ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ನಡೆ-ನುಡಿಗಳನ್ನು ತೀವ್ರವಾಗಿ ಟೀಕಿಸಿದರು. ಜಿಎಸ್ಟಿ ಮತ್ತು ಇತ್ತೀಚಿನ ಸ್ಲ್ಯಾಬ್ ಬದಲಾವಣೆಯ ವಿಚಾರವನ್ನು ಉಲ್ಲೇಖಿಸಿ, ಪ್ರಧಾನಿ ಜನರಿಗೆ ತಪ್ಪುಮಾಹಿತಿ ನೀಡಿ, ಕ್ರೆಡಿಟ್ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ನರೇಂದ್ರ ಮೋದಿ ಎಂಟು ವರ್ಷಗಳ ಹಿಂದೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯನ್ನು ಪ್ರಾರಂಭಿಸಿದ್ದರು. ಈಗ ಅದರಲ್ಲಿ ಸ್ಲ್ಯಾಬ್ಗಳನ್ನು ಬದಲಾವಣೆ ಮಾಡಿ ಕಡಿಮೆ ಮಾಡಿದ್ದೇವೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಆ ಬದಲಾವಣೆಗಳನ್ನು ಮಾಡಿಸಿದ್ದು ನಾವು. ಆದರೂ ಮೋದಿ ಕ್ರೆಡಿಟ್ ತಮ್ಮದಾಗಿ ತೆಗೆದುಕೊಳ್ಳುತ್ತಿದ್ದಾರೆ. ಹೀಗೆ ಮೋಸ ಮಾಡುವುದು ಜನತೆಗೆ ಟೋಪಿ ಹಾಕಿದಂತೆ, ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಮುಖ್ಯಮಂತ್ರಿಯವರು ತಮ್ಮ ಮಾತುಗಳಲ್ಲಿ, ಜನಸಾಮಾನ್ಯರು ಪ್ರಧಾನಿ ಮಾಡುತ್ತಿರುವ ಪ್ರಚಾರವನ್ನು ನೇರವಾಗಿ ನಂಬಬಾರದು. ಮೋದಿ ಹೇಗೆ ಟೋಪಿ ಹಾಕ್ತಾರೆ ಅಂತ ನೀವು ತಿಳಿದುಕೊಳ್ಳಬೇಕು. ಸ್ಪ್ಯಾಬ್ ಮಾಡಿದವರು ಯಾರು ಎಂಬುದನ್ನು ಜನತೆ ಅರಿತುಕೊಳ್ಳಬೇಕು, ಎಂದು ಜನರಿಗೆ ಎಚ್ಚರಿಕೆ ನೀಡಿದರು.








