ರಷ್ಯಾದ ಮಾಜಿ ವಿಶ್ವ ನಂಬರ್ ಒನ್ ಶ್ರೇಯಾಂಕಾದ ಐದು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ವಿಜೇತ ಮಾರಿಯಾ ಶರಪೋವಾ ಅವರು ತಮ್ಮ 32 ನೇ ವಯಸ್ಸಿನಲ್ಲಿ ವೃತಿಪರ ಟೆನ್ನಿಸ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. “ಟೆನ್ನಿಸ್ಗೆ – ನಾನು ವಿದಾಯ ಹೇಳುತ್ತಿದ್ದೇನೆ” ಎಂದು ಶರಪೋವಾ ವೋಗ್ ಮತ್ತು ವ್ಯಾನಿಟಿ ಫೇರ್ ನಿಯತಕಾಲಿಕೆಗಳ ಲೇಖನದಲ್ಲಿ ಹೇಳಿದ್ದಾರೆ. ತನ್ನ ಯಶಸ್ಸಿನ ಒಂದು ಗುಟ್ಟನ್ನು ಅಂತರಾಳದಿಂದ ತೋಡಿಕೊಂಡ ಶರಪೋವಾ, “ನಾನು ಹಿಂದೆ ಮುಂದೆ ನೋಡಲಿಲ್ಲ ಮತ್ತು ನಾನು ಎಂದಿಗೂ ಎದುರು ನೋಡಲಿಲ್ಲ” ಎಂದು ಹೇಳಿದರು.

ಸಾಧನೆ
ಶರಪೋವಾ 2004 ರಲ್ಲಿ ತನ್ನ 17 ವಯಸಿನಲ್ಲಿ ವಿಂಬಲ್ಡನ್ ವಿಜೇತರಾಗಿ ಖ್ಯಾತಿ ಗಳಿಸಿದರು.
ಆಲ್ ಇಂಗ್ಲೆಂಡ್ ಕ್ಲಬ್‌ನ ಪವಿತ್ರವಾದ ಹುಲ್ಲಿನ ಅಂಕಣಗಳನ್ನು ಗೆದ್ದ ಮೂರನೆಯ ಕಿರಿಯ ಆಟಗಾರ.
2005 ರಲ್ಲಿ ವಿಶ್ವ ನಂಬರ್ ಒನ್ ಪಟ್ಟ.
2006 ರಲ್ಲಿ ಯುಎಸ್ ಓಪನ್ ಗೆದ್ದರು.
2007 ರಲ್ಲಿ ಶರಪೋವಾ ಭುಜದ ತೊಂದರೆಯಿಂದ ತನ್ನ ಸುದೀರ್ಘ ಯುದ್ಧವನ್ನು ಪ್ರಾರಂಭಿಸಿದರು .
2008 ರ ಆಸ್ಟ್ರೇಲಿಯನ್ ಓಪನ್ ಗೆದ್ದರು, ಆದರೆ ಯುಎಸ್ ಓಪನ್ ಮತ್ತು ಬೀಜಿಂಗ್ ಒಲಿಂಪಿಕ್ಸ್ ಅನ್ನು ತನ್ನ ಗಾಯದ ಸಮಸ್ಯೆಯಿಂದ ಕಳೆದುಕೊಂಡರು.
2012 ರಲ್ಲಿ, ಛಲ ಬಿಡದ ಆಕೆ ಮತ್ತೆ ಆಟದ ಮೈದಾನ ಬಂದ ಸೈಬೀರಿಯನ್ ಮೂಲದ ಶರಪೋವಾಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡರು , ವೃತ್ತಿಜೀವನದ ಗ್ರ್ಯಾಂಡ್ ಸ್ಲ್ಯಾಮ್ ಪೂರ್ಣಗೊಳಿಸಿದ 10 ನೇ ಮಹಿಳೆ ಅನ್ನುವ ಹೆಗ್ಗಳಿಕೆ ಇವರದು . ಆ ವರ್ಷ ಒಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಪಡೆದರು.
2014 ರ ಫ್ರೆಂಚ್ ಓಪನ್ ಪ್ರಶಸ್ತಿಯನ್ನುಗಾಯದ ಸಮಸ್ಯೆಯಲ್ಲೂ ತನ್ನದಾಗಿಸಿಕೊಂಡು ಟೆನ್ನಿಸ್ ಜಗತ್ತಿನಲ್ಲಿ ತನ್ನ ಮೇಲಿನ ನಂಬಿಕೆಯ ಮೇಲೆ ಗಾಯ ಒಂದು ಸಮಸ್ಯೆನೆ ಅಲ್ಲ ಅಂತ ನಿರೂಪಿಸಿದಳು.
2016 ರಲ್ಲಿ ನಿಷೇಧಿತ ಹೃದಯ ಸಂಬಂಧಿ ಮಾದಕ ದ್ರವ್ಯ ಸೇವನೆ ಮಾಡಿ 15 ತಿಂಗಳ ಕಾಲ ಟಿನ್ನಿಸ್ ಜೀವನದಿಂದ ದೂರ ಸರಿದರು. ಆದರೆ ಆಕೆಯ ಗಾಯದ ಸಮಸ್ಯೆ ಕೈಬಿಡಲಿಲ್ಲ.
ಶರಪೋವಾ 2017 ರಲ್ಲಿ ಮತ್ತೆ ಟೆನ್ನಿಸ್ ಮೈದಾನಕ್ಕೆ ಕಾಲಿಟ್ಟರು . ಆದರೆ ದೀರ್ಘಕಾಲದ ಭುಜದ ಸಮಸ್ಯೆಯಿಂದಾಗಿ ಆಕೆ ಕಳೆದ ವರ್ಷದಲ್ಲಿ ಅಷ್ಟೇನೂ ತನ್ನ ಆಟದ ಮೋದಿ ಮಾಡಲಿಲ್ಲ. ಆಡಿದ ವಿಂಬಲ್ಡನ್, ಯುಎಸ್ ಓಪನ್ ಮತ್ತು ಇತ್ತೀಚೆಗೆ ಮೆಲ್ಬೋರ್ನ್ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ನಲ್ಲಿ ಮೊದಲ ಸುತ್ತಿನಲ್ಲಿ ಹೊರಹಾಕಲ್ಪಟ್ಟಳು. “ನನ್ನ ಜೀವನವನ್ನು ಟೆನಿಸ್‌ಗೆ ನೀಡುವಲ್ಲಿ, ಟೆನಿಸ್ ನನಗೆ ಒಂದು ಜೀವನವನ್ನು ನೀಡಿತು” ಎಂದು ಶರಪೋವಾ ತನ್ನ ನಿವೃತ್ತಿ ಮಿಸ್ಸಿವ್‌ನಲ್ಲಿ ಹೇಳಿದರು.
ಏನೇ ಆಗಲಿ ತನ್ನ ಚಿಕ್ಕ ವಯಸ್ಸಿನಲ್ಲಿಯೇ ವಿಶ್ವ ಟೆನ್ನಿಸ್ ಲೋಕವನ್ನಾಳಿದ ಮಾದಕ ಬೆಡಗಿ ಇನ್ನು ದಂತ ಕತೆಯಷ್ಟೇ. 28 ವರ್ಷದ ಕಾಲ ತನ್ನ ಟೆನ್ನಿಸ್ ಜೀವನಕ್ಕೆ ವಿದಾಯ ಹೇಳಿದ ಆಕೆಯ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಆಶಿಸೋಣ.








