ಜೂನ್ ತಿಂಗಳಲ್ಲಿ ಮುಸ್ಲಿಮರ ಪ್ರಮುಖ ಹಬ್ಬವಾಗಿರುವ ಬಕ್ರೀದ್ ಸಂದರ್ಭದ ವೇಳೆಯಲ್ಲಿ ಸರ್ಕಾರಿ ರಜೆ ಯಾವಾಗ ಎಂದು ಕರ್ನಾಟಕದ ಜನರಲ್ಲಿ ಗೊಂದಲ ಉಂಟಾಗಿದೆ. ಕಾರಣ, ಬಕ್ರೀದ್ ಹಬ್ಬವನ್ನು ಕೇರಳದಲ್ಲಿ ಜೂನ್ 6ನೇ ತಾರೀಖು ಶುಕ್ರವಾರದಂದು ಆಚರಿಸಲಾಗುತ್ತಿದ್ದರೆ, ಕರ್ನಾಟಕದಲ್ಲಿ ಶನಿವಾರ, ಜೂನ್ 7ರಂದು ರಜೆಯನ್ನು ಘೋಷಿಸಲಾಗಿದೆ.
ರಾಜ್ಯಕ್ಕೆ ಶನಿವಾರ ರಜೆ, ಆದರೆ ಕೇರಳದಲ್ಲಿ ಶುಕ್ರವಾರ ಹಬ್ಬ
ಚಂದ್ರದರ್ಶನದ ಆಧಾರದ ಮೇಲೆ ಬಕ್ರೀದ್ ಹಬ್ಬದ ದಿನ ನಿಗದಿಯಾಗುವುದರಿಂದ ರಾಜ್ಯವಾರು ಬದಲಾವಣೆಯಾಗುತ್ತದೆ. ಇದೇ ಕಾರಣಕ್ಕೆ ಕೇರಳದಲ್ಲಿ ಜೂ.6 ರಂದು ಬಕ್ರೀದ್ ಹಬ್ಬವಾಗಿದ್ದು, ಅದೇ ದಿನವನ್ನು ರಜೆಯಾಗಿ ಘೋಷಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಜೂ.7 ಶನಿವಾರದಂದು ಬಕ್ರೀದ್ ಆಚರಣೆಗಾಗಿ ಅಧಿಕೃತ ರಜೆ ಘೋಷಣೆ ಮಾಡಲಾಗಿದೆ.
ಬ್ಯಾಂಕ್, ಶಾಲೆ, ಸರ್ಕಾರಿ ಕಚೇರಿಗಳಿಗೆ 2-3 ದಿನ ರಜೆ?
ಈ ವಾರಾಂತ್ಯದಲ್ಲಿ ಬಕ್ರೀದ್ ಹಬ್ಬ ಮತ್ತು ವಾರಾಂತ್ಯದ ರಜೆಗಳು ಬಂದಿರುವ ಕಾರಣ, ಕೆಲವು ಭಾಗಗಳಲ್ಲಿ ಬ್ಯಾಂಕುಗಳಿಗೆ ಮೂರು ದಿನ ರಜೆ ಸಿಗಲಿದೆ. ಜೂ.7 ಶನಿವಾರ – ಬಕ್ರೀದ್ ರಜೆ, ಜೂ.8 ಭಾನುವಾರ – ಸಾಮಾನ್ಯ ರಜೆ. ಹಾಗಾಗಿ ಕೆಲವೊಂದು ಪ್ರದೇಶಗಳಲ್ಲಿ ಜೂ.6 ಶುಕ್ರವಾರ ಕೂಡ ಕಚೇರಿಗಳು ಮುಚ್ಚುವ ಸಾಧ್ಯತೆ ಇದೆ.
ಅಧಿಕೃತವಾಗಿ ಶನಿವಾರ ರಜೆ ಘೋಷಿಸಲಾದರೂ, ಕೆಲವೆಡೆ ಮುಸ್ಲಿಂ ಸಮುದಾಯದ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಶಾಲಾ-ಕಾಲೇಜುಗಳು ಹಾಗೂ ಬ್ಯಾಂಕುಗಳು ಶುಕ್ರವಾರವೇ ರಜೆ ನೀಡುವ ಸಾಧ್ಯತೆ ಇದೆ.








