ADVERTISEMENT
Tuesday, June 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೊರೋನಾದಿಂದ ರಕ್ಷಿಸಿಕೊಳ್ಳಲು ಅಮೃತ ಬಳ್ಳಿ ಎಂಬ ಇಮ್ಯುನಿಟಿ ಬೂಸ್ಟರ್

admin by admin
July 13, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಕೊರೋನಾದಿಂದ ರಕ್ಷಿಸಿಕೊಳ್ಳಲು ಅಮೃತ ಬಳ್ಳಿ ಎಂಬ ಇಮ್ಯುನಿಟಿ ಬೂಸ್ಟರ್

ಮಂಗಳೂರು, ಜುಲೈ 13: ‘ಅಮೃತ ಬಳ್ಳಿ’ – ಇದು ಸಾಮಾನ್ಯವಾಗಿ ಪ್ರತಿಯೊಬ್ಬರು ಕೇಳಿರಬಹುದಾದ, ಮನೆಮದ್ದಿನ ಅಥವಾ ಆಯುರ್ವೇದ ಪದ್ಧತಿಯಲ್ಲಿ ಉಪಯೋಗಿಸಲ್ಪಡುವ ಔಷಧೀಯ ಸಸ್ಯ. ಭಾರತವು ಅಸಂಖ್ಯಾತ ಔಷಧೀಯ ಸಸ್ಯಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ ‘ಅಮೃತ ಬಳ್ಳಿ’ ಅಗ್ರಸ್ಥಾನದಲ್ಲಿದೆ. ಅಮೃತ ಬಳ್ಳಿ ಅದ್ಭುತ ಔಷಧೀಯ ಗುಣಗಳನ್ನು ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಕಾರಣ ಇದನ್ನು ಸರ್ವರೋಗ ನಿವಾರಿಣಿ ಎಂದೂ ಕರೆಯುತ್ತಾರೆ.

Related posts

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ತೆರಿಗೆ ಹಣಕ್ಕಿಂತ ಜನರ ಆರೋಗ್ಯವೇ ಮುಖ್ಯ: ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ- ಮುಕ್ತ ಕರ್ನಾಟಕಕ್ಕೆ ಡಿ.ಕೆ. ಶಿವಕುಮಾರ್ ಖಡಕ್ ನಿರ್ಧಾರ

June 29, 2026
ಮೋದಿ ಸರ್ಕಾರದ ವಿದೇಶಾಂಗ ನೀತಿಗೆ ಸಕ್ಸಸ್ : ಶತ್ರುಗಳಿಗೆ ಹಾರ್ಮುಜ್ ಬಂದ್ ಮಿತ್ರ ಭಾರತಕ್ಕೆ ಮುಕ್ತ ಅವಕಾಶ ಟ್ರಂಪ್ ಬೆದರಿಕೆಗಳಿಗೆ ಕವಡೆ ಕಾಸಿನ ಬೆಲೆ ನೀಡದ ಇರಾನ್

ಸಿಎಂ ಸಿಂಹಾಸನ ನಶ್ವರ ಜನರ ಹೃದಯ ಸಿಂಹಾಸನ ಶಾಶ್ವತ: ಅಧಿಕಾರ ಹೋದರೂ ಕುಗ್ಗದ ವರ್ಚಸ್ಸು ಮಾಜಿ CM ಸಿದ್ದರಾಮಯ್ಯ ಭಾವನಾತ್ಮಕ ಪೋಸ್ಟ್

June 29, 2026

ಇದನ್ನು ಯುಗಯುಗದಿಂದಲೂ ಭಾರತೀಯ ಔಷಧದಲ್ಲಿ ಬಳಸುವ ‘ದೈವಿಕ’ ಸಸ್ಯವೆಂದು ಪರಿಗಣಿಸಲಾಗಿದೆ. ಈ ಗಿಡಮೂಲಿಕೆಯನ್ನು ಬಳಸಿಕೊಂಡು ಹಲವಾರು ಔಷಧಿಗಳನ್ನು ಭಾರತೀಯ ಆಯುರ್ವೇದ ಕಂಪನಿಗಳು ವಿವಿಧ ಬ್ರಾಂಡ್‌ಗಳ ಅಡಿಯಲ್ಲಿ ತಯಾರಿಸುತ್ತವೆ.
ಅಮೃತಬಳ್ಳಿಯು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿ. ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದೆ. ಅಮೃತಬಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನೂ ಪಡೆದಿದೆ.

