ಪ್ರಧಾನಿ ನರೇಂದ್ರ ಮೋದಿ, ಜೈಲಿನಲ್ಲಿ ಕೂತುಕೊಂಡೇ ಆದೇಶ ನೀಡುವುದು, ಅಥವಾ ಆಡಳಿತ ನಡೆಸುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಬಿಹಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮೋದಿ, PM, CM ಹಾಗೂ ಸಚಿವರನ್ನು ಪದಚ್ಯುತಿಗೊಳಿಸುವ ಉದ್ದೇಶ ಹೊಂದಿರುವ ಹೊಸ ಮಸೂದೆ ಬಗ್ಗೆ ಪ್ರತಿಪಕ್ಷದ ವಿರೋಧವನ್ನು ತಿರಸ್ಕರಿಸಿದರು. ಪ್ರಮುಖ ಹುದ್ದೆ ಹೊಂದಿರುವ ಜನ ಜೈಲಿನಿಂದ ಕಾರ್ಯನಿರ್ವಹಿಸಲು ಅವಕಾಶ ನೀಡಬಾರದು. ಈ ಮಸೂದೆ ಕ್ರಿಮಿನಲ್ ಹಿನ್ನೆಲೆಯ ಜನಪ್ರತಿನಿಧಿಗಳನ್ನು ವಜಾಗೊಳಿಸುವ ಗುರಿ ಹೊಂದಿದೆ ಎಂದು ಮೋದಿ ಹೇಳಿದರು.
ಪ್ರಧಾನಿ ಅವರ ಪ್ರಕಾರ, ದೇಶದ ಆಡಳಿತ ವ್ಯವಸ್ಥೆ ಶುದ್ಧವಾಗಿರಬೇಕಾದರೆ, ಅಪರಾಧ ಹಿನ್ನೆಲೆಯ ಜನಪ್ರತಿನಿಧಿಗಳು ಜನರ ತಲೆಯ ಮೇಲೆ ಕುಳಿತು ನಿರ್ಧಾರ ಕೈಗೊಳ್ಳಬಾರದು. ಜೈಲಿನಲ್ಲಿ ಕೂತು ಆದೇಶ ನೀಡುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆ. ಜನಸಾಮಾನ್ಯರ ಹಿತಾಸಕ್ತಿ ಕಾಪಾಡಲು ಈ ಮಸೂದೆ ಅಗತ್ಯ ಎಂದು ಮೋದಿ ಒತ್ತಿ ಹೇಳಿದರು.
ಪ್ರತಿಪಕ್ಷಗಳು ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರೂ, ಸರ್ಕಾರವು ಅದನ್ನು ಲೋಕಸಭೆಯಲ್ಲಿ ಮಂಡಿಸಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಚರ್ಚೆ ಹಾಗೂ ತೀರ್ಮಾನವಾಗುವ ನಿರೀಕ್ಷೆ ಇದೆ.








