LIC AAO Recruitment 2025 : ಭಾರತೀಯ ಜೀವ ವಿಮಾ ನಿಗಮದಲ್ಲಿ ಅಗತ್ಯ ಇರುವ ಅಸಿಸ್ಟಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆ :
ಅಸಿಸ್ಟಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಜೆನೆರಾಲಿಸ್ಟ್)
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 350 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ ಅರ್ಹತೆ ಹೊಂದಿರಬೇಕು.
ವಯೋಮಿತಿ :
ದಿನಾಂಕ 01 ಆಗಸ್ಟ್ 2025ಕ್ಕೆ ಅಭ್ಯರ್ಥಿಗಳು ಕನಿಷ್ಠ 21 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ವಯೋಮಿತಿ ಸಡಿಲಿಕೆ :
• ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷ
• ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷ
• ಪಿಡಬ್ಲ್ಯೂಬಿಡಿ (ಜನರಲ್) ಅಭ್ಯರ್ಥಿಗಳಿಗೆ – 10 ವರ್ಷ
• ಪಿಡಬ್ಲ್ಯೂಬಿಡಿ (ಎಸ್ಸಿ/ ಎಸ್ಟಿ) ಅಭ್ಯರ್ಥಿಗಳಿಗೆ – 15 ವರ್ಷ
• ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳಿಗೆ – 13 ವರ್ಷ
ವೇತನ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 88,635 ರಿಂದ ರೂ. 1,69,025 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ :
ಅಭ್ಯರ್ಥಿಗಳಿಗೆ ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ನಿಗದಿತ ಅರ್ಜಿ ಶುಲ್ಕದ ವಿವರ :
• ಎಸ್ಸಿ, ಎಸ್ಟಿ, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು – ರೂ. 85
• ಉಳಿದ ಅಭ್ಯರ್ಥಿಗಳು – ರೂ. 700
ಶುಲ್ಕ ಪಾವತಿಸುವ ವಿಧಾನ :
ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
• ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಆಗಸ್ಟ್ 16, 2025
• ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಸೆಪ್ಟೆಂಬರ್ 08, 2025
• ಪ್ರಿಲಿಮಿನರಿ ಪರೀಕ್ಷೆ ದಿನಾಂಕ : ಅಕ್ಟೋಬರ್ 03, 2025
• ಮುಖ್ಯ ಪರೀಕ್ಷೆ ದಿನಾಂಕ : ನವೆಂಬರ್ 08, 2025








