳಿವೆ.
ಒಟ್ಟಾರೆ 21 ನಾಕೌಟ್ ಪಂದ್ಯಗಳನ್ನು ಆಡಿರುವ ಅಯ್ಯರ್ 45ರ ಸರಾಸರಿಯಲ್ಲಿ 719 ರನ್ ದಾಖಲಿಸಿದ್ದಾನೆ. ಐದು ಬಾರಿ ಅಜೇಯರಾಗಿ ಉಳಿದಿದ್ದು, ಒಂದು ಶತಕ ಹಾಗೂ ನಾಲ್ಕು ಅರ್ಧಶತಗಳು ಶ್ರೇಯಸ್ ಬ್ಯಾಟ್‍ನಿಂದ ಹೊರಹೊಮ್ಮಿವೆ.
ಇನ್ನು ಅಯ್ಯರ್ ನಾಕೌಟ್ ಪಂದ್ಯಗಳಲ್ಲಿ ಕೆಲವೊಂದು ಮಹೋನ್ನತ ಇನಿಂಗ್ಸ್‍ಗಳನ್ನು ಆಡಿದ್ದಾನೆ. 2025ರ ಐಪಿಎಲ್‍ನ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಜೇಯ 87 ರನ್ ಸಿಡಿಸಿರುವುದು ಸದಾ ನೆನಪಿನಲ್ಲಿಟ್ಟುಕೊಳ್ಳುವ ಇನಿಂಗ್ಸ್ ಆಗಿದೆ.
ಹಾಗೇ 2024ರ ಐಪಿಎಲ್ ಫೈನಲ್‍ನಲ್ಲಿ ಕೆಕೆಆರ್ ತಂಡದ ನಾಯಕನಾಗಿ ಎಸ್‍ಆರ್‍ಎಚ್ ವಿರುದ್ಧ 24 ಎಸೆತಗಳಲ್ಲಿ 58 ರನ್ ಗಳಿಸಿ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿರುವುದು ಸ್ಮರಣೀಯ ಇನಿಂಗ್ಸ್ ಆಗಿದೆ.
ಇನ್ನು 2020ರ ಐಪಿಎಲ್ ಫೈನಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ, ಮುಂಬೈ ಇಂಡಿಯನ್ಸ್ ವಿರುದ್ಧ ಆಕರ್ಷಕ 65 ರನ್ ದಾಖಲಿಸಿದ್ರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ಕಾಡುತ್ತಿತ್ತು. ಆದ್ರೆ ಐಪಿಎಲ್‍ನಲ್ಲಿ ಮೂರು ಫ್ರಾಂಚೈಸಿಗಳ ನಾಯಕನಾಗಿ ಮೂರು ಬಾರಿ ಫೈನಲ್ ಪ್ರವೇಶಿಸಿ ಅಪರೂಪದ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ.
ಇದು ಐಪಿಎಲ್ ಸಾಧನೆಯಾದ್ರೆ, ಮುಸ್ತಾಕ್ ಆಲಿ ಟ್ರೋಫಿಯ ಸೆಮಿಫೈನಲ್‍ನಲ್ಲಿ ಸೌರಾಷ್ಟ್ರದ ವಿರುದ್ಧ ಮುಂಬೈ ನಾಯಕನಾಗಿ 77 ರನ್ ಸಿಡಿಸಿ ತಂಡವನ್ನು ಫೈನಲ್ ಪ್ರವೇಶಿಸುವಂತೆ ಮಾಡಿದ್ದ ಅಯ್ಯರ್, ಫೈನಲ್‍ನಲ್ಲೂ ಹಿಮಾಚಲ ಪ್ರದೇಶ ವಿರುದ್ಧ ಅದ್ಭುತ ಆಟವನ್ನಾಡಿ ಪ್ರಶಸ್ತಿ ಕೂಡ ಗೆದ್ದುಕೊಂಡಿದ್ದ. ಈ ಎಲ್ಲಾ ಇನಿಂಗ್ಸ್‍ಗಳ ವಿಶೇಷತೆ ಏನು ಅಂದ್ರೆ, ಸಂಕಷ್ಟದಲ್ಲಿದ್ದ ತಂಡಕ್ಕೆ ಚೇತರಿಕೆ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿರುವುದು ಶ್ರೇಯಸ್ ಅಯ್ಯರ್‍ನ ಬ್ಯಾಟ್ ಎಂಬುದು.
ಅಷ್ಟೇ ಯಾಕೆ, ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ ಪರ ಆಡಿಯೂ ಹಲವು ರೋಚಕ ಗೆಲುವುಗಳನ್ನು ತಂದುಕೊಟ್ಟಿದ್ದಾನೆ. ಮಧ್ಯಮ ಕ್ರಮಾಂಕ ಕುಸಿದು ಬಿದ್ದಾಗ ಕ್ರೀಸ್‍ನಲ್ಲಿ ಗಟ್ಟಿಯಾಗಿ ನಿಂತು ಅದ್ಭುತ ಇನಿಂಗ್ಸ್‍ಗಳನ್ನು ಕಟ್ಟಿದ್ದಾನೆ.
2023ರ ಏಕದಿನ ವಿಶ್ವಕಪ್ ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ವೇಗದ ಶತಕ ಸಿಡಿಸಿದ ದಾಖಲೆ ಬರೆದಿದ್ದ. ಆದ್ರೆ ವಿರಾಟ್ ಕೊಹ್ಲಿಯ 50ನೇ ಏಕದಿನ ಶತಕದ ಮುಂದೆ ಅಯ್ಯರ್ ಶತಕ ಹೆಚ್ಚು ಸೌಂಡ್ ಮಾಡಲಿಲ್ಲ.
ಹಾಗೇ 2025ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಇನಿಂಗ್ಸ್ ಆಡಿ ತಂಡದ ಗೆಲುವಿಗೆ ಕಾರಣನಾಗಿದ್ದ. ಅದೇ ರೀತಿ ಫೈನಲ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೂಡ ಸಮಯೋಚಿತ ಆಟವನ್ನಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ.
ಹೀಗೆ ಶ್ರೇಯಸ್ ಅಯ್ಯರ್ ಸೈಲೆಂಟ್ ಕಿಲ್ಲರ್ ಆಗಿ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾನೆ. ಆದ್ರೂ ಅಯ್ಯರ್‍ಗೆ ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗದಿರುವುದು ಅಚ್ಚರಿಗೆ ಕಾರಣವಾಗಿದೆ. ಆದ್ರೆ ಏಕದಿನ ತಂಡಕ್ಕೆ ಅಯ್ಯರ್ ಫಿಕ್ಸ್ ಎಂಬುದರಲ್ಲಿ ಎರಡು ಮಾತಿಲ್ಲ. ಆದ್ರೂ ನಾಕೌಟ್ ಸ್ಟಾರ್ ಆಗಿರುವ ಅಯ್ಯರ್‍ಗೆ ಈ ರೀತಿ ಅನ್ಯಾಯ ಆಗಬಾರದಿತ್ತು. ಎಲ್ಲದಕ್ಕೂ ಕಾಲ ಬರುತ್ತೆ.. ನೋಡೋಣ ಮುಂದೆ..!

