ADVERTISEMENT
Thursday, August 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಕೇಂದ್ರದ ‘ಬಡವರ ವಿರೋಧಿ’ ನೀತಿಗಳ ವಿರುದ್ಧ ಸಚಿವ ಸಂತೋಷ್‌ ಲಾಡ್‌ ಗುಡುಗು: ನೋಟು ಅಮಾನ್ಯೀಕರಣ, ಜಿಎಸ್‌ಟಿ ವೈಫಲ್ಯಕ್ಕೆ ತೀವ್ರ ತರಾಟೆ!

Minister Santosh Lad thunders against the Centre's 'anti-poor' policies

Shwetha by Shwetha
September 25, 2025
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಚಿಕ್ಕಮಗಳೂರು: “ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ನೋಟು ಅಮಾನ್ಯೀಕರಣ, ಅವೈಜ್ಞಾನಿಕ ಜಿಎಸ್‌ಟಿ ಜಾರಿಯಂತಹ ತಪ್ಪು ನಿರ್ಧಾರಗಳಿಂದ ಬಡವರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಕಾರ್ಪೊರೇಟ್‌ಗಳಿಗೆ ಅನುಕೂಲ ಮಾಡಿಕೊಡುವುದನ್ನು ಬಿಟ್ಟು, ಜನಸಾಮಾನ್ಯರಿಗಾಗಿ ಒಂದೇ ಒಂದು ಕಾರ್ಯಕ್ರಮವನ್ನು ಜಾರಿಗೆ ತಂದಿಲ್ಲ,” ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತೀವ್ರ ವಾಗ್ದಾಳಿ ನಡೆಸಿದರು.

ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Related posts

saakshatv.com/shivarajkumar-pan-india-movie-koormavatar-official-announcement

ಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್ ಅಭಿನಯದ ಪ್ಯಾನ್-ಇಂಡಿಯಾ ಸಿನಿಮಾ ‘ಕೂರ್ಮಾವತಾರ್’ ಅಧಿಕೃತ ಘೋಷಣೆ; ಕುತೂಹಲ ಮೂಡಿಸಿದ ಟೈಟಲ್ ಟೀಸರ್

August 26, 2026
saakshatv.com/dr-vishnuvardhan-75th-birth-anniversary-amruthamahotsava-grand-event-bengaluru

ಸೆಪ್ಟೆಂಬರ್ 27ರಂದು ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’

August 26, 2026

ನೋಟು ಅಮಾನ್ಯೀಕರಣ: ಬಡವರ ಮೇಲೆ ಬರೆ

ನೋಟು ಅಮಾನ್ಯೀಕರಣದ ದಿನಗಳನ್ನು ನೆನಪಿಸಿಕೊಂಡ ಸಚಿವರು, “ಕೇವಲ 50 ದಿನಗಳಲ್ಲಿ ₹3 ಲಕ್ಷ ಕೋಟಿ ಕಪ್ಪು ಹಣವನ್ನು ಹೊರತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ, ರಾತ್ರೋರಾತ್ರಿ ₹15.43 ಲಕ್ಷ ಕೋಟಿ ಮೌಲ್ಯದ ₹500 ಹಾಗೂ ₹1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ್ದರಿಂದ ದೇಶದ ಬಡವರು ಬೀದಿಗೆ ಬಂದರು. ಬ್ಯಾಂಕ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು 130ಕ್ಕೂ ಹೆಚ್ಚು ಬಡವರು ಪ್ರಾಣ ಕಳೆದುಕೊಂಡರು. ಆ ಸಮಯದಲ್ಲಿ ಒಬ್ಬೇ ಒಬ್ಬ ಕಾರ್ಪೊರೇಟ್‌ ಉದ್ಯಮಿಗೆ ತೊಂದರೆಯಾಗಲಿಲ್ಲ, ಆದರೆ ಬಡವರ ಬದುಕು ಮೂರಾಬಟ್ಟೆಯಾಯಿತು,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಪೊರೇಟ್ ಪರ ನಿಲುವು, ರೈತರ ಕಡೆಗಣನೆ

ಕೇಂದ್ರದ ನೀತಿಗಳನ್ನು ಟೀಕಿಸಿದ ಅವರು, “ಖಾಸಗಿ ಕಂಪನಿಗಳಿಗೆ ನೀಡಬೇಕಿದ್ದ ಸಾಲದ ಮೇಲಿನ ಬಡ್ಡಿಯನ್ನು ಶೇ. 16ರಿಂದ ಶೇ. 15ಕ್ಕೆ ಇಳಿಸಿ, ಅವರಿಗೆ ₹11 ಲಕ್ಷ ಕೋಟಿ ಉಳಿತಾಯ ಮಾಡಿಕೊಟ್ಟಿತು. ಆದರೆ, ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ರೈತರ ₹73 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು. ನಮ್ಮ ಹಿಂದಿನ ರಾಜ್ಯ ಸರ್ಕಾರ ₹8.5 ಕೋಟಿ ಸಾಲ ಮನ್ನಾ ಮಾಡಿತ್ತು. ಬಿಜೆಪಿ ಸರ್ಕಾರ ರೈತರಿಗೆ ಏನು ಮಾಡಿದೆ?” ಎಂದು ಪ್ರಶ್ನಿಸಿದರು.

