ಹೈದರಾಬಾದ್ : ಡೆಂಗ್ಯೂ ಬಂದಾಗ ರಕ್ತದಲ್ಲಿನ ಪ್ಲೇಟ್ ಲೆಟ್ಸ್ ಕಡಿಮೆ ಆಗೋದು ಯಾಕೆ ಎಂದು ಯೂನಿವರ್ಸಿಟಿ ಆಫ್ ಹೈದರಾಬಾದ್ ಲೈಫ್ ಸೈನ್ಸಸ್ ವಿಭಾಗದ ವಿಜ್ಞಾನಿಗಳು ತಿಳಿಸಿದ್ದಾರೆ. ವ್ಯಾಧಿಕಾರಕ ವೈರಸ್ ನಲ್ಲಿನ ಪ್ರೊಟೀನ್ ಒಂದು ಕಣಗಳಲ್ಲಿನ ಮೈಟೋಕಾಂಡ್ರಿಯಾ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಡೆಂಗ್ಯು ಬಂದಾಗ ನಮ್ಮ ದೇಹದಲ್ಲಿ ಪ್ಲೇಟ್ ಲೆಟ್ ಗಳು ಕಡಿಮೆ ಆಗುತ್ತದೆ ಎಂದು ತಾವು ನಡೆಸಿದ ಪ್ರಯೋಗದಲ್ಲಿ ಗೊತ್ತಾಗಿದೆ ಎಂದು ಡಾ. ಎಂ. ವೆಂಕಟ ರಮಣ, ಡಾ. ಎಸ್. ಸುರೇಶ್ ಬಾಬುಲು ತಿಳಿಸಿದ್ದಾರೆ.
ಸುಮಾರು 140 ದೇಶಗಳಲ್ಲಿ ತನ್ನ ಪ್ರಭಾವ ತೋರಿಸುತ್ತಿರುವ ಡೆಂಗ್ಯೂಗೆ ಈವರೆಗೂ ಸೂಕ್ತ ಲಸಿಕೆ ದೊರಕಿಲ್ಲ. ಈ ನೇಪಥ್ಯದಲ್ಲಿ ತಾವು ಡೆಂಗ್ಯೂ ಕಾರಕ ವೈರಸ್ ಮೇಲೆ ಪರಿಶೋಧನೆ ನಡೆಸುತ್ತಿರೋದಾಗಿ ವೈದ್ಯರು ಹೇಳಿದ್ದಾರೆ.
ಡೆಂಗ್ಯೂ ವೈರಸ್ ಒಟ್ಟು ಹತ್ತು ಪ್ರೋಟೀನ್ ಗಳನ್ನು ಹೊಂದಿರುತ್ತದೆ. ಇದರಲ್ಲಿನ ಎಸ್ ಎಸ್ ಪ್ರೊಟೀನ್, ಪ್ರತಿಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಎಸ್ ಎಸ್ 3 ಪ್ರೊಟೀನ್ ಕಣಕ್ಕೆ ಶಕ್ತಿ ಕೊಡೋ ಮೈಟೋಕಾಂಡ್ರಿಯಾ ಮ್ಯಾಟ್ರಿಕ್ಸ್ ಗೆ ಪ್ರವೇಶಿಸಿ ಜಿಆರ್ ಪಿಈಎಲ್ 1 ಅನ್ನೋ ಪ್ರೊಟೀನನ್ನು ಛಿದ್ರ ಮಾಡುತ್ತದೆ. ಇದು ಮೈಟೋಕಾಂಡ್ರಿಯಾ ಕೆಲಸದ ಮೇಲೆ ಪ್ರಭಾವ ಬೀರುತ್ತದೆ. ಈ ಕಾರಣಕ್ಕಾಗಿಯೇ ರಕ್ತದಲ್ಲಿನ ಪ್ಲೇಟ್ ಲೆಟ್ ಗಳು ಕಡಿಮೆ ಆಗುತ್ತವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಜಿಆರ್ ಪಿಈಎಲ್ 1 ಪ್ರೊಟೀನ್ ಆಧಾರದಲ್ಲಿ ಡೆಂಗ್ಯೂಗೆ ಸಮರ್ಥವಾದ ಔಷಧಿ ತಯಾರು ಮಾಡೋದಕ್ಕೆ ಈ ಪರಿಶೋಧನೆ ಉಪಯೋಗಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.