ಅಮೆರಿಕಾದ ನೌಕಾಪಡೆಗೆ ಸೇರಿದ ನೌಕೆಯೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಯುಎಸ್ಎಸ್ ಬೊನ್ಹೊಮ್ಮೆ ರಿಚರ್ಡ್ ಎಂಬ ಯುದ್ಧ ನೌಕೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 17 ನಾವಿಕರು, ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.
160 ಜನರಿದ್ದ ಹಡಗಿನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದ್ದು ಅದೃಷ್ಟವಶಾತ್ ಭಾರೀ ಅಅನಾಹುತ ತಪ್ಪಿದೆ. ಇನ್ನೂ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಮೆರಿಕದ ನೇವಿ ಸಿಎನ್ ಒ ಅಡ್ಮಿರಲ್ ಮೈಕೆಲ್ ಎಂ.ಗಿಲ್ವೇ ತಿಳಿಸಿದ್ದಾರೆ.








