ಕೋಲಾರದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡರಿಂದ ನೌಕರನ ಮೇಲೆ ಹಲ್ಲೆ
ಕೋಲಾರ: ಕೋಲಾರ ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರು ಶ್ರೀನಿವಾಸಪುರದ ಗೌನಿಪಲ್ಲಿ ಸೊಸೈಟಿ ನೌಕರನ ಮೇಲೆ ಹಲ್ಲೆ ನಡೆಸಿದ್ದಾರೆ. ಶ್ರೀನಿವಾಸಪುರ ಕ್ಷೇತ್ರದ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎದುರಲ್ಲಿಯೇ ಈ ಘಟನೆಯು ನಡೆದಿದೆ.
ಆದರೆ ಸದಾ ಅನ್ಯಾಯದ ಪರ ಧನಿ ಎತ್ತುವ ರಮೇಶ್ ಕುಮಾರ್ ರವರು ಸಹ ಸೈಲೆಂಟಾಗಿ ನೋಡುತ್ತಾ ಕುಳಿತಿದ್ದಾರೆ. ಇಂದು ಡಿಸಿಸಿ ಬ್ಯಾಂಕ್ ನ ಶ್ರೀನಿವಾಸಪುರದ ಶಾಖೆಯಲ್ಲಿ ಮಹಿಳೆಯರಿದ್ದ ಸಾಲಿನಲ್ಲಿ ನುಗ್ಗಿದ ವ್ಯಕ್ತಿಯ ಕೆನ್ನೆಗೆ ಬಾರಿಸಿದ್ದು ನಿಜ ಅಂತ ಬ್ಯಾಲಹಳ್ಳಿ ಗೋವಿಂದಗೌಡ ಪ್ರತಿಕ್ರಿಯಿಸಿದ್ದಾರೆ.
ಹಲ್ಲೆಗೆ ಒಳಗಾದ ವ್ಯಕ್ತಿ ಈ ಬಗ್ಗೆ ಯಾವುದೇ ದೂರು ಕೊಟ್ಟಿಲ್ಲ. ಈ ಘಟನೆಯಿಂದ ಕೋಲಾರ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರು ವಿವಾದಕ್ಕೆ ಸಿಲುಕಿದ್ದಾರೆ. ಮಂಗಳವಾರ ಮಧ್ಯಾಹ್ನ ಒಂದೂವರೆ ಸಮಯದಲ್ಲಿ ಡಿಸಿಸಿ ಬ್ಯಾಂಕಿನ ಶ್ರೀನಿವಾಸಪುರ ಶಾಖೆಯಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ವಿತರಣೆಯ ಕಾರ್ಯಕ್ರಮವಿತ್ತು. ಶ್ರೀನಿವಾಸಪುರ ಕ್ಷೇತ್ರದ ಶಾಸಕರೂ ಆದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು. ಈ ವೇಳೆಯಲ್ಲಿ ಬ್ಯಾಂಕ್ ಕೌಂಟರ್ ಬಳಿ ನಿಂತಿದ್ದ ಸೊಸೈಟಿ ನೌಕರನ ಕೆನ್ನೆಗೆ ಬ್ಯಾಲಹಳ್ಳಿ ಗೋವಿಂದಗೌಡ ಹೊಡೆದಿದ್ದಾರೆ.
ಕ್ರಮ ಸಂಖ್ಯೆ ಸರಿಯಾಗಿ ಇಟ್ಟುಕೊಳ್ಳದೆ ಏನು ಮಾಡಲು ಬಂದಿದ್ದೀಯ ಅಂತ ವ್ಯಕ್ತಿಯ ಕೆನ್ನೆಗೆ ಬ್ಯಾಲಹಳ್ಳಿ ಗೋವಿಂದಗೌಡ ಹೊಡೆದಿದ್ದಾರೆ. ಈ ವೇಳೆಯಲ್ಲಿ ಅಲ್ಲಿದ್ದ ಶಾಸಕ ರಮೇಶ್ ಕುಮಾರ್ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಅಂತ ಹೇಳುತ್ತಿರುವುದು ವಿಡಿಯೋದಲ್ಲಿದೆ. ಆದರೆ ಕೆನ್ನೆಗೆ ಬಾರಿಸಿದ್ದನ್ನು ಮಾಜಿ ಸ್ಪೀಕರ್ ಕಿಂಚಿತ್ತೂ ಪ್ರಶ್ನೆ ಮಾಡಿಲ್ಲ. ಕೌಂಟರ್ ಬಳಿ ಮಹಿಳೆಯರ ಸಾಲಿಗೆ ನುಗ್ಗಿದ ವ್ಯಕ್ತಿಯ ಕೆನ್ನಗೆ ಹೊಡೆದಿದ್ದ ನಿಜ ಅಂತ ಬ್ಯಾಲಹಳ್ಳಿ ಗೋವಿಂದಗೌಡ ಪ್ರತಿಕ್ರಿಯಿಸಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿಯು ಪ್ರತಿಕ್ರಿಯೆಗೆ ಸಿಕ್ಕಿಲ್ಲ. ನೆನ್ನೆ ತಾನೇ ಕೋಲಾರದ ಬಿಜೆಪಿ ಸಂಸದ ಮುನಿಸ್ವಾಮಿ ಡಿಸಿಸಿ ಬ್ಯಾಂಕ್ ಅದ್ಯಕ್ಷರ ನಡುವಳಿಕೆ ಮೇಲೆ ಅಕ್ರೋಶ ವ್ಯಕ್ತ ಪಡಿಸಿದ್ದರು. ಯಾರ ಅಪ್ಪನ ದುಡ್ಡನ್ನು ಜನರಿಗೆ ಕೊಡ್ತಿಲ್ಲ ಅದು ಸರ್ಕಾರದ ದುಡ್ಡು, ಯಾವುದೇ ಬೇಧಬಾವ ತೋರದೆ ಎಲ್ಲರಿಗೂ ಸಾಲ ನೀಡಬೇಕು ಎಂದಿದ್ದರು. ಈ ಹಿನ್ನೆಲೆಯಲ್ಲಿಯೇ ಈ ಘಟನೆ ನಡೆದಿದ್ದು ಅದ್ಯಕ್ಷರು ಬೇಜವಾಬ್ದಾರಿ ಹೆಚ್ಚಾಯಿತೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.