Related posts

bhagavad-gita-life-lessons-kannada-motivation

Astro- ಜೀವನದಲ್ಲಿ ಭರವಸೆಯ ನಂಬಿಕೆ ಕಳೆದುಕೊಂಡಾಗ ಧೈರ್ಯ ತುಂಬುವ ಭಗವದ್ಗೀತೆಯ 5 ಅಮೂಲ್ಯ ಮಾತುಗಳು..!

July 29, 2026
sathyanarayana-para-athletics-coach-success-story

ಅಂದು ಹೂ ಮಾರುತ್ತಿದ್ದ ಕೈಗಳಿಂದ ಇಂದು ಭಾರತಾಂಬೆಯ ಕೊರಳಿಗೆ ಪದಕಗಳ ಹಾರ..! ವಿಶೇಷ ಚೇತನ ಕ್ರೀಡಾಪಟುಗಳ ಬದುಕಿಗೆ ಬೆಳಕಾದ ” ಸತ್ಯ ” ಸಾಧನೆಯ ಯಶೋಗಾಥೆ..!

July 29, 2026

ಸನತ್ ರೈ

ShareTweetSendShare
Join us on:

Related Posts

bhagavad-gita-life-lessons-kannada-motivation

Astro- ಜೀವನದಲ್ಲಿ ಭರವಸೆಯ ನಂಬಿಕೆ ಕಳೆದುಕೊಂಡಾಗ ಧೈರ್ಯ ತುಂಬುವ ಭಗವದ್ಗೀತೆಯ 5 ಅಮೂಲ್ಯ ಮಾತುಗಳು..!

by admin
July 29, 2026
0

ಪ್ರತಿಯೊಬ್ಬರ ನಿಜ ಜೀವನದ ಬದುಕಿನಲ್ಲೂ ಎಲ್ಲವನ್ನೂ ಕಳೆದುಕೊಂಡಂತೆ ಭಾಸವಾಗುವ ಒಂದು ಕ್ಷಣ ಬಂದೇ ಬರುತ್ತದೆ. ದುಃಖಗಳು ಅಂತ್ಯವಿಲ್ಲದಂತೆ ಕಾಣುತ್ತವೆ ಮತ್ತು ತೊಂದರೆಗಳು ಒಂದರ ನಂತರ ಒಂದರಂತೆ ಬರುತ್ತಲೇ...