ಕನ್ನಡದಲ್ಲಿ ಅಮೃತಬಳ್ಳಿ ಅಥವಾ ಅಮರದ ಬಳ್ಳಿ ಎಂದು ಕರೆಯಲ್ಪಡುವ ಇದರ ವೈಜ್ಞಾನಿಕ ಹೆಸರು ಟಿನೋಸ್ಪೋರಾ ಕಾರ್ಡಿಫೋಲಿಯ ಎಂದಾಗಿದೆ. ಸಂಸ್ಕೃತದಲ್ಲಿ ಇದನ್ನು ಆಮ್ರಾತಕ, ಮಧುಪರ್ಣಿ, ಗುಡುಚಿ, ಅಮೃತ, ವತ್ಸಾದನಿ, ಛಿನ್ನರುಹಾ, ಜೀವಂತಿಕಾ, ಸೋಮವಲ್ಲಿ, ತಂತ್ರಿಕಾಮೃತಾ ಎಂದು ಕರೆಯುತ್ತಾರೆ. ಅಮೃತಬಳ್ಳಿಯನ್ನು ಗುಡುಚಿ ಎಂದು ಕೂಡ ಸಾಮಾನ್ಯವಾಗಿ ಕರೆಯುತ್ತಾರೆ.


ಅಮೃತಬಳ್ಳಿಯ ಬೇರು, ಎಲೆ ಮತ್ತು ಕಾಂಡ ಹೀಗೆ ಎಲ್ಲದರಲ್ಲೂ ಔಷಧೀಯ ಗುಣವಿದ್ದರೂ ಕಾಂಡವನ್ನು ವಿವಿಧ ರೀತಿಯ ರೋಗಗಳ ನಿವಾರಣೆಗಾಗಿ ಪಾರಂಪರಿಕ ಮತ್ತು ಆಯುರ್ವೇದ ಔಷಧೀಯ ಪದ್ಧತಿಗಳಲ್ಲಿ ಬಳಸಲಾಗುತ್ತದೆ. ಕಾಂಡವನ್ನು ಹಸಿಯಾಗಿ, ಒಣಗಿಸಿ, ಅಥವಾ ಪುಡಿ ಮಾಡಿ ಕಷಾಯದ ರೂಪದಲ್ಲಿ ಸಾಮಾನ್ಯವಾಗಿ ಉಪಯೋಗಿಸಲಾಗುತ್ತದೆ.
ಪ್ರಸ್ತುತ ಸನ್ನಿವೇಶದಲ್ಲಿ ಮಾನವ ಕುಲವನ್ನು ಕಾಡುತ್ತಿರುವ ಕೊರೋನಾ ಎಂಬ ಸೋಂಕಿನಿಂದ ರಕ್ಷಿಸಿಕೊಳ್ಳಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಒಳ್ಳೆಯದು ಎಂಬುವುದು ಆಯುರ್ವೇದ ತಜ್ಞರ ಅಂಬೋಣ.
ಆಯುರ್ವೇದದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹಲವು ದಾರಿಗಳಿವೆ ಎಂದಿದ್ದಾರೆ ಆಯುರ್ವೇದ ವೈದ್ಯರಾದ ಡಾ. ಗಿರಿಧರ ಕಜೆ. ಅಮೃತಬಳ್ಳಿ ತೆಗೆದುಕೊಂಡು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಕಷಾಯ ತಯಾರಿಸಿ ಪ್ರತಿದಿನ ‌ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ‌ಡಾ. ಕಜೆ ಹೇಳಿದ್ದಾರೆ.

