ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಓಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಂದು ವಾರದ ಕಾಲ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆ ಕಿರಾಣಿ ಅಂಗಡಿ ಮತ್ತು ಮದ್ಯದಂಗಡಿಗಳಿಗೆ ಗ್ರಾಹಕರು ಮುಗಿಬಿದಿದ್ದರು. ಇನ್ನು ಲಾಕ್ ಡೌನ್ ಹಿನ್ನಲೆ ಒಂದು ವಾರದ ಕಾಲ ಮದ್ಯದಂಗಡಿಗಳು ಬಂದ್ ಆಗುವುದರಿಂದ ಭಾನುವಾರದಿಂದಲೇ ಗ್ರಾಹಕರು ಲಿಕ್ಕರ್ ಶಾಪ್ ಗಳ ಬಳಿ ಕ್ಯೂ ನಿಂತಿದ್ದರು. ಅದರಲ್ಲೂ ಸೋಮವಾರ ಬೆಂಗಳೂರಿನಲ್ಲಿ ಭಾರಿ ಪ್ರಮಾಣದ ಲಿಕ್ಕರ್ ಮಾರಾಟವಾಗಿದೆ ಎಂದು ರಾಜ್ಯ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಸೋಮವಾರ ಒಂದೇ ದಿನ 230 ಕೋಟಿ ರೂ. ಮೌಲ್ಯದಷ್ಟು ಮದ್ಯ ಮಾರಾಟವಾಗಿದೆ. ಸೋಮವಾರ ವಿಪರೀತ ಎನ್ನುವಷ್ಟು ಮದ್ಯ ಪ್ರಿಯರು ಲಿಕ್ಕರ್ ಮಳಿಗೆಗಳ ಮುಂದೆ ಸಾಲುಗಟ್ಟಿದ್ದರು. ಇಂಡಿಯಾ ಮೇಡ್ ವಿದೇಶಿ ಮದ್ಯ 215.55 ಕೋಟಿ ಮತ್ತು 14.83 ಕೋಟಿ ಮೌಲ್ಯದ ಬಿಯರ್ ಮಾರಾಟ ಮಾಡಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ: ವೋಟ್ ಬ್ಯಾಂಕ್ ಗಾಗಿ ದೇಶದ್ರೋಹಿಗಳಿಗೆ ಕಾಂಗ್ರೆಸ್ ರಕ್ಷಣೆ ಎಂದು ಛಲವಾದಿ ಆಕ್ರೋಶ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಗ್ಯುದ್ಧ ಈಗ ತಾರಕಕ್ಕೇರಿದ್ದು, ಪರಸ್ಪರ ವೈಯಕ್ತಿಕ ನಿಂದನೆ ಮತ್ತು ಗಂಭೀರ ಆರೋಪಗಳ ಸುರಿಮಳೆಯೇ ನಡೆಯುತ್ತಿದೆ. ಕೆಪಿಸಿಸಿ...








