ಪಾಕ್ ಪರ ಘೋಷಣೆ ಕೂಗಿ ಜೈಲು ಪಾಲಾಗಿದ್ದ ಹಾಗೂ ನಾಲ್ಕು ದಿನಗಳ ಕಾಲ ತನಿಖೆಗಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಅಮೂಲ್ಯ ತನಿಖೆ ವೇಳೆಯಲ್ಲಿ ಕಣ್ಣೀರಿಟ್ಟಿದ್ದಾಳೆಂದು ತಿಳಿದುಬಂದಿದೆ. ತನಿಖೆ ನಡೆಸುತ್ತಿರುವ ಉಪ್ಪಾರಪೇಟೆ ಹಾಗೂ ಚಾಮರಾಜಪೇಟೆ ಪೊಲೀಸರು ಬೆಳಗ್ಗೆ ಹತ್ತುಗಂಟೆಯಿಂದಲೂ ಅಮೂಲ್ಯಳನ್ನು ಸತತ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಪಾಕ್ ಪರ ಘೋಷಣೆ ಕೂಗಿದ್ದ ಮತ್ತೋರ್ವ ಯುವತಿ ಆರ್ದ್ರಾ ಕುರಿತು ಕೇಳಿದಾಗ, ನಾವಿಬ್ಬರೂ ಒಂದೇ ಕಡೆ ರೂಮ್ ಬಾಡಿಗೆ ಪಡೆದು ನೆಲೆಸಿದ್ದೆವು. ಆದರೆ ಈಗ ಆರ್ದ್ರಾ ಇಲ್ಲ ಎನ್ನುತ್ತಿದ್ದಾಳೆ. ಯಾಕೆ ಆ ರೀತಿ ಹೇಳುತ್ತಿದ್ದಾಳೋ ನನಗೆ ಗೊತ್ತಿಲ್ಲ ಎಂದು ಅಮೂಲ್ಯ ತಿಳಿಸಿದ್ದಾಳೆ ಎನ್ನಲಾಗಿದೆ. ಸತತ ವಿಚಾರಣೆ ವೇಳೆಯಲ್ಲಿ ಗೌರಿ ಲಂಕೇಶ್ ಕುರಿತು ಪ್ರಶ್ನೆ ಕೇಳಿದಾಗ ಅವರು ನನ್ನ ತಾಯಿ ಇದ್ದಂತೆ ಎಂದಿದ್ದು, ಸುಮಾರು ೧೫ ನಿಮಿಷಗಳ ಕಾಲ ಕಣ್ಣೀರಿಟ್ಟಿದ್ದಾಳೆ ಎನ್ನಲಾಗುತ್ತಿದೆ.
ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ:ಎರಡು ಸಾವು
ಶಿವಮೊಗ್ಗ: ಬಸ್ಸು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಗರದ ಸರ್ಕ್ಯೂಟ್ ಹೌಸ್ ಸರ್ಕಲ್ ನಲ್ಲಿ...