ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳಲ್ಲಿ ‘ನಮೋ ಡ್ರೋನ್ ದೀದಿ’ ಪ್ರಮುಖವಾಗಿದೆ. ಈ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಡ್ರೋನ್ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ.
ಸರ್ಕಾರ ಮಹಿಳಾ ಸಂಘಗಳಿಗೆ ಡ್ರೋನ್ ಖರೀದಿಸಲು 80% ಸಬ್ಸಿಡಿ ಒದಗಿಸುತ್ತಿದ್ದು, ಗರಿಷ್ಠ ₹8 ಲಕ್ಷ ವರೆಗೆ ರಿಯಾಯಿತಿ ಸಿಗಲಿದೆ. ಉಳಿದ ಹಣವನ್ನು ಮಹಿಳೆಯರು ಕೇವಲ ಶೇ.3 ನಾಮಮಾತ್ರ ಬಡ್ಡಿದರದಲ್ಲಿ ಸಾಲವಾಗಿ ಪಡೆಯಬಹುದು.
ಯೋಜನೆಯ ಉದ್ದೇಶ, ಮಹಿಳೆಯರು ಕೃಷಿ, ಸಮೀಕ್ಷೆ, ಪಶುಸಂಗೋಪನೆ ಹಾಗೂ ಬೇರೆ ಉದ್ಯೋಗ ಕ್ಷೇತ್ರಗಳಲ್ಲಿ ಡೋನ್ ಬಳಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವಂತಾಗಿದೆ. ಇದರೊಂದಿಗೆ ಗ್ರಾಮೀಣ ಆರ್ಥಿಕತೆಗೂ ಬಲ ಒದಗಲಿದೆ.
ಈ ಯೋಜನೆ ಗ್ರಾಮೀಣ ಮಹಿಳೆಯರಿಗೆ ತಂತ್ರಜ್ಞಾನ ಪ್ರವೇಶ ಹೆಚ್ಚಿಸುವುದರ ಜೊತೆಗೆ, ಅವರ ಆರ್ಥಿಕ ಸ್ವಾವಲಂಬನೆಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.








