ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ದಕ್ಷಿಣಕ್ಕೆ ಸುಮಾರು ಆರು ಮೈಲು ದೂರದಲ್ಲಿ ಪಶ್ಚಿಮ ಸಮುದ್ರ ತೀರದಲ್ಲಿ ಸೋಮೇಶ್ವರ ಗ್ರಾಮವಿದೆ. ಅಲ್ಲಿಯೇ ಶ್ರೀ ಸೋಮೇಶ್ವರ ಕ್ಷೇತ್ರವಿದೆ. ಇದೊಂದು ನಿಸರ್ಗರಮಣೀಯವಾದ ಸುಂದರ ಪ್ರದೇಶ. ದೇವಾಲಯದ ಹಿಂಬದಿಯಲ್ಲಿ ನೆಲೆಸಿರುವ ಸಮುದ್ರರಾಜನೂ ನಿತ್ಯವೂ ಗಂಭೀರವಾಗಿ ಭಗವದ್ ಘೋಷದಿಂದ ಸೋಮನಾಥನನ್ನು ಸ್ತುತಿಸುತ್ತಾ ತೆರೆಗೈಗಳಿಂದ ಪೂಜಿಸುತ್ತಿದ್ದಾನೆ.
ಶ್ರೀ ಸೋಮನಾಥ ದೇವರ ದೇವಾಲಯವಿರುವುದರಿಂದಲೇ ಈ ಗ್ರಾಮಕ್ಕೆ ಸೋಮೇಶ್ವರ ಎಂಬ ಹೆಸರು ಬಂದಿದೆ. ಈ ದೇವಾಲಯದ ಹಿಂಬದಿಯ ಸಮುದ್ರ ತಟದ ಶಿಲೆಯಲ್ಲಿ ರುದ್ರಪಾದದ ಗುರುತು ಇರುವುದರಿಂದ ಈ ಕ್ಷೇತ್ರವನ್ನು “ರುದ್ರಪಾದ ಕ್ಷೇತ್ರ”ವೆಂದೂ ಕರೆಯುತ್ತಾರೆ.
ಶ್ರೀ ಸೋಮನಾಥ ದೇವಸ್ಥಾನದ ಸ್ಥಾಪನೆಯು ಕ್ರಿ.ಶ.10ನೇ ಶತಮಾನದ ಮೊದಲೇ ಆಗಿರಬಹುದು. ಈ ದೇವಾಲಯವು ಎತ್ತರದ ಶಿಲೆಯ ಮೇಲೆ ಸ್ಥಾಪನೆಯಾಗಿದೆ. ಅಲ್ಲದೇ ಸಮುದ್ರದ ಕೆಳಗೆ ಶಿಲೆಯ ಬದಿಯಲ್ಲಿ 2 ಗುಹೆಗಳಿವೆ. ಕೆಳಗಡೆ ದೇವಸ್ಥಾನದ ಮೆಟ್ಟಲು ಹತ್ತುವಾಗ ಆದಿಶಕ್ತಿ ಪಂಚದುರ್ಗೆಯ ಗುಡಿಯೂ ಅಶ್ವತ್ಥ ಮರವಿರುವ ಅರಸುಕಟ್ಟೆಯೂ ಇದೆ. ಇನ್ನೊಂದು ಕಡೆ ಬಂಡೆಯೊಡೆದು ಬಂದ ನಾಗರಾಜನ ಉದ್ಭವ ಲಿಂಗವು ಇರುವ ನಾಗವನವಿದೆ. ಮೇಲಕ್ಕೆ ಹೋಗುವಾಗ ವಿಶಾಲವಾದ ಗೋಪುರವು ಕಾಣಿಸುತ್ತದೆ. ಬಳಿಕ ವಿಶಾಲವಾದ ಅಂಕಣವಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಈ ಅಂಕಣದಲ್ಲಿ ದೇವಾಲಯದ ಎದುರು ಪ್ರಧಾನ ಬಲಿಪೀಠವು ನೋಡ ಸಿಗುತ್ತದೆ. ಹೊರಗಿನ ಅಂಗಣದಲ್ಲಿ ನಾಲ್ಕು ದೇವರುಗಳ ಗುಡಿಗಳಿವೆ. ಬಲಬದಿಯಲ್ಲಿ ಸಿದ್ಧಿವಿನಾಯಕ ದೇವರ ಗುಡಿಯಿದೆ. ಇದು ಶಿಲಾಮಯ ದೇವಗೃಹ. ಈ ಗುಡಿಯ ಎಲ್ಲಾ ಲಕ್ಷಣಗಳಿಂದ ಕ್ರಿ.