ಬಾಲಿವುಡ್ ನಟ ಸುಶಾಂತ್ ಸಿಂಗ್ ವಿಧಿವಶರಾಗಿ ಒಂದು ತಿಂಗಳು ಕಳೆದ ಬಳಿಕ ಅವರ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿ ಸುಶಾಂತ್ ರನ್ನ ನೆನೆದು ಪತ್ರ ಬರೆದು ತಮ್ಮ ದುಃಖವನ್ನು ಹೊರಹಾಕಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸುಶಾಂತ್ ರ ಜೊತೆಗಿನ ಒಡನಾಟದ ಬಗ್ಗೆ ಸುಧೀರ್ಘ ಪತ್ರ ಬರೆಯುವ ಮೂಲಕ ತಮ್ಮ ಭಾವನೆಗಳನ್ನ ಹಂಚಿಕೊಂಡಿದ್ದಾರೆ.
ಸುಶಾಂತ್ ನಿಧನದ ಬಳಿಕ ಬಾಲಿವುಡ್‌ನಲ್ಲಿ ನೆಪೋಟಿಸಂ ಆರೋಪಗಳು ಜೊತೆಗೆ ಸುಶಾಂತ್ ಗರ್ಲ್‌ಫ್ರೆಂಡ್ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬಂದಿದ್ವು. ಆದ್ರೆ ಈ ಬಗ್ಗೆ ರಿಯಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಸರಿಯಾಗಿ ಒಂದು ತಿಂಗಳು ಕಳೆದ ಬಳಿಕ ಮೌನ ಮುರಿದಿರುವ ರಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಸುಶಾಂತ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ನನ್ನ ಭಾವನೆಗಳನ್ನು ಎದುರಿಸಲು ಇನ್ನೂ ನಾನು ಹರಸಾಹಸ ಪಡುತ್ತಿದ್ದೇನೆ. ನನ್ನ ಹೃದಯದಲ್ಲಿ ಸರಿಪಡಿಸಲಾಗದ ನೋವು ಅ್ಚಳಿಯದೇ ಉಳಿದುಬಿಟ್ಟಿದೆ. ನನಗೆ ಪ್ರೀತಿಯಲ್ಲಿ ನಂಬಿಕೆ ಇಟ್ಟು, ಅದರ ಶಕ್ತಿ ತಿಳಿಸಿದ ಒಬ್ಬರೇ ವ್ಯಕ್ತಿ ಅಂದ್ರೆ ಅದು ಸುಶಾಂತ್. ನಾನು ಪ್ರತಿದಿನ ನಿಮ್ಮಿಂದ ಉತ್ತಮ ಪಾಠಗಳನ್ನು ಕಲಿತಿದ್ದೇನೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನೀವೀಗ ತುಂಬ ಶಾಂತಿಯಿರುವ ಜಾಗದಲ್ಲಿ ಇದ್ದೀರಿ ಎಂದು ಭಾವಿಸುತ್ತೇನೆ. ಚಂದ್ರ, ನಕ್ಷತ್ರಗಳು ಇರುವ ಜಾಗದಲ್ಲಿ ಸಂತೋಷದಿಂದ ತುಂಬಿರುವ ನೀವು ನನ್ನ ಶೂಟಿಂಗ್ ಸ್ಟಾರ್. ನೀವು ಮತ್ತೆ ನನ್ನ ಬಳಿಗೆ ಮರಳಿ ಬರಲಿ ಎಂದು ಬಯಸುತ್ತೇನೆ ರಿಯಾ ಹೇಳಿಕೊಂಡಿದ್ದಾರೆ.