ಮದ್ದೂರು ಪಟ್ಟಣದಲ್ಲಿ ನಡೆದ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಬಿಜೆಪಿ ನಿಯೋಗ ಭಾಗವಹಿಸಿದ್ದು, ಈ ವೇಳೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸಿಟಿ ರವಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಮಾರಂಭದಲ್ಲಿ ಮಾತನಾಡಿದ ರವಿ,
ನಮಗೆ ತೊಡೆತಟ್ಟಿ ಸವಾಲು ಹಾಕಬೇಡಿ. ತೊಡೆ ಮುರಿಯುತ್ತೇವೆ, ತಲೆ ತೆಗೆಯುತ್ತೇವೆ. ಕಲ್ಲು ಹೊಡೆದವರನ್ನು ಕಲ್ಲಿನೊಳಗೆ ಸಮಾಧಿ ಮಾಡೋ ತಾಕತ್ ಹಿಂದೂ ಸಮಾಜಕ್ಕೆ ಇದೆ ಎಂದು ಘೋಷಿಸಿದರು.
ನಾವು ಟಿಪ್ಪು ಸುಲ್ತಾನನ್ನೇ ಬಿಡಲಿಲ್ಲ, ಅವನ ಅಪ್ಪನನ್ನೇ ಬಿಡಲಿಲ್ಲ. ಹಾಗಿರುವಾಗ ನೀವು ಲೆಕ್ಕಕ್ಕೇ ಬರೋದಿಲ್ಲ. ನಾವು ಹಿಂದೂಗಳ ವಿಚಾರದಲ್ಲಿ ರಾಜಕಾರಣ ಮಾಡೋದಿಲ್ಲ, ಆದರೆ ಹಿಂದುಗಳ ವಿರುದ್ಧ ನಡೆಯುವ ದ್ವೇಷದ ರಾಜಕಾರಣವನ್ನು ಸಹಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಅವರು ಕಿಡಿಕಾರಿದರು.
ಸಿಟಿ ರವಿ ಅವರ ಈ ಹೇಳಿಕೆ ಇದೀಗ ರಾಜಕೀಯ ಅಖಾಡದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.








