ರಾಜ್ಯ ರಾಜಕಾರಣದಲ್ಲಿ ಮತ್ತೆ ಜನಾರ್ಧನರೆಡ್ಡಿ ಮತ್ತು ಶ್ರೀ ರಾಮುಲು ಒಂದಾಗುವ ನಿರೀಕ್ಷೆ ಮೂಡಿದೆ. ಕೆಲ ಸಮಯದ ಹಿಂದೆ ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದ ದೂರವಾಗಿದ್ದ ಗಾಲಿ ಜನಾರ್ಧನರೆಡ್ಡಿ ಮತ್ತು ಬಿ ಶ್ರೀರಾಮುಲು ಮತ್ತೆ ಕೈ ಜೋಡಿಸುವ ಸಾಧ್ಯತೆ ಇದೆ.
ಇಂದು ಗಂಗಾವತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಿ ಶ್ರೀರಾಮುಲು, ಗಾಲಿ ಜನಾರ್ಧನರೆಡ್ಡಿಯವರ ಜೊತೆಗಿನ ಸಂಬಂಧ ಮತ್ತು ರಾಜಕೀಯ ಭವಿಷ್ಯದ ಬಗ್ಗೆ ಸ್ಪಷ್ಟನೆ ನೀಡಿದರು.
ಶ್ರೀರಾಮುಲು ಹೇಳಿದ್ದೇನು?
ನಮ್ಮ ನಡುವೆ ಈಗ ಯಾವುದೇ ವೈಮನಸ್ಸಿಲ್ಲ. ಅದೊಂದು ದಿನ ನನ್ನ ಬಗ್ಗೆ ಅವರು, ಅವರ ಬಗ್ಗೆ ನಾನು ಮಾತಾಡಿಕೊಂಡಿದ್ದೇವೆ. ಅದಾದ ಬಳಿಕ ನಮ್ಮ ಮೇಲೆ ಅವರು, ಅವರ ಮೇಲೆ ನಾನು ಕೂಡ ಮಾತನಾಡಿಲ್ಲ. ನಾನು ಮುರ್ಕೊಂಡು ಬೀಳೋದಾದರೆ ಮುರ್ಕೊಂಡು ಬೀಳ್ತಿನಿ, ಕೂಡೋ ಹಾಗಿದ್ರೆ ಕೂಡಿ ಬಾಳೀನಿ. ನಾನು ಎಲ್ಲರೂ ಪಕ್ಷಕ್ಕಾಗಿ ಒಂದಾಗಿ, ಮುಂದಿನ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸುತ್ತೇವೆ ಎಂದು ಶ್ರೀರಾಮುಲು ಹೇಳಿದ್ದಾರೆ.
ನಾನು ಹುಟ್ಟಿ ಬೆಳೆದದು ಈ ಭಾಗದಲ್ಲಿ. ನಾನು ಮೂರ್ಖನಾಗ್ಬೇಕಾದ್ರೆ, ಮೂರ್ಖನಾಗ್ತೀನಿ. ಒಂದಾಗೋದು ಬೇಕಾದ್ರೆ ಒಂದಾಗ್ತೀನಿ. ಪಕ್ಷಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಮುಂದಿನ ಚುನಾವಣೆಗೆ ಸಜ್ಜಾಗ್ತೀವಿ, ಎಂದು ಹೇಳಿದ್ದಾರೆ.
ಹಿಂದೆ ಏನು ನಡೆದಿತ್ತು?
ಕೆಲವರ್ಷಗಳ ಹಿಂದೆ ಗಾಲಿ ಜನಾರ್ಧನರೆಡ್ಡಿ ಮತ್ತು ಬಿ ಶ್ರೀರಾಮುಲು ನಡುವಿನ ಸಂಬಂಧದಲ್ಲಿ ಬಿರುಕು ಬಿದ್ದಿತ್ತು.
ಆದರೆ ಈಗ ಎರಡೂ ಕುಟುಂಬಗಳು ಪುನಃ ಒಗ್ಗಟ್ಟಾಗಿ ಚುನಾವಣೆ ಎದುರಿಸಲು ಸಿದ್ಧರಾಗಿವೆ ಎಂಬ ಭರವಸೆ ದೊರಕಿದೆ.








