ಗಾಝಿಯಾಬಾದ್ನಲ್ಲಿ ಬ್ಯಾಟಿಂಗ್ ಅಭ್ಯಾಸದಲ್ಲಿ ನಿರತರಾಗಿರುವ ರೈನಾ ಮತ್ತು ಪಂತ್
ಕೋವಿಡ್-19 ಸೋಕಿನಿಂದಾಗಿ ಕಳೆದ ನಾಲ್ಕೈದು ತಿಂಗಳುಗಳಿಂದ ಕ್ರಿಕೆಟ್ ಆಟಗಾರರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಸದಾ ಕ್ರಿಕೆಟ್ ನಲ್ಲಿ ಬಿಝಿಯಾಗಿರುತ್ತಿದ್ದ ಕ್ರಿಕೆಟ್ ಆಟಗಾರರು ಈಗ ಸಾಮಾಜಿಕ ಜಾಲ ತಾಣದಲ್ಲಿ ಬಿಝಿಯಾಗಿದ್ದಾರೆ. ಈ ನಡುವೆ ಕ್ರಿಕೆಟಿಗರು ಫಿಟ್ನೆಸ್ ಅಭ್ಯಾಸವನ್ನು ಮಾತ್ರ ಮರೆತಿಲ್ಲ. ಮನೆಯಲ್ಲೇ ಫಿಟ್ನೆಸ್ ಅಭ್ಯಾಸ ಮಾಡಿಕೊಂಡಿದ್ದಾರೆ. ಆದ್ರೆ ಮೈದಾನಕ್ಕೆ ಮಾತ್ರ ಯಾರು ಇಳಿದಿಲ್ಲ.
ಈ ನಡುವೆ ಮಹಮ್ಮದ್ ಶಮಿ, ಇಶಾಂತ್ ಶರ್ಮಾ, ಚೇತೇಶ್ವರ ಪೂಜಾರ ಸೇರಿದಂತೆ ಕೆಲವು ಕ್ರಿಕೆಟಿಗರು Àು ನೆಟ್ಸ್ ನಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಇದ್ರ ಬೆನ್ನಲ್ಲೇ ಸುರೇಶ್ ರೈನಾ ಮತ್ತು ರಿಷಬ್ ಪಂತ್ ಕೂಡ ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಗಾಝಿಯಾಬಾದ್ನಲ್ಲಿ ರೈನಾ ಮತ್ತು ಪಂತ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಸುರೇಶ್ ರೈನಾ ತನ್ನ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.
ಗಾಝಿಯಾಬಾದ್ನಲ್ಲಿ ಸುಮಾರು 3000 ಮಂದಿಗೆ ಕೊರೋನಾ ಸೋಂಕು ಹರಡಿದೆ. ಈ ನಡುವೆಯೂ ರೈನಾ ಮತ್ತು ಪಂತ್ ಮತ್ತೆ ತಮ್ಮ ಕ್ರಿಕೆಟ್ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಸುರೇಶ್ ರೈನಾ ಅವರು ಸದ್ಯ ಟೀಮ್ ಇಂಡಿಯಾದಲ್ಲಿಲ್ಲ. ತಂಡದಲ್ಲಿ ಸ್ಥಾನ ಪಡೆಯಲು ಒದ್ದಾಟ ನಡೆಸುತ್ತಿದ್ದಾರೆ. 2018ರ ಇಂಗ್ಲೆಂಡ್ ಸರಣಿಯ ನಂತರ ಸುರೇಶ್ ರೈನಾ ಟೀಮ್ ಇಂಡಿಯಾದಿಂದ ದೂರವೇ ಉಳಿದಿದ್ದಾರೆ. ಇದೀಗ ಮತ್ತೆ ಬ್ಯಾಟಿಂಗ್ ಲಯ ಕಂಡುಕೊಂಡು ತಂಡದಲ್ಲಿ ಸ್ಥಾನ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.
ಇನ್ನು ವಿಕೆಟ್ ಕೀಪರ್ ರಿಷಬ್ ಪಂತ್ ಕೂಡ ಅಷ್ಟೇ. ಕಳಪೆ ಫಾರ್ಮ್ನಿಂದಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ವಂಚಿತರಾಗಿದ್ದರು. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಂತರ ಪಂತ್ ಕೂಡ ತಂಡದಲ್ಲಿ ಕಾಣಿಸಿಕೊಂಡಿಲ್ಲ. ತಂಡದಲ್ಲಿ ಸ್ಥಾನ ಪಡೆಯಲು ರಿಷಬ್ ಪಂತ್ ಕೂಡ ಕಠಿಣ ಅಭ್ಯಾಸ ನಡೆಸಬೇಕಾಗಿದೆ.