ಶ 10 ನೇ ಶತಮಾನದಲ್ಲಿ ಆಗಿರಬೇಕೆಂದು ಸಂಶೋಧನೆಯಿಂದ ಊಹಿಸಲಾಗಿದೆ. ಇದು ಕುಳ್ಳು ಶಿಲ್ಪಗಳಿಂದಲೂ ಸಮುದ್ರ ಕುದುರೆಗಳಿಂದಲೂ ಗೂಡು ದ್ವಾರಗಳಿಂದಲೂ ಇನ್ನಿತರ ವಿನ್ಯಾಸಗಳಿಂದಲೂ ಕೂಡಿದೆ. ಗಣೇಶ ವಿಗ್ರಹವು ಜಟಾಮುಕುಟಧಾರಿಯಾಗಿದ್ದು, ಮೇಲಿನ ಎರಡು ಕೈಗಳಲ್ಲಿ ಅಂಕುಶ ಮತ್ತು ರುದ್ರಾಕ್ಷಿ ಸರವನ್ನೂ, ಕೆಳಗಿನ ಎರಡು ಕೈಗಳಲ್ಲಿ ದಂತ ಮತ್ತು ಲಡ್ಡುಗಳನ್ನು ಹಿಡಿದುಕೊಂಡ ನೋಟವಿದೆ. ಈ ಗಣೇಶ ವಿಗ್ರಹದ ವೈಶಿಷ್ಠ್ಯವೇನೆಂದರೆ ಇವನು ಸೊಂಡಿಲಿನಿಂದ ತನ್ನ ಕೈಯಲ್ಲಿದ್ದ ಭಕ್ಷವನ್ನು ಆಘ್ರಾಣಿಸುತ್ತಿರುವನು. ಅಂತೆಯೇ ಈ ಕಟ್ಟಡವೇ ಸೌಂದರ್ಯ ಮತ್ತು ಪ್ರಮಾಣಗಳ ಪ್ರತೀಕವಾಗಿದೆ.
ಅನಂತರ ಎಡಬದಿಯಲ್ಲಿ ಶ್ರೀ ಪಾರ್ಥಸಾರಥಿ, ಗೋಪಾಲಕೃಷ್ಣ ದೇವರ ಗುಡಿಯು ಇದ್ದು ಅದರಲ್ಲಿ ಶಿಲಾಮೂರ್ತಿ ಪಾರ್ಥಸಾರಥಿ ಗೋಪಾಲಕೃಷ್ಣ ದೇವರ ವಿಗ್ರಹವು ಶಿಲ್ಪ ಶೈಲಿಯಿಂದ ಕೂಡಿದುದಾಗಿದೆ.
ದೇವಸ್ಥಾನದ ಹಿಂಬದಿಯ ಕೆಳಗಡೆ ಎಡಬದಿಯಲ್ಲಿ ಕೆರೆಯ ಪಕ್ಕದಲ್ಲಿ ಕಲ್ಲುರ್ಟಿ, ಕಲ್ಕುಡ, ಕುಟ್ಟಿಚಾತು, ಗುಳಿಗ ಎಂಬ ದೈವಗಳ ಗುಡಿಯು ಇದ್ದು ಅದರೊಳಗೆ ಮಂಚ, ಖಡ್ಗ, ಮಣಿಗಂಟೆ ಇರುತ್ತದೆ.
ದೇವಸ್ಥಾನದ ಒಳಗೆ ಅಂಗಣದಲ್ಲಿ ಬಲಭಾಗದ ಪೌಳಿಯಲ್ಲಿ ಸಪ್ತಮಾತೃಕಾ ವಿಗ್ರಹಗಳು ಇರುವುವು. ಅದರಲ್ಲಿ ಇರುವಂತಹ ವಿಗ್ರಹಗಳು ಶಿಲಾಮೂರ್ತಿಗಳಾಗಿದ್ದು, ಶಿಲ್ಪಿಯ ಶೈಲಿಯನ್ನಾಧರಿಸಿ ನಿರ್ಧರಿಸುವುದಾದರೆ ಈ ಬಿಂಬಗಳು ಕ್ರಿ.ಶ.10 ನೇ ಶತಮಾನದ ಸುಮಾರಿಗೆ ನಿರ್ಮಿಸಲ್ಪಟ್ಟಿರಬಹುದು. ಪ್ರತಿಯೊಂದು ಬಿಂಬವು 1-2 ಅಡಿಗಳಷ್ಟು ಎತ್ತರವಿದ್ದು ಲಲಿತಾಸನದಲ್ಲಿದೆ.
