ನಗರದಲ್ಲಿ ಗೃಹ ಇಲಾಖೆ ನಡೆಸುತ್ತಿರುವ ಗಡಿಪಾರಿನ ತಯಾರಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ತನ್ನ ಮಾತುಗಳ ಮೂಲಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ನಾನು ಯಾರ ಬಗ್ಗೆ ಮಾತನಾಡಬೇಕು ಎಂಬ ನಿರ್ಧಾರ ನನ್ನದು. ನನ್ನ ಲೆವಲ್ ಅಶೋಕ್ ಮತ್ತು ವಿಜಯೇಂದ್ರ ಮಾತ್ರ. ಇವರ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ. ಚಕ್ರವರ್ತಿ ಸೂಲಿಬೆಲೆ ನನ್ನ ಲೆವಲ್ ಅಲ್ಲ, ಎಂದು ಹೇಳಿದ ಅವರು, ಅವರ ಬಗ್ಗೆ ಮಾತನಾಡೋದು ನನ್ನ ಕಾರ್ಯಕರ್ತರು, ನಾನು ಅಲ್ಲ. ನನ್ನ ಮಟ್ಟದಲ್ಲಿ ಚರ್ಚೆ ಮಾಡೋವ್ರು ಅಶೋಕ್ ಹಾಗು ವಿಜಯೇಂದ್ರ ಎಂದು ನೇರವಾಗಿ ಟಾಂಗ್ ಕೊಟ್ಟಿದ್ದಾರೆ.
ಇದೇ ವೇಳೆ, ಇತ್ತೀಚೆಗಷ್ಟೇ ಇಡಿ ನಡೆಸಿದ ದಾಳಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಗೆದ್ದು ಬಂದಿದ್ದೇ ಬಿಜೆಪಿ ನಾಯಕರು ಜೀರ್ಣಿಸಿಕೊಳ್ಳೋಕಾಗಿಲ್ಲ. ಈ ಹೊಟ್ಟೆ ಉರಿಗೆ ಇಡಿ ಕರೆದಿದೆ. ಬಳ್ಳಾರಿಯಲ್ಲಿ ಸೋತ ಶಾಕ್ ಇನ್ನೂ ಹೋಗಿಲ್ಲ. ಅದಕ್ಕಾಗಿಯೇ ಅವರು ಇಡಿಯನ್ನು ಉಪಯೋಗಿಸಿ ದಾಳಿ ನಡೆಸುತ್ತಿದ್ದಾರೆ. ಆದರೆ ನಾವು ಈ ತಂತ್ರಗಳಿಗೆ ಹೆದರುವವರಲ್ಲ, ಎಂದು ವಾಗ್ದಾಳಿ ನಡೆಸಿದರು.








