ಪ್ರತಿದಿನದ ಪಾಠವನ್ನು ಅದೇ ದಿನ ಅಭ್ಯಾಸ ಮಾಡುತ್ತಿದ್ದೆ – ಅಭಿಜ್ಞಾ ರಾವ್
ಉಡುಪಿ, ಜುಲೈ 14: ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉಡುಪಿಯ ವಿದ್ಯೋದಯ ಪಪೂ ಕಾಲೇಜಿನ ವಿದ್ಯಾರ್ಥಿನಿ ಅಭಿಜ್ಞಾ ರಾವ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಪಿಸಿಎಂಸಿ ಹಾಗೂ ಸಂಸ್ಕೃತದಲ್ಲಿ 100 ಅಂಕ ಗಳಿಸಿದ್ದರೆ, ಇಂಗ್ಲಿಷ್‌ನಲ್ಲಿ 96 ಅಂಕ ಗಳಿಸಿದ್ದಾರೆ. ಪ್ರತಿದಿನದ ಪಾಠವನ್ನು ಅಂದೇ ಅಭ್ಯಾಸ ಮಾಡುತ್ತಿದ್ದೆ ಮತ್ತು ಕೊರೊನಾ ಹಿನ್ನಲೆಯಲ್ಲಿ ಇಂಗ್ಲಿಷ್ ಪರೀಕ್ಷೆ ಮುಂದೂಡಿದ ಕಾರಣ ನನಗೆ ಹೆಚ್ಚು ಓದಲು ಸಮಯ ಸಿಕ್ಕಿತು ಎಂದು ಅಭಿಜ್ಞಾ ರಾವ್ ಹೇಳಿದ್ದಾರೆ.
ನಿವೃತ್ತ ಪ್ರಾಂಶುಪಾಲ ದಿ. ವಿಠಲ ರಾವ್ ಮತ್ತು ಆಶಾ ರಾವ್ ಪುತ್ರಿಯಾಗಿರುವ ಅಭಿಜ್ಞಾ ರಾವ್ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದರು. ಮುಂದೆ ಕಂಪ್ಯೂಟರ್ ಇಂಜಿನಿಯರ್ ಆಗಬೇಕೆಂದಿದ್ದೇನೆ ಎನ್ನುವ ಅಭಿಜ್ಞಾ ಜೆಇಇ ಪರೀಕ್ಷೆ ಪಾಸಾಗಿದ್ದಾರೆ. ಅಧ್ಯಾಪಕರ, ಹೆತ್ತವರ ಪ್ರೋತ್ಸಾಹ ಮತ್ತು ಸಹಕಾರ, ಕಾಲೇಜಿನಲ್ಲಿರುವ ಉತ್ತಮ ಸೌಲಭ್ಯದಿಂದ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಅಭಿಜ್ಞಾ ಸಂತಸ ವ್ಯಕ್ತಪಡಿಸಿದ್ದಾರೆ.