ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ತಗ್ಗುವ ಯಾವ ಲಕ್ಷಗಳೂ ಕಾಣುತ್ತಿಲ್ಲ. ಜುಲೈ 6ರಿಂದ 12ರವರೆಗೆ ದೇಶದಲ್ಲಿ 1.83 ಲಕ್ಷ ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, 3,466 ಮಂದಿ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 28,498 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದ್ದು, ಈ ಮೂಲಕ ದೇಶದಲ್ಲಿ ಒಟ್ಟಾರೆ 9,06,752ಕ್ಕೆ ಸೋಂಕಿತರ ಸಂಖ್ಯೆ ತಲುಪಿದೆ.
ಇನ್ನು ಮಂಗಳವಾರ ದೇಶದಾದ್ಯಂತ 553 ಜನರು ಸಾವನ್ನಪ್ಪುವುದರೊಂದಿಗೆ ಈ ವರೆಗೆ ಬಲಿಯಾದವರ ಸಂಖ್ಯೆ 23,727ಕ್ಕೆ ತಲುಪಿದೆ. ಇದರ ನಡುವೆಯೇ 9,06,752 ಮಂದಿ ಸೋಂಕಿತರ ಪೈಕಿ 5,71,460 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ., ಇನ್ನೂ ದೇಶದಲ್ಲಿ 3,11,565 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.







