ಬೆಂಗಳೂರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕಮಲ್ ಹಾಸನ್ ಬಗ್ಗೆ ನಮ್ಮ ಕಡೆಯಿಂದ ಯಾವುದೇ ಮೃದು ಧೋರಣೆ ಇರುವುದಿಲ್ಲ, ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಡಿಕೆಶಿ ಅವರು ದೇಶದಲ್ಲಿ ಭಾಷೆ, ಜಾತಿ ಮತ್ತು ರಾಜ್ಯಗಳ ನಡುವೆ ಜಗಳಗಳು ಉಂಟಾಗಬಾರದು ಎಂಬ ಭಾವನೆ ವ್ಯಕ್ತಪಡಿಸಿದರು. ಯಾವುದೊ ಒಂದು ರೂಪಕ್ಕೆ ತಿರುಗಿದರೆ ಯಾರು ಹೊಣೆ ? ಸಣ್ಣ ಸಣ್ಣ ವಿಷಯಗಳಲ್ಲಿ ಅವರು ತಪ್ಪು ಮಾಡಿದ್ದಾರೆ. ಕ್ಷಮೆ ಕೇಳುವ ಮನೋಭಾವ ಅತ್ಯಂತ ಮುಖ್ಯ, ಎಂದು ಹೇಳಿದರು.
ನಮ್ಮ ರಾಜ್ಯದ ಅಭಿವೃದ್ಧಿ ಮತ್ತು ಸಮೃದ್ದಿಗಾಗಿ ಎಲ್ಲರೂ ಮಿತಿಯಲ್ಲಿ ಇರಬೇಕು ಎಂದು ಉಪಮುಖ್ಯಮಂತ್ರಿ ಹೇಳಿದರು. ಅವರು ಮುಂದುವರೆದು, ನಾವು ಎಲ್ಲರೂ ದ್ರಾವಿಡ ಭಾಗಕ್ಕೆ ಸೇರಿದವರು. ನಮ್ಮ ಮಾತುಗಳಲ್ಲಿ ಕೆಲವೊಮ್ಮೆ ತೆಲುಗು, ತಮಿಳು ಭಾಷೆಗಳ ಅಕ್ಷರಗಳು ಬರುತ್ತವೆ. ಅದರಲ್ಲಿ ಏನೂ ತಪ್ಪಿಲ್ಲ. ಒಟ್ಟಾರೆ ನಾವು ಒಗ್ಗಟ್ಟಿನಲ್ಲಿ ನಿಂತರೆ ಮಾತ್ರ ರಾಜ್ಯ ಬೆಳೆದೀತು, ಎಂದರು.
ಈ ಸಂದರ್ಭದಲ್ಲಿ ಎಲ್ಲ ಪಕ್ಷಗಳು, ಸಮಾಜದ ಎಲ್ಲಾ ವರ್ಗಗಳು ಪರಸ್ಪರ ಗೌರವ ಮತ್ತು ಸಹಿಷ್ಣುತೆಯಿಂದ ನಡೆದುಕೊಂಡರೆ ಮಾತ್ರ ನಮ್ಮ ರಾಜ್ಯ ಮತ್ತು ದೇಶದ ಒಗ್ಗಟ್ಟು ಬಲಪಡಲಿದೆ ಎಂದು ತಿಳಿಸಿದರು.