ಸಾಮಾನ್ಯ ಜ್ವರದಿಂದ ಹಿಡಿದು ಮಲೇರಿಯಾ, ವಿಷಮಶೀತ ಜ್ವರ, ಟೈಫೋಯಿಡ್, ಮೆದುಳುಜ್ಚರ, ಚಿಕನ್ ಗುನ್ಯಾ ಮುಂತಾದ ಜ್ವರ ನಿವಾರಣೆಗೆ ಅಮೃತ ಬಳ್ಳಿ ಪರಿಣಾಮಕಾರಿ. ಕಾಮಾಲೆ (ಜಾಂಡಿಸ್), ಮೂತ್ರಕೋಶ ಸಂಬಂಧಿ ತೊಂದರೆಗಳು, ವಿವಿಧ ರೀತಿಯ ಉದರ ರೋಗಗಳ ಉಪಶಮನಕ್ಕೆ ಕೂಡ ಅಮೃತಬಳ್ಳಿಯ ಕಾಂಡದ ಕಷಾಯವನ್ನು ಉಪಯೋಗಿಸುತ್ತಾರೆ. ಕೆಲವು ವಿಷಕಾರಿ ಕೀಟ ಹಾಗೂ ಹಾವಿನ ಕಡಿತದ ನಂಜಿನ ಚಿಕಿತ್ಸೆಯಲ್ಲಿ ಇದನ್ನು ಉಪಯೋಗಿಸಲಾಗುತ್ತದೆ. ಬಳ್ಳಿಯ ಕಾಂಡದ ಕಷಾಯದ ನಿಯಮಿತ ಸೇವನೆಯಿಂದ ಮಧುಮೇಹ (ಡಯಾಬೇಟಿಸ್), ರಕ್ತದೊತ್ತಡ (ಬಿ.ಪಿ), ಬೊಜ್ಜು (ಒಬೇಸಿಟಿ), ಪಾರ್ಶ್ವವಾಯು (ಸ್ಟ್ರೋಕ್), ಮತ್ತು ಹೃದಯದ ತೊಂದರೆಯನ್ನು ನಿವಾರಿಸಬಹುದಾಗಿದೆ ಎಂದು ಹೇಳಲಾಗಿದೆ. ‌ಅಮೃತಬಳ್ಳಿಯಲ್ಲಿ ಇರುವ ಆ್ಯಂಟಿ ಕ್ಯಾನ್ಸರ್ ಅಂಶಗಳು ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ನೋಡಿಕೊಂಡು ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲೂ ನೆರವಾಗುತ್ತದೆ.

ಅಮೃತ ಬಳ್ಳಿಯ ಉಪಯೋಗಗಳು

1. ಅಮೃತಬಳ್ಳಿ ಕಾಂಡವನ್ನು ತೆಗೆದುಕೊಂಡು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಕಷಾಯ ತಯಾರಿಸಿ ಪ್ರತಿದಿನ ‌ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಈ ಕಷಾಯವನ್ನು ಕುಡಿಯುವುದರಿಂದ ಎಲ್ಲಾ ರೀತಿಯ ವೈರಲ್‌ ಜ್ವರ ಬೇಗ ವಾಸಿಯಾಗುತ್ತದೆ.
2. ಕೆಮ್ಮು ಹೆಚ್ಚಾಗಿ ಕಫ ಬರುತ್ತಿದ್ದರೆ ಅಮೃತಬಳ್ಳಿ ರಸಕ್ಕೆ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ ಕೆಮ್ಮು ಕಡಿಮೆಯಾಗಿ ಕಫ ಕರಗುತ್ತದೆ.
3. ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ 5 ಮಿಲಿ ಅಮೃತಬಳ್ಳಿ ಬೇರು ಮತ್ತು ಹೂವಿನಿಂದ ತಯಾರಿಸಿದ ಜ್ಯೂಸ್‌ ಸೇವಿಸಿದರೆ ಬುದ್ಧಿ ಚುರುಕಾಗಿ ಸ್ಮರಣ ಶಕ್ತಿ ಹೆಚ್ಚುತ್ತದೆ.
4. ಮಂಡಿಗಳಲ್ಲಿ ನೋವಿದ್ದರೆ ಅಮೃತಬಳ್ಳಿ ಎಲೆಗಳನ್ನು ಹರಳೆಣ್ಣೆ ಜೊತೆಗೆ ಹುರಿದು ಮಂಡಿಯ ಮೇಲೆ ಕಟ್ಟಿದರೆ ನೋವು ಬೇಗ ಕಡಿಮೆಯಾಗುತ್ತದೆ.

