ಸಿನಿಮಾ ನೋಡೋ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ. ಇನ್ನು ಮುಂದೆ ಮಲ್ಟಿಪ್ಲೆಕ್ಸ್ ಅಥವಾ ಸಿಂಗಲ್ ಸ್ಕ್ರೀನ್ ಎಲ್ಲಿ ನೋಡಿದ್ರೂ ಟಿಕೆಟ್ ದರ ಏರಿಳಿತ ಇಲ್ಲ.
ಸೆಪ್ಟೆಂಬರ್ 12ರಿಂದಲೇ ಏಕರೂಪ ಟಿಕೆಟ್ ದರ ಜಾರಿಗೆ ಬರುತ್ತದೆ.
ಟಿಕೆಟ್ ದರ ₹200 ಗಿಂತ ಹೆಚ್ಚು ಇರೋದಿಲ್ಲ.
ಇದರ ಮೇಲೆ 18% GST ಸೇರಿ ₹236 ಆಗಲಿದೆ.
ಹಿಂದಿನಂತೆ ಬಿಗ್ ಬಜೆಟ್ ಅಥವಾ ಪರಭಾಷಾ ಸಿನಿಮಾಗಳು ರಿಲೀಸ್ ಆದಾಗ ಟಿಕೆಟ್ ದರ ಏಕಾಏಕಿ ಏರಿಸಿ ಜನರಿಗೆ ಹೊರೆ ಹಾಕ್ತಿದ್ದರು. ಇದನ್ನ ತಪ್ಪಿಸೋಕೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಆದರೆ ಗಮನಿಸಿ: ಗೋಲ್ಡ್ ಕ್ಲಾಸ್ ಸೌಲಭ್ಯ ಇರುವ ಮಲ್ಟಿಪ್ಲೆಕ್ಸ್ಗಳಿಗೆ ಈ ನಿಯಮ ಅನ್ವಯವಾಗೋದಿಲ್ಲ.
ಒಟ್ಟಿನಲ್ಲಿ ಸಿನಿಮಾ ಅಭಿಮಾನಿಗಳಿಗೆ ಇನ್ನು ಮುಂದೆ ಪಾಕೆಟ್ ಫ್ರೆಂಡ್ಲಿ ಟಿಕೆಟ್ ದರ ಖಚಿತ!








