SBI PO Recruitment 2025 – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 2025ನೇ ನೇಮಕಾತಿ ಅಧಿಸೂಚನೆಯನ್ನು 24 ಜೂನ್ 2025 ರಂದು ಪ್ರಕಟಿಸಿದ್ದು, 541 ಪ್ರೊಬೇಷನರಿ ಆಫಿಸರ್ ಹುದ್ದೆಗಳ ನೇಮಕಾತಿ ನಡೆಸುತ್ತಿದೆ. ಆಸಕ್ತ ಅಭ್ಯರ್ಥಿಗಳು 24 ಜೂನ್ 2025 ರಿಂದ 14 ಜುಲೈ 2025ರೊಳಗೆ ಎಸ್ಬಿಐ ಅಧಿಕೃತ ವೆಬ್ಸೈಟ್ bank.sbi ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಉದ್ಯೋಗ ವಿವರಗಳು
ಇಲಾಖೆ ಹೆಸರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಹುದ್ದೆಗಳ ಹೆಸರು ಪ್ರೊಬೇಷನರಿ ಆಫಿಸರ್ (PO)
ಒಟ್ಟು ಹುದ್ದೆಗಳು 541
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online)
ಉದ್ಯೋಗ ಸ್ಥಳ – ಭಾರತಾದ್ಯಂತ
ಹುದ್ದೆಗಳ ವಿಭಾಗವಾರು ವಿವರ
ಸಾಮಾನ್ಯ (UR): 203
ಒಬಿಸಿ: 135
ಎಸ್ಸಿ: 80
ಎಸ್ಟಿ: 73
ಇಡಬ್ಲ್ಯೂಎಸ್: 50
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಸರಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರೈಸಿರಬೇಕು.
ಅಂತಿಮ ವರ್ಷದ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು, ಆದರೆ ಅವರು ಪ್ರೌಢಶಿಕ್ಷಣವನ್ನು 30 ಸೆಪ್ಟೆಂಬರ್ 2025 ರೊಳಗೆ ಪೂರ್ಣಗೊಳಿಸುವ ಷರತ್ತಿಗೆ ಒಳಪಟ್ಟಿರಬೇಕು.
ವಯೋಮಿತಿ (01-04-2025 ಪ್ರಕಾರ)
👉 ಕನಿಷ್ಠ ವಯಸ್ಸು: 21 ವರ್ಷ
👉 ಗರಿಷ್ಠ ವಯಸ್ಸು: 30 ವರ್ಷ
ವಿನಾಯಿತಿಗಳು
ಒಬಿಸಿ ಅಭ್ಯರ್ಥಿಗಳು: 3 ವರ್ಷ ವಯೋಮಿತಿ ವಿನಾಯಿತಿ
ಎಸ್ಸಿ / ಎಸ್ಟಿ ಅಭ್ಯರ್ಥಿಗಳು: 5 ವರ್ಷ ವಯೋಮಿತಿ ವಿನಾಯಿತಿ
ವಿಕಲಚೇತನ ಅಭ್ಯರ್ಥಿಗಳು: ವರ್ಗಾನುಸಾರ 10 ರಿಂದ 15 ವರ್ಷ ವಯೋಮಿತಿ ವಿನಾಯಿತಿ ಲಭ್ಯ
ವೇತನ ಶ್ರೇಣಿ
ಪ್ರಾರಂಭಿಕ ಮೂಲ ವೇತನ: ರೂ.48,480/- (ನಾಲ್ಕು ಹೆಚ್ಚುವರಿ ಇನ್ಕ್ರಿಮೆಂಟ್ಗಳೊಂದಿಗೆ)
CTC (ವಾರ್ಷಿಕ): ಸುಮಾರು ರೂ.20.43 ಲಕ್ಷ (ಮುಂಬೈಯಲ್ಲಿ)
ಭತ್ಯೆಗಳು: HRA, DA, ಮೆಡಿಕಲ್, PF, NPS, LTC ಮತ್ತು ಇತರೆ ಅನೇಕ ಸೌಲಭ್ಯಗಳು ಲಭ್ಯ
ಅರ್ಜಿ ಶುಲ್ಕ
👉 ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್: ರೂ.750/-
👉 ಎಸ್ಸಿ / ಎಸ್ಟಿ / ವಿಕಲಚೇತನ ಅಭ್ಯರ್ಥಿಗಳು: ಯಾವುದೇ ಅರ್ಜಿ ಶುಲ್ಕವಿಲ್ಲ
ಪಾವತಿ ವಿಧಾನ:
👉 ಆನ್ಲೈನ್ ಮೂಲಕ (ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ / UPI)
ಮುಖ್ಯ ದಿನಾಂಕಗಳು
📌 ಅಧಿಸೂಚನೆ ಬಿಡುಗಡೆ: 24 ಜೂನ್ 2025
📌 ಅರ್ಜಿ ಪ್ರಾರಂಭ: 24 ಜೂನ್ 2025
📌 ಅರ್ಜಿ ಕೊನೆ ದಿನಾಂಕ: 14 ಜುಲೈ 2025
📌 ಪ್ರೀಲಿಮ್ಸ್ ಪರೀಕ್ಷೆ: ಜುಲೈ-ಆಗಸ್ಟ್ 2025
📌 ಮೇನ್ಸ್ ಪರೀಕ್ಷೆ: ಸೆಪ್ಟೆಂಬರ್ 2025
📌 ಸಂದರ್ಶನ: ಅಕ್ಟೋಬರ್-ನವೆಂಬರ್ 2025
📌 ಅಂತಿಮ ಫಲಿತಾಂಶ: ನವೆಂಬರ್-ಡಿಸೆಂಬರ್ 2025
Website:https://ibpsonline.ibps.in/sbipomay25/