5. ಪಿತ್ತ ಹೆಚ್ಚಾಗಿ ದೇಹದಲ್ಲಿ ಉರಿ ಇದ್ದರೆ ಅಮೃತಬಳ್ಳಿ ಜ್ಯೂಸ್‌ಗೆ ಜೀರಿಗೆ ಸೇರಿಸಿ ಸೇವಿಸಿದರೆ ಪಿತ್ತ ಕಡಿಮೆಯಾಗುತ್ತದೆ.
6. ಅಮೃತಬಳ್ಳಿ ಎಲೆಗಳ ರಸಕ್ಕೆ ಹಸುವಿನ ತುಪ್ಪ ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ದೇಹದಲ್ಲಿ ಬೇರೆ ಬೇರೆ ರೀತಿಯ ಸಂಧಿ ನೋವಿದ್ದರೆ ನೋವು ನಿವಾರಣೆಯಾಗುತ್ತದೆ.
7. ಅಮೃತಬಳ್ಳಿ ರಸಕ್ಕೆ ಹಸಿ ಶುಂಠಿ ರಸ ಬೆರೆಸಿ ಸೇವಿಸಿದರೆ ಸಂಧಿಗಳ ಊತ ಮತ್ತು ನೋವು ವಾಸಿಯಾಗುತ್ತದೆ.
8. ಅಮೃತಬಳ್ಳಿ ಎಲೆಗಳನ್ನು ರುಬ್ಬಿ ವೀಳ್ಯೆದೆಲೆ ಮೇಲೆ ಇಟ್ಟು ಗಾಯದ ಮೇಲೆ ಕಟ್ಟಿದರೆ ಗಾಯ ಬೇಗ ಗುಣವಾಗುತ್ತದೆ
9. ಅಮೃತಬಳ್ಳಿ, ನೆಗ್ಗಿಲು, ಅಶ್ವಗಂಧ, ನೆಲ್ಲಿ, ಶುಂಠಿಗಳನ್ನು ಸಮಪ್ರಮಾಣದಲ್ಲಿ ನಯವಾಗಿ ಪುಡಿಮಾಡಿ 10ಗ್ರಾಂನಷ್ಟು ಶುದ್ಧ ನೀರು ಹಾಕಿ ಕಷಾಯ ಮಾಡಿ ಒಂದು ಬಾರಿಗೆ ಒಂದು ಟೀ ಚಮಚದಷ್ಟು ಕುಡಿಯುವುದರಿಂದ ಮೂತ್ರಕೋಶದಲ್ಲಿರುವ ಕಲ್ಲುಗಳು ಕ್ರಮೇಣವಾಗಿ ಕರಗುತ್ತದೆ.
10. ಅಮೃತ ಬಳ್ಳಿಯ‌ ಎಲೆಗಳನ್ನು ರುಬ್ಬಿ ಅದಕ್ಕೆ ಅರಿಶಿನವನ್ನು ಸೇರಿಸಿ ಚರ್ಮದ ಮೇಲೆ ಹಚ್ಚಿದರೆ ಚರ್ಮರೋಗ ಗುಣವಾಗುತ್ತದೆ.

Tags: Amrutha balliAyurvedicAyurvedic DrugscoronavirusCOVID-19HerbalImmunitykarnatakaviralViralcoronavirus
ShareTweetSendShare
Join us on:

Related Posts

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ತೆರಿಗೆ ಹಣಕ್ಕಿಂತ ಜನರ ಆರೋಗ್ಯವೇ ಮುಖ್ಯ: ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ- ಮುಕ್ತ ಕರ್ನಾಟಕಕ್ಕೆ ಡಿ.ಕೆ. ಶಿವಕುಮಾರ್ ಖಡಕ್ ನಿರ್ಧಾರ

by Shwetha
June 29, 2026
0

ಬೆಂಗಳೂರು: ರಾಜ್ಯದ ಜನರ ಆರೋಗ್ಯದ ಹಿತದೃಷ್ಟಿಯಿಂದ ಪಾನ್ ಮಸಾಲ ಹಾಗೂ ಗುಟ್ಕಾವನ್ನು ಸಂಪೂರ್ಣವಾಗಿ ನಿಷೇಧಿಸಲು ಕರ್ನಾಟಕ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ರಾಜ್ಯದ ಬೊಕ್ಕಸಕ್ಕೆ ನೂರು ಕೋಟಿ...