ಜಿಎಸ್‌ಟಿ ವೈಫಲ್ಯ ಮತ್ತು ‘ಪಪ್ಪು’ ಹೇಳಿಕೆ

ಜಿಎಸ್‌ಟಿ ಜಾರಿಯ ಕುರಿತು ಮಾತನಾಡಿದ ಲಾಡ್‌, “9 ವರ್ಷಗಳ ಹಿಂದೆ ಜಿಎಸ್‌ಟಿ ಜಾರಿಗೆ ತಂದಾಗ, ಇದೊಂದು ಅವೈಜ್ಞಾನಿಕ ಕ್ರಮ ಎಂದು ರಾಹುಲ್‌ ಗಾಂಧಿ ವಿರೋಧಿಸಿದ್ದರು. ಆಗ ಅವರನ್ನು ‘ಪಪ್ಪು’ ಎಂದು ಲೇವಡಿ ಮಾಡಿದರು. ಈಗ ತಮ್ಮ ತಪ್ಪಿನ ಅರಿವಾಗಿ ‘ಪಪ್ಪು’ ಎಂದವರೇ ಜಿಎಸ್‌ಟಿಯನ್ನು ಹಿಂಪಡೆಯುತ್ತಿದ್ದಾರೆ. ಈಗ ‘ಜನರೇಷನ್‌ ನೆಕ್ಸ್ಟ್ ಜಿಎಸ್‌ಟಿ’ ಎಂದು ಹೊಸ ಸ್ಲೋಗನ್‌ ಹೇಳುತ್ತಿದ್ದಾರೆ. ಇವರದ್ದು ಬರೀ ಘೋಷಣೆಗಳ ಸರ್ಕಾರ,” ಎಂದು ವ್ಯಂಗ್ಯವಾಡಿದರು.

ಕಲಾವಿದರ ಹಿತಕ್ಕೆ ‘ಸಿನಿ ಬಿಲ್’

ರಾಜ್ಯ ಸರ್ಕಾರದ ಹೊಸ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಸಚಿವರು, “ಸಿನಿಮಾ ಮತ್ತು ನಾಟಕ ಕ್ಷೇತ್ರದ ಕಲಾವಿದರು ಹಾಗೂ ತಂತ್ರಜ್ಞರ ಹಿತರಕ್ಷಣೆಗಾಗಿ ದೇಶದಲ್ಲೇ ಮೊದಲ ಬಾರಿಗೆ ‘ಸಿನಿ ಬಿಲ್’ ಸಿದ್ಧಪಡಿಸಲಾಗುತ್ತಿದೆ. ರಾಜ್ಯದಲ್ಲಿ ಸಿನಿಮಾ ಟಿಕೆಟ್‌ಗಳ ಮೇಲೆ ಶೇ. 2ರಷ್ಟು ಸೆಸ್‌ ವಿಧಿಸಿ, ಅದರಿಂದ ಸಂಗ್ರಹವಾಗುವ ಹಣವನ್ನು ಸಂಕಷ್ಟದಲ್ಲಿರುವ ಮೇಕಪ್‌ ಕಲಾವಿದರು, ಸಾಹಸ ಕಲಾವಿದರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನೋಂದಾಯಿತ ಪೌರಾಣಿಕ ನಾಟಕ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಲು ಬಳಸಲಾಗುವುದು,” ಎಂದು ಘೋಷಿಸಿದರು.

ರಾಜ್ಯದ ಗ್ಯಾರಂಟಿಗಳಿಗೆ ಮೆಚ್ಚುಗೆ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡ ಶಾಸಕ ಎಚ್‌.ಡಿ. ತಮ್ಮಯ್ಯ, “ಗ್ಯಾರಂಟಿಗಳಿಂದ ಜನರ ಜೀವನ ಮಟ್ಟ ಸುಧಾರಿಸಿದೆ, ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಆದರೆ ವಿಪಕ್ಷಗಳು ವಿನಾಕಾರಣ ಟೀಕಿಸುತ್ತಿವೆ. ಗ್ಯಾರಂಟಿಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ,” ಎಂದರು.