ಸೋಮನಾಥ ದೇವಾಲಯದ ಮೂಲಸ್ಥಾನ ದೇವತೆಯು ಈಶ್ವರ ಸೋಮನಾಥ ಲಿಂಗವನ್ನೊಳಗೊಂಡು, ಗರ್ಭಗೃಹವು ಚೌಕಕಾರದ ಒಂದು ಗುಡಿಯಾಗಿದೆ. ಇದು ಶಿಲೆಯಿಂದ ನಿರ್ಮಿತವಾದುದು. ಲಿಂಗದ ಎಡ ಮತ್ತು ಬಲಭಾಗ ಪೀಠದಲ್ಲಿ ಶಿವ ಪಾರ್ವತಿ ಬಲಿಮೂರ್ತಿಗಳಿವೆ. ಸಾಂಪ್ರದಾಯಿಕವಾಗಿ ಒಂದು ಕತ್ತಲೆ ಪ್ರದಕ್ಷಿಣೆ ಪಥವಿದೆ. ಗರ್ಭಗುಡಿಯ ದ್ವಾರದಲ್ಲಿ ಮೇಲೆ ಎದುರು ಎರಡು ಬದಿಯಲ್ಲಿ ಕಲ್ಲಿನಲ್ಲಿ ಕೆತ್ತಿದ ದ್ವಾರಪಾಲಕರ ವಿಗ್ರಹ ಇದೆ. ಗರ್ಭಗುಡಿಯ ದ್ವಾರದಲ್ಲಿ ಆನೆಕಲ್ಲುಗಳು ಆನೆಯ ಮುಖದ ಮತ್ತು ಮುಂದಣ ಎರಡು ಕಾಲುಗಳ ಶಿಲ್ಪವನ್ನೊಳಗೊಂಡಿದೆ. ಗರ್ಭಗೃಹದ ಎದುರಿರುವ ಮುಖಮಂಟಪವು ಸಾಮಾನ್ಯ ಶಿಲ್ಪದಿಂದೊಡಗೂಡಿದೆ. ಮಂಟಪದಲ್ಲಿ ಇರಿಸಲ್ಪಟ್ಟ ಶಿಲೆಯ ನಂದಿಯು 10-11 ನೇ ಶತಮಾನಕ್ಕೆ ಅನ್ವಯಿಸುವ ಶಿಲ್ಪವಾಗಿದೆ ಎಂದು ನಿರ್ಣಯಿಸಬಹುದು.
ಈ ದೇವಾಲಯವು ಎತ್ತರವಾದ ಏಕಶಿಲೆಯ ಮೇಲೆ ನಿರ್ಮಿತವಾಗಿದ್ದು ಇಲ್ಲಿಯ ದೇವರು ವಸಿಷ್ಠ ಮಹರ್ಷಿಯಿಂದ ಪ್ರತಿಷ್ಠೆ ಹೊಂದಿರಬಹುದೆಂದು ಸೋಮನಾಥನು ಇಲ್ಲಿ ಲಿಂಗರೂಪದಲ್ಲಿ ಷ್ರತಿಷ್ಠಾಪನೆಯಾಗಿರುವನು. ಹಿಂದೆ ರಾಜನೊಬ್ಬನು ತನ್ನ ಮಗಳ ಅಂಗವಸ್ತ್ರವನ್ನು ಮುಟ್ಟಿದ ಕಾರಣಕ್ಕಾಗಿ ತನ್ನ ಕೈಗಳನ್ನು ಕತ್ತರಿಸಲ್ಪಟ್ಟಿದ್ದನು. ವೈರಾಗ್ಯ ಹೊಂದಿದ ಆತ ಹಡಗಿನಲ್ಲಿ ಪರ್ಯಟನೆ ಹೊರಟು ಬರುವಾಗ ಸಮುದ್ರದಲ್ಲಿ ಬಿರುಗಾಳಿ ಬೀಸಿ ಹಡಗು ಸಹಿತವಾಗಿ ಆತ ಕಡಲ ಕಿನಾರೆಗೆ ಬಂದು ತಲುಪಿದ. ಆಗ ಈ ಪ್ರದೇಶದಲ್ಲಿ ಹುಲಿ ಮತ್ತು ಹಸು ಒಟ್ಟಿಗೆ ಮೇಯುತ್ತಿದ್ದುದನ್ನು ಕಂಡನು. ಈ ಪ್ರದೇಶದಲ್ಲಿ ಏನಾದರೂ ವಿಶೇಷತೆ ಇರಬಹುದೆಂದು ಭಾವಿಸಿದ ಆತ ದೇವಾಲಯದ ಮುಂಭಾಗದಲ್ಲಿರುವ ಅಶ್ವಥ ಮರದ ಕೆಳಗೆ ಮಲಗಿದನು. ಈ ಸಮಯದಲ್ಲಿ ಮೇಲೆ ಇರುವ ಸ್ಥಳದಲ್ಲಿ ಸೋಮನಾಥ ದೇವರ ಲಿಂಗವಿರುವುದು, ನೀನು ಅಲ್ಲಿ ದೇವಾಲಯ ಸ್ಥಾಪಿಸಿ ಸೋಮನಾಥ ದೇವರನ್ನು ಆರಾಧಿಸಿಕೊಂಡು ಬಂದಲ್ಲಿ ನಿನ್ನ ಕಷ್ಟಗಳು ಪರಿಹಾರವಾಗುವುದು ಎಂಬ ಅಶರೀರವಾಣಿಯಾಯಿತು. ಅದರಂತೆ ಆ ರಾಜನು ಇಲ್ಲಿ ದೇವಾಲಯವನ್ನು ನಿರ್ಮಿಸಿ ಪ್ರಥಮ ಪೂಜೆಗೆ ಆತನ ಕೈಗಳು ಮರುಜೋಡಣಿಗೊಂಡವು ಎಂಬ ಕಥೆಯು ಪ್ರಚಲಿತದಲ್ಲಿದೆ.