ಮೋದಿ ಸರ್ಕಾರದ ವಿದೇಶಾಂಗ ನೀತಿಗೆ ಸಕ್ಸಸ್ : ಶತ್ರುಗಳಿಗೆ ಹಾರ್ಮುಜ್ ಬಂದ್ ಮಿತ್ರ ಭಾರತಕ್ಕೆ ಮುಕ್ತ ಅವಕಾಶ ಟ್ರಂಪ್ ಬೆದರಿಕೆಗಳಿಗೆ ಕವಡೆ ಕಾಸಿನ ಬೆಲೆ ನೀಡದ ಇರಾನ್

ಸಿಎಂ ಸಿಂಹಾಸನ ನಶ್ವರ ಜನರ ಹೃದಯ ಸಿಂಹಾಸನ ಶಾಶ್ವತ: ಅಧಿಕಾರ ಹೋದರೂ ಕುಗ್ಗದ ವರ್ಚಸ್ಸು ಮಾಜಿ CM ಸಿದ್ದರಾಮಯ್ಯ ಭಾವನಾತ್ಮಕ ಪೋಸ್ಟ್

by Shwetha
June 29, 2026
0

ಮೈಸೂರು: ಮುಖ್ಯಮಂತ್ರಿ ಸ್ಥಾನ ಎಂಬುದು ಶಾಶ್ವತವಲ್ಲ, ಅದು ಬಂದು ಹೋಗುವಂತದ್ದು. ಆದರೆ ಜನರ ಹೃದಯದಲ್ಲಿ ಪಡೆಯುವ ಸ್ಥಾನ ಎಂದಿಗೂ ಅಳಿಯದ ಶಾಶ್ವತ ಆಸ್ತಿ ಎಂದು ಮಾಜಿ ಮುಖ್ಯಮಂತ್ರಿ...

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಾವು ಕೇಂದ್ರದ ಪರ: ಕರ್ನಾಟಕವನ್ನು ಸ್ಲೀಪರ್ ಸೆಲ್ ಆಗಲು ಬಿಡುವುದಿಲ್ಲ ಎಂದ ಸಚಿವ ಪ್ರಿಯಾಂಕ್ ಖರ್ಗೆ

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಾವು ಕೇಂದ್ರದ ಪರ: ಕರ್ನಾಟಕವನ್ನು ಸ್ಲೀಪರ್ ಸೆಲ್ ಆಗಲು ಬಿಡುವುದಿಲ್ಲ ಎಂದ ಸಚಿವ ಪ್ರಿಯಾಂಕ್ ಖರ್ಗೆ

by Shwetha
June 29, 2026
0

ಬೆಂಗಳೂರು: ರಾಷ್ಟ್ರೀಯ ಭದ್ರತೆ ಮತ್ತು ದೇಶದ ಹಿತಾಸಕ್ತಿಯ ವಿಷಯ ಬಂದಾಗ ರಾಜ್ಯ ಸರ್ಕಾರವು ಯಾವಾಗಲೂ ಕೇಂದ್ರದ ಒಕ್ಕೂಟ ಸರ್ಕಾರದ ಪರವಾಗಿ ಇರುತ್ತದೆ. ಯಾವುದೇ ಕಾರಣಕ್ಕೂ ಕರ್ನಾಟಕವನ್ನು ದೇಶದ್ರೋಹಿಗಳ...

ಚಪ್ಪಲಿ ಎಸೆದವರೇ ಒಂದು ದಿನ ಪ್ರದೀಪ್ ಈಶ್ವರ್ ಗೆ ಹಾರ ಹಾಕ್ತಾರೆ: ಯುಟಿ ಖಾದರ್ ಭವಿಷ್ಯ

ಚಪ್ಪಲಿ ಎಸೆದವರೇ ಒಂದು ದಿನ ಪ್ರದೀಪ್ ಈಶ್ವರ್ ಗೆ ಹಾರ ಹಾಕ್ತಾರೆ: ಯುಟಿ ಖಾದರ್ ಭವಿಷ್ಯ

by Shwetha
June 29, 2026
0

ಮಂಗಳೂರು: ಕೆಂಪೇಗೌಡ ದಿನಾಚರಣೆಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಕಾರಿನ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ....

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು ನನ್ನ ಬೆಂಬಲದಿಂದಲೇ: ಎಚ್ಡಿಕೆ ಕಾಲೆಳೆದ ಶಾಸಕ ಜಿಟಿ ದೇವೇಗೌಡ

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು ನನ್ನ ಬೆಂಬಲದಿಂದಲೇ: ಎಚ್ಡಿಕೆ ಕಾಲೆಳೆದ ಶಾಸಕ ಜಿಟಿ ದೇವೇಗೌಡ

by Shwetha
June 29, 2026
0

ಮೈಸೂರು: ಜೆಡಿಎಸ್ ಹಿರಿಯ ನಾಯಕ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಅವರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ನೇರ ವಾಗ್ದಾಳಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram