ಮುಂದಿನ ದಿನಗಳಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ನಿಶ್ಚಿತಾರ್ಥ ಮಾತುಕತೆಗಳಲ್ಲೂ ಭಾಗವಹಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ತಿದ್ದುಪಡಿ ಕಾಯ್ದೆಗೆ ಒಪ್ಪಿಗೆ ನೀಡಲಾಗಿದೆ. ‘ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಕಾಯ್ದೆ-2025’ ಸಚಿವ ಸಂಪುಟದ ಅಂಗೀಕಾರ ಪಡೆದು ಇದೀಗ ವಿಧಾನಸೌಧದಲ್ಲಿ ಮಂಡನೆಯಾಗಲಿದೆ.
ಈ ತಿದ್ದುಪಡಿ ಕಾಯ್ದೆಯ ಪ್ರಕಾರ, ಯಾವುದೇ ಬಾಲಕಿ ಅಥವಾ ಬಾಲಕನ ವಿವಾಹಕ್ಕೆ ಸಂಬಂಧಿಸಿದ ನಿಶ್ಚಿತಾರ್ಥ ಸಭೆ, ಮಾತುಕತೆ ಅಥವಾ ಕಾರ್ಯಕ್ರಮದಲ್ಲಿ ಭಾಗಿಯಾದರೆ, ಅವರ ಮೇಲೂ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ಜೈಲು ಶಿಕ್ಷೆಯಂತ ಕಟ್ಟುನಿಟ್ಟಿನ ಕ್ರಮ ಜಾರಿಗೆ ಬರುತ್ತದೆ.
ಸರ್ಕಾರದ ಉದ್ದೇಶ ಸ್ಪಷ್ಟವಾಗಿದ್ದು, ಬಾಲ್ಯ ವಿವಾಹ ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಕಠಿಣ ಕ್ರಮಗಳು ಅಗತ್ಯ. ಇದನ್ನು ಕುಟುಂಬಸ್ಥರ ಒಪ್ಪಿಗೆಯಿಂದ ಕೂಡ ಮಾಡಿದರೂ ಸಹ, ಅದು ಅಪರಾಧವೆಂಬಂತೆಯೇ ಪರಿಗಣಿಸಲಾಗುವುದು.








