ಮಹಿಳಾ ಪೊಲೀಸ್ ಅಧಿಕಾರಿಯನ್ನು ಕುರಿತು ಬಿಜೆಪಿ ಶಾಸಕ ಬಿ.ಪಿ. ಹರೀಶ್ ಬಳಕೆ ಮಾಡಿದ ಅವಾಚ್ಯ ಪದಪ್ರಯೋಗ ಇದೀಗ ಪಕ್ಷದ ತಲೆನೋವಾಗಿ ಪರಿಣಮಿಸಿದೆ.
ಹರೀಶ್ ಅವರು ಮಹಿಳಾ ಎಸ್‌ಪಿಯನ್ನು ಶ್ವಾನಕ್ಕೆ ಹೋಲಿಸಿ ಮಾತನಾಡಿದ್ದಾರೆ ಎಂಬ ಆರೋಪ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ಬಿಜೆಪಿ ರಾಷ್ಟ್ರಮಟ್ಟದಲ್ಲಿ ಆರೋಪ ಎತ್ತಿಕೊಂಡಿತ್ತು.
ಇದೀಗ ಪಕ್ಷದವರೇ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದು ಮುಜುಗರಕ್ಕೆ ಕಾರಣವಾಗಿದೆ. ಈ ಕುರಿತು ಶಾಸಕರಾದ ಬಿ.ಪಿ. ಹರೀಶ್ ಅವರಿಂದ ಪಕ್ಷವೇ ಸ್ಪಷ್ಟೀಕರಣ ಕೇಳುವ ಸಾಧ್ಯತೆ ಇದೆ.
ಈ ಬೆಳವಣಿಗೆ ಬಿಜೆಪಿ ಒಳಗೆ ಚರ್ಚೆಗೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಈ ವಿಷಯವನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.