sathyanarayana-para-athletics-coach-success-story

ಅಂದು ಹೂ ಮಾರುತ್ತಿದ್ದ ಕೈಗಳಿಂದ ಇಂದು ಭಾರತಾಂಬೆಯ ಕೊರಳಿಗೆ ಪದಕಗಳ ಹಾರ..! ವಿಶೇಷ ಚೇತನ ಕ್ರೀಡಾಪಟುಗಳ ಬದುಕಿಗೆ ಬೆಳಕಾದ ” ಸತ್ಯ ” ಸಾಧನೆಯ ಯಶೋಗಾಥೆ..!

by admin
July 29, 2026
0

ಅಂದು ಹೂ ಮಾರುತ್ತಿದ್ದ ಕೈಗಳಿಂದ ಇಂದು ಭಾರತಾಂಬೆಯ ಕೊರಳಿಗೆ ಪದಕಗಳ ಹಾರ..! ವಿಶೇಷ ಚೇತನ ಕ್ರೀಡಾಪಟುಗಳ ಬದುಕಿಗೆ ಬೆಳಕಾದ " ಸತ್ಯ " ಸಾಧನೆಯ ಯಶೋಗಾಥೆ..! ಸರಿ...

saransh-jain-test-call-up-india-srilanka-2026

Teamindia- ತಂದೆಯ ಕನಸನ್ನು ನನಸು ಮಾಡಿರುವ 33ರ ಹರೆಯದ ಸರನ್ಶ್..!

by admin
July 29, 2026
0

"ನೀನು ಇನ್ನೂ ಚೆನ್ನಾಗಿ ಆಡಿದ್ರೆ ನಾನು ಬೇಗ ಗುಣಮುಖನಾಗುತ್ತೇನೆ". ಇದು ಕ್ಯಾನ್ಸರ್‍ನಿಂದ ಬಳಲುತ್ತಿದ್ದ ತಂದೆ ತನ್ನ ಮಗನಿಗೆ ಬರೆದಿರುವ ಕೈಪಿಡಿಯ ಬರಹ. ತಂದೆಯ ಆಸೆಯಂತೆ ಮಗ ಇಂದು...

2ನೇ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಇರಬಹುದು: ಜಮೀರ್ ಖಾನ್

2ನೇ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಇರಬಹುದು: ಜಮೀರ್ ಖಾನ್

by Shwetha
July 29, 2026
0

ಮಾಜಿ ಸಚಿವ ಜಮೀರ್ ಖಾನ್ ಅವರು, ಸಚಿವ ಸಂಪುಟ ವಿಸ್ತರಣೆಯ ಎರಡನೇ ಪಟ್ಟಿಯಲ್ಲಿ ತಮ್ಮ ಹೆಸರು ಇರಬಹುದು ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲ...

ಇದು ನೇರ ಚಾರಿತ್ರ್ಯ ವಧೆ: ಪ್ರಲ್ಹಾದ್ ಜೋಶಿ ವಿರುದ್ಧ ಸುಳ್ಳು ಹೇಳಿಕೆ ನೀಡಿದ ಪ್ರಿಯಾಂಕಾ ಗಾಂಧಿ- ಕ್ಷಮೆಯಾಚನೆಗೆ ಪಟ್ಟು ಹಿಡಿದ ಪ್ರಲ್ಹಾದ್ ಜೋಶಿ

ಇದು ನೇರ ಚಾರಿತ್ರ್ಯ ವಧೆ: ಪ್ರಲ್ಹಾದ್ ಜೋಶಿ ವಿರುದ್ಧ ಸುಳ್ಳು ಹೇಳಿಕೆ ನೀಡಿದ ಪ್ರಿಯಾಂಕಾ ಗಾಂಧಿ- ಕ್ಷಮೆಯಾಚನೆಗೆ ಪಟ್ಟು ಹಿಡಿದ ಪ್ರಲ್ಹಾದ್ ಜೋಶಿ

by Shwetha
July 29, 2026
0

ನವದೆಹಲಿ: ಲೋಕಸಭಾ ಅಧಿವೇಶನದಲ್ಲಿ ನಿನ್ನೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರ ನಡೆದಿದೆ. ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಕಾಂಗ್ರೆಸ್ ಸಂಸದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram