Karnataka Sericulture Department Recruitment 2025 : ಕರ್ನಾಟಕ ರೇಷ್ಮೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಪ್ರಕಟವಾಗಿದೆ. ಈ ಹುದ್ದೆಗಳಿಗೆ ಶೀಘ್ರದಲ್ಲಿಯೇ ನೇಮಕಾತಿ ಅಧಿಸೂಚನೆ ಪ್ರಕಟವಾಗಲಿದೆ.
ಹುದ್ದೆ : ಸಹಾಯಕ ಅಭಿಯಂತರರು (ಸಿವಿಲ್)/ ಕಿರಿಯ ಅಭಿಯಂತರರು, ರೇಷ್ಮೆ ಸಹಾಯಕ ನಿರ್ದೇಶಕರು, ರೇಷ್ಮೆ ವಿಸ್ತರಣಾಧಿಕಾರಿ, ರೇಷ್ಮೆ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಶೀಘ್ರಲಿಪಿಗಾರರು, ರೇಷ್ಮೆ ಪ್ರದರ್ಶಕರು, ದ್ವಿತೀಯ ದರ್ಜೆ ಸಹಾಯಕರು, ರೇಷ್ಮೆ ಪ್ರವರ್ತಕರು, ವಾಹನ ಚಾಲಕರು, ಅಟೆಂಡರ್, ಗ್ರೂಪ್-ಡಿ (ಜವಾನ).
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 2492ಕ್ಕೂ ಅಧಿಕ ಹುದ್ದೆಗಳು ಖಾಲಿ ಇದೆ.
ಹುದ್ದೆ ಹುದ್ದೆಗಳ ಸಂಖ್ಯೆ
ಸಹಾಯಕ ಅಭಿಯಂತರರು (ಸಿವಿಲ್)/ ಕಿರಿಯ ಅಭಿಯಂತರರು 3
ರೇಷ್ಮೆ ಸಹಾಯಕ ನಿರ್ದೇಶಕರು 154
ರೇಷ್ಮೆ ವಿಸ್ತರಣಾಧಿಕಾರಿ 184
ರೇಷ್ಮೆ ನಿರೀಕ್ಷಕರು 538
ಪ್ರಥಮ ದರ್ಜೆ ಸಹಾಯಕರು 190
ಶೀಘ್ರಲಿಪಿಗಾರರು 10
ರೇಷ್ಮೆ ಪ್ರದರ್ಶಕರು 642
ದ್ವಿತೀಯ ದರ್ಜೆ ಸಹಾಯಕರು 72
ರೇಷ್ಮೆ ಪ್ರವರ್ತಕರು 240
ವಾಹನ ಚಾಲಕರು 84
ಅಟೆಂಡರ್ 25
ಗ್ರೂಪ್-ಡಿ (ಜವಾನ) 350
ಅರ್ಹತೆ :
• ಸಹಾಯಕ ಅಭಿಯಂತರರು (ಸಿವಿಲ್)/ ಕಿರಿಯ ಅಭಿಯಂತರರು – ಕಡ್ಡಾಯವಾಗಿ ಸಿವಿಲ್ ಅಭಿಯಂತರರ ಪದವಿ ಹೊಂದಿರಬೇಕು.
• ರೇಷ್ಮೆ ಸಹಾಯಕ ನಿರ್ದೇಶಕರು – ಎಂ.ಎಸ್ಸಿ (ರೇಷ್ಮೆ/ ಎಂ.ಎಸ್ಸಿ (ಕೃಷಿ) ರೇಷ್ಮೆ ಅಥವಾ ಎಂ.ಎಸ್ಸಿ (ರೇಷ್ಮೆ ಒಂದು ವಿಷಯವನ್ನು ಒಳಗೊಂಡಂತೆ) ಅಥವಾ ಎಂ.ಎಸ್ಸಿ ರೇಷ್ಮೆ ಮತ್ತು ರೇಷ್ಮೆ ಜೈವಿಕ ತಂತ್ರಜ್ಞಾನ ಅಥವಾ ಎಂ.ಎಸ್ಸಿ (ಸಸ್ಯಶಾಸ್ತ್ರ/ ಪ್ರಾಣಿಶಾಸ್ತ್ರ/ ಜೈವಿಕ ತಂತ್ರಜ್ಞಾನ) ಅಥವಾ ಎಂ.ಎಸ್ಸಿ(ಲೈಫ್ ಸೈನ್ಸ್).
