ಭಾರತ–ಅಮೆರಿಕಾ ಆರ್ಥಿಕ ಸಂಬಂಧಗಳ ಬಗ್ಗೆ ಮಾತನಾಡಿದ US ಅರ್ಥಶಾಸ್ತ್ರಜ್ಞ ರಿಚರ್ಡ್ ವುಲ್ಫ್ ಹೊಸ ಹೋಲಿಕೆಯಿಂದ ಜಾಗತಿಕ ಗಮನ ಸೆಳೆದಿದ್ದಾರೆ.
ಭಾರತ ಏನು ಮಾಡಬೇಕೆಂದು ಅಮೆರಿಕಾ ಹೇಳುವುದು, ಇಲಿ ಆನೆಯನ್ನು ಗುದ್ದಿದಂತೆ. UN ಪ್ರಕಾರ ಭಾರತ ವಿಶ್ವದಲ್ಲೇ ಅತಿ ದೊಡ್ಡ ದೇಶ. ಹೀಗಿರುವಾಗ, ಅಮೆರಿಕಾ ತನ್ನ ಇಷ್ಟಕ್ಕೆ ತಕ್ಕಂತೆ ಒತ್ತಡ ಹೇರುವ ಪ್ರಯತ್ನ ವ್ಯರ್ಥ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕಾ ಭಾರತಕ್ಕೆ ಭಾರೀ ಟಾರಿಪ್ಸ್ (ಸುಂಕಗಳು) ವಿಧಿಸಿದರೆ, ಭಾರತ ತನ್ನ ವ್ಯಾಪಾರ ಸಂಬಂಧಗಳಿಗೆ ಇತರ ದೇಶಗಳನ್ನು ಆರಿಸಿಕೊಳ್ಳಲು ಹಿಂದೇಟು ಬೀಳುವುದಿಲ್ಲ ಎಂದು ವುಲ್ಫ್ ಎಚ್ಚರಿಕೆ ನೀಡಿದ್ದಾರೆ.
ಅವರು, ಅಮೆರಿಕಾ ತನ್ನ ಕ್ರಮಗಳ ಮೂಲಕ BRICS ಗುಂಪನ್ನು ಇನ್ನಷ್ಟು ಬಲಪಡಿಸುತ್ತಿದೆ. ಈಗಾಗಲೇ BRICS, G7 ಗುಂಪಿಗೆ ಪರ್ಯಾಯವಾಗಿ ಬೆಳೆಯುತ್ತಿದ್ದು, ವಿಶ್ವ ಉತ್ಪಾದನಾ ಪಾಲಿನಲ್ಲಿ BRICS ಈಗಾಗಲೇ G7 ಅನ್ನು ಮೀರಿಸಿದೆ ಎಂದು ಹೇಳಿದ್ದಾರೆ.
ಇದರ ಮೂಲಕ ಭಾರತ ಜಾಗತಿಕ ವೇದಿಕೆಯಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದ್ದು, ಅಮೆರಿಕಾ ಒತ್ತಡದ ರಾಜಕೀಯವು ತನ್ನ ಗುರಿ ತಲುಪಲು ವಿಫಲವಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ತಜ್ಞರ ಪ್ರಕಾರ, ಈ ಹೇಳಿಕೆ ಮುಂದಿನ ದಿನಗಳಲ್ಲಿ ಭಾರತ–ಅಮೆರಿಕಾ ವ್ಯಾಪಾರ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಬಹುದು.








