ಇತ್ತೀಚೆಗೆ ಜರುಗಿದ G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ ನಡುವಿನ ಸೌಹಾರ್ದಭರಿತ ಭೇಟಿಯು ಸೋಶಿಯಲ್ ಮೀಡಿಯಾ ಮತ್ತು ರಾಜಕೀಯ ವಲಯದಲ್ಲಿ ಭಾರೀ ವೈರಲ್ ಆಗುತ್ತಿದೆ. ಮೆಲೋನಿ ಅವರು ಪ್ರಧಾನ ಮಂತ್ರಿ ಮೋದಿಯನ್ನು ಎದುರು ನೋಡುತ್ತಿದ್ದಂತೆ, ತಮ್ಮ ಉತ್ಸಾಹಭರಿತ ನುಡಿಗಳ ಮೂಲಕ ಅವರನ್ನು ಪ್ರಶಂಸಿಸಿದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ನೀವು ತುಂಬಾ ಗ್ರೇಟ್…– ಮೆಲೋನಿ ಮೆಚ್ಚುಗೆ
ಪ್ರಧಾನಿ ಮೋದಿಯನ್ನು ನೋಡುತ್ತಿದ್ದಂತೆ ಮೆಲೋನಿ ಅವರು ನಗು ಮುಖದಿಂದ, ನೀವು ತುಂಬಾ ಗ್ರೇಟ್! ನಾನು ನಿಮ್ಮಂತೆಯೇ ಆಗಲು ಪ್ರಯತ್ನಿಸುತ್ತೇನೆ ಎಂಬ ಮಾತುಗಳಿಂದ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಭಾರತ–ಇಟಲಿ ಸ್ನೇಹದ ನೆಲೆ ಗಟ್ಟಿಯಾಗುತ್ತಿದೆ
ಈ ವೇಳೆ ಮೆಲೋನಿ ಟ್ವೀಟ್ ಮೂಲಕ ಭಾರತ-ಇಟಲಿ ನಡುವಿನ ಸ್ನೇಹವನ್ನು ಶ್ಲಾಘಿಸಿದರು. ಭಾರತ ಮತ್ತು ಇಟಲಿ ನಡುವಿನ ಸ್ನೇಹ ಶ್ರೇಷ್ಠವಾಗಿದೆ. ಈ ಸಂಬಂಧ ಮುಂದುವರೆಯಲಿ ಎಂಬ ಅರ್ಥದ ಸಂದೇಶವನ್ನು ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡರು.
ಪ್ರಧಾನಿ ಮೋದಿ ಪ್ರತಿಕ್ರಿಯೆ
ಈ ಮೆಲೋನಿಯ ಎಕ್ಸ್ ಗೆ ಪ್ರಧಾನಮಂತ್ರಿ ಮೋದಿ ಕೂಡ ಪ್ರತಿಕ್ರಿಯಿಸಿ, ಭಾರತ–ಇಟಲಿ ಸ್ನೇಹ ಮತ್ತಷ್ಟು ಬಲಗೊಳ್ಳಲಿ ಎಂಬುದು ನನ್ನ ಆಶಯ. ನೀವು ವ್ಯಕ್ತಪಡಿಸಿದ ಸ್ನೇಹಾಭಿಮಾನಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ.
ಈ ಸ್ನೇಹಭರಿತ ಸಂಭಾಷಣೆಯ ಬಳಿಕ “Melodi” ಎಂಬ ಹ್ಯಾಶ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡಾಗಿದ್ದು, ನೂರಾರು ನೆಟಿಜನ್‌ಗಳು ಈ ಎರಡು ನಾಯಕರ ನಡುವಿನ ಸ್ನೇಹಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.