• ರೇಷ್ಮೆ ವಿಸ್ತರಣಾಧಿಕಾರಿ – ಬಿ.ಎಸ್ಸಿ (ರೇಷ್ಮೆ)/ ಬಿ.ಎಸ್ಸಿ (ಆನರ್ಸ) ರೇಷ್ಮೆ ಅಥವಾ ಬಿ.ಎಸ್ಸಿ ರೇಷ್ಮೆ ಮತ್ತು ಜೈವಿಕ ತಂತ್ರಜ್ಞಾನ ಅಥವಾ ವಿಜ್ಞಾನ ಪದವಿ ಜೊತೆಗೆ ರೇಷ್ಮೆ ಕೃಷಿ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಸಸ್ಯಶಾಸ್ತ್ರ/ ಪ್ರಾಣಿಶಾಸ್ತ್ರ/ ರೇಷ್ಮೆ ಕೃಷಿ ಮುಖ್ಯ ವಿಷಯವನ್ನಾಗಿ ಹೊಂದಿರುವ ವಿಜ್ಞಾನದ ಪದವಿ.
• ರೇಷ್ಮೆ ನಿರೀಕ್ಷಕರು – ರೇಷ್ಮೆ ಕೃಷಿ ಪದವಿ ಅಥವಾ ವಿಜ್ಞಾನ ಪದವಿ ಜೊತೆಗೆ ರೇಷ್ಮೆ ಕೃಷಿ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಸಸ್ಯಶಾಸ್ತ್ರ/ ಪ್ರಾಣಿಶಾಸ್ತ್ರ/ ಲೈಫ್ ಸೈನ್ಸ್ ವಿಜ್ಞಾನದ ಪದವಿ.
ಪ್ರಥಮ ದರ್ಜೆ ಸಹಾಯಕರು – ಪದವಿ ಅಥವಾ ತತ್ಸಮಾನ ಅರ್ಹತೆ.
• ರೇಷ್ಮೆ ಪ್ರದರ್ಶಕರು & ರೇಷ್ಮೆ ಪ್ರವರ್ತಕರು – ಪದವಿ ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ತತ್ಸಮಾನ ಪರೀಕ್ಷೆಯಲ್ಲಿ, ಜೀವಶಾಸ್ತ್ರ ಅಥವಾ ಸಸ್ಯಶಾಸ್ತ್ರ ಅಥವಾ ಪ್ರಾಣಿಶಾಸ್ತ್ರ ಅಥವಾ ರೇಷ್ಮೆ ವಿಷಯಗಳಲ್ಲಿ ಒಂದು ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು.
• ದ್ವಿತೀಯ ದರ್ಜೆ ಸಹಾಯಕರು – ಪದವಿ ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣ.
• ವಾಹನ ಚಾಲಕರು – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಅರ್ಹತೆ. ಪ್ರಸ್ತುತ ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
• ಅಟೆಂಡರ್ & ಗ್ರೂಪ್-ಡಿ (ಜವಾನ) – ಕನ್ನಡವನ್ನು ಒಂದು ವಿಷಯವಾಗಿಟ್ಟುಕೊಂಡು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು.
ಆಯ್ಕೆ ವಿಧಾನ : ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಮುಂಬಡ್ತಿಯ ಮೂಲಕ ಭರ್ತಿ ಮಾಡಲಾಗುವುದು.
ಇತರೆ ಮಾಹಿತಿ :
ಅಧಿಸೂಚನೆ ಪ್ರಕಟವಾದ ದಿನಾಂಕ : ಜೂನ್ 17, 2025
ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಆರಂಭ ಆಗಲಿದೆ