ದೇಶ ಜಗತ್ತಿಗೆ ಗುರುವಾಗಲಿ: ಸಿ.ಟಿ. ರವಿ

ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ, “ಅತಿ ಕಡಿಮೆ ಜಮೀನು ಹೊಂದಿರುವ ರೈತರನ್ನು ಕಾರ್ಮಿಕರೆಂದು ಪರಿಗಣಿಸಿ, ಅವರಿಗೆ ಸರ್ಕಾರದ ಸೌಲಭ್ಯಗಳನ್ನು ವಿಸ್ತರಿಸಬೇಕು. ಕಾರ್ಮಿಕರ ಮಕ್ಕಳಿಗೆ ಕೌಶಲ ತರಬೇತಿ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿದರೆ, ನಮ್ಮ ದೇಶ ಜಗತ್ತಿಗೆ ಗುರುವಾಗುವುದರಲ್ಲಿ ಸಂಶಯವಿಲ್ಲ,” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್‌. ಶ್ರೀನಿವಾಸ್‌, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ShareTweetSendShare
Join us on:

Related Posts

saakshatv.com/shivarajkumar-pan-india-movie-koormavatar-official-announcement

ಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್ ಅಭಿನಯದ ಪ್ಯಾನ್-ಇಂಡಿಯಾ ಸಿನಿಮಾ ‘ಕೂರ್ಮಾವತಾರ್’ ಅಧಿಕೃತ ಘೋಷಣೆ; ಕುತೂಹಲ ಮೂಡಿಸಿದ ಟೈಟಲ್ ಟೀಸರ್

by admin
August 26, 2026
0

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಮತ್ತೊಂದು ಬೃಹತ್ ಪ್ಯಾನ್-ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಶ್ರೀ ಮಹಾವಿಷ್ಣುವಿನ ಎರಡನೇ ಅವತಾರವಾದ 'ಕೂರ್ಮಾವತಾರ'ದ ಕಥಾಹಂದರವನ್ನು ಆಧರಿಸಿ ಸಿದ್ಧವಾಗುತ್ತಿರುವ ಈ...

saakshatv.com/dr-vishnuvardhan-75th-birth-anniversary-amruthamahotsava-grand-event-bengaluru

ಸೆಪ್ಟೆಂಬರ್ 27ರಂದು ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’

by admin
August 26, 2026
0

ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮವರ್ಷದ ಅಂಗವಾಗಿ ಆಯೋಜಿಸಲಾಗುತ್ತಿರುವ ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಇಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ...

saakshatv.com/karthik-sharma-directorial-bhavantara-kannada-movie-ready-for-release

ಕಾರ್ತಿಕ್ ಶರ್ಮ ನಿರ್ದೇಶನದ ‘ಭಾವಾಂತರ’ ಸಿನಿಮಾ ಬಿಡುಗಡೆಗೆ ಸಜ್ಜು: ಗಮನ ಸೆಳೆದ ವಿಭಿನ್ನ ಪೋಸ್ಟರ್

by admin
August 26, 2026
0

ಬೆಂಗಳೂರು: ‘ವೀರ ಕನ್ನಡಿಗ’, ‘ಮ್ಯಾಜಿಕ್ ಅಜ್ಜಿ’ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟನಾಗಿ ಹಾಗೂ 100ಕ್ಕೂ ಹೆಚ್ಚು ಧಾರಾವಾಹಿ-ಟಿವಿ ಶೋಗಳಿಗೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ಶರ್ಮ,...

saakshatv.com/nagabhushana-new-movie-announced-on-birthday-kasturi-talkies

ನಾಗಭೂಷಣ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ; 90ರ ದಶಕದ ಫ್ಯಾಮಿಲಿ ಡ್ರಾಮಾದಲ್ಲಿ ‘ಟಗರು ಪಲ್ಯ’ ಹೀರೋ

by admin
August 26, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ, 'ಟಗರು ಪಲ್ಯ' ಖ್ಯಾತಿಯ ನಾಗಭೂಷಣ್ ಅವರ ಜನ್ಮದಿನದ ಪ್ರಯುಕ್ತ ಅವರ ಹೊಸ ಚಿತ್ರದ ಅಧಿಕೃತ ಘೋಷಣೆಯಾಗಿದೆ. ಕಸ್ತೂರಿ ಟಾಕೀಸ್ ಬ್ಯಾನರ್‌ನಡಿ ನಿರ್ಮಾಪಕ...

saakshatv.com/sai-durga-tej-sambarala-yeti-gattu-shooting-completed-release-date-announced

ಸಾಯಿ ದುರ್ಗಾ ತೇಜ್ ನಟನೆಯ ಪ್ಯಾನ್-ಇಂಡಿಯಾ ಸಿನಿಮಾ ‘ಸಂಬರಾಲ ಯೇಟಿ ಗಟ್ಟು’ ಶೂಟಿಂಗ್ ಕಂಪ್ಲೀಟ್; 2027ರ ಸಂಕ್ರಾಂತಿಗೆ ರಿಲೀಸ್

by admin
August 26, 2026
0

ಮೆಗಾ ಸುಪ್ರೀಂ ಹೀರೋ ಸಾಯಿ ದುರ್ಗಾ ತೇಜ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಆ್ಯಕ್ಷನ್-ಡ್ರಾಮಾ 'ಸಂಬರಾಲ ಯೇಟಿ ಗಟ್ಟು' (SYG) ಚಿತ್ರದ ಸಂಪೂರ್ಣ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಪ್ರತಿಷ್ಠಿತ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram