ಭಾರತದ ಪ್ರಖ್ಯಾತ ಉದ್ಯಮಿ ಹಾಗೂ ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ ಅವರು ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ (Adani Ports and SEZ Ltd) ನ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ರಾಜೀನಾಮೆ ಆಗಸ್ಟ್ 5ರಿಂದಲೇ ಜಾರಿಗೆ ಬರಲಿದೆ ಎಂದು ಕಂಪನಿಯ ಅಧಿಕೃತ ಪ್ರಕಟಣೆ ತಿಳಿಸಿದೆ.
ಅದಾನಿ ಪೋರ್ಟ್ಸ್ ತನ್ನ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ, ಗೌತಮ್ ಅದಾನಿ ಅವರು ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಕಂಪನಿ ಅಡ್ಮಿನ್ ಮಂಡಳಿ ಅಂಗೀಕರಿಸಿದೆ. ಅವರು ಮುಂದಿನ ದಿನಗಳಲ್ಲಿ ಕಂಪನಿಯ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿ ಇರಲ್ಲ ಎಂದು ಹೇಳಿದೆ.
ಗೌತಮ್ ಅದಾನಿಯ ರಾಜೀನಾಮೆಯೊಂದಿಗೆ, ಕಂಪನಿಯ ಆಡಳಿತ ಮಂಡಳಿಯಲ್ಲಿ ಹೊಸ ಮುಖ ಪ್ರವೇಶಿಸಿದೆ. ಮನೀಶ್ ಕೇಜ್ರವಾಲ್ ಅವರನ್ನು ಕಂಪನಿಯ ಹೆಚ್ಚುವರಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
Adani Ports and SEZ Ltd (APSEZ), ಭಾರತದ ಅತಿ ದೊಡ್ಡ ಖಾಸಗಿ ಬಂದರು ನಿರ್ವಹಣಾ ಕಂಪನಿ. ಇದು ಅದಾನಿ ಗ್ರೂಪ್‌ನ ಪ್ರಮುಖ ಅಂಗವಾಗಿದ್ದು, ದೇಶದ ಪ್ರಮುಖ ಬಂದರುಗಳು ಮತ್ತು ಲಾಜಿಸ್ಟಿಕ್ ಸೇವೆಗಳನ್ನು ನಿರ್ವಹಿಸುತ್ತದೆ.