ಕ್ರಿ.ಶ.567 ರಿಂದ ಕ್ರಿ.ಶ.1325 ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯು ಅಲೂಪ ಅರಸರ ಸ್ವಾಧೀನದಲ್ಲಿತ್ತು. ಆಗ ಈ ದೇವಸ್ಥಾನವೂ ಕೂಡಾ ಅವರ ಆಡಳಿತಕ್ಕೆ ಒಳಪಟ್ಟಿರಬಹುದು. ಅದಕ್ಕಿಂತ ಮೊದಲು ಎಂದರೆ ಕ್ರಿ.ಶ. 6ನೇ ಶತಮಾನದ ವರೆಗೆ ಬನವಾಸಿಯಲ್ಲಿ ಕದಂಬ ವಂಶದ ರಾಜರು ರಾಜ್ಯವಾಳುತ್ತಿದ್ದಾಗ ಈ ತುಳು ರಾಜ್ಯವು ಅವರ ಸ್ವಾಧೀನದಲ್ಲಿತ್ತು. ಆಗ ಈ ದೇವಸ್ಥಾನವು ಅವರ ಆಡಳಿತಕ್ಕೆ ಒಳಗಾಗಿತ್ತು. ಅವರು ಶೈವರಾಗಿದ್ದುದಲ್ಲದೆ ಮಹಾಸೇನ ಕುಮಾರಸ್ವಾಮಿಯೂ, ಬ್ರಾಹ್ಮೀ, ಮಾಹೇಶ್ವರೀ, ಕೌಮಾರಿ, ವೈಷ್ಣವೀ, ವಾರಾಹೀ, ಇಂದ್ರಾಣಿ, ಚಾಮುಂಡಿ ಎಂಬ ಸಪ್ತ ಮಾತೃಕೆಯರೂ ಅವರ ಆರಾಧ್ಯ ದೇವರಾಗಿದ್ದರು.
ಮೂಡು ದಿಕ್ಕಿನ ಹೊರ ಗೋಪುರದ ಕೆಳಗೆ ಕರಿಶಿಲೆಯ ಸೋಪಾನ ಪಂಕ್ತಿಗಳು ಮುಗಿದೊಡನೆ ಪಂಚದುರ್ಗೆಯ ಗುಡಿಯೂ ಇದೆ. ಪಂಚದುರ್ಗೆಯರ ಹೆಸರು ಮೂಲದುರ್ಗಾ, ಜಲದುರ್ಗಾ, ಅಗ್ನಿದುರ್ಗಾ, ವನದುರ್ಗಾ, ಆಗ್ರದುರ್ಗಾ ಎಂದಾಗಿದೆ. ಉತ್ತರ ದಿಕ್ಕಿನಲ್ಲಿ ಭೀಮಸೇನನಿಂದ ನಿರ್ಮಿತವಾದುದೆಂದು ಹೇಳಲ್ಪಡುವ ವಿಶಾಲವಾದ ‘ಗದಾತೀರ್ಥ’ವೆಂಬ ಹೆಸರಿನ ಸರೋವರವಿದೆ.
ಬಾಗಿಲು ತೆರೆಯುವ ಸಮಯ:
06:00 AM IST – 01:00 PM IST
05:00 AM IST – 08:00 AM IST
ಬಾಗಿಲು ಮುಚ್ಚುವ ಸಮಯ:
01:00 AM IST – 05:00 AM IST








