ರೆಡ್ಮಿ ನೋಟ್ 9 ಭಾರತಕ್ಕೆ ಕಾಲಿಡುತ್ತಿದೆ. ಜುಲೈ 20 ರಂದು ಸ್ಮಾರ್ಟ್‌ಫೋನ್ ಅನಾವರಣಗೊಳ್ಳಲಿದೆ ಎಂದು ಅಧಿಕೃತ ರೆಡ್‌ಮಿ ಇಂಡಿಯಾ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.
ರೆಡ್ಮಿ ನೋಟ್ 9 ಪ್ರೊ ಮತ್ತು ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್ ಈಗಾಗಲೇ ಮೇ ತಿಂಗಳಲ್ಲಿ ದೇಶದಲ್ಲಿ ಬಿಡುಗಡೆಯಾಗಿದೆ. ಲಾಂಚ್ ಆನ್‌ಲೈನ್‌ನಲ್ಲಿ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ.
The moment we’ve all been waiting for! 🤩
The #UndisputedChampion, our next #MadeInIndia smartphone arrives on 20th July at 12 noon! 😎
Packed with best in class specs and highest quality that’s sure to make heads turn. 😉
RT & get notified: https://t.co/7Stn3uyFxr pic.twitter.com/EHgqapknO7
— Redmi India (@RedmiIndia) July 13, 2020
ಟೀಸರ್ ಚಿತ್ರವು ಫೋನ್‌ನಲ್ಲಿ ನಾಲ್ಕು ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ ಮತ್ತು ವೇಗದ ಚಾರ್ಜಿಂಗ್ ಬಗ್ಗೆ ಸುಳಿವು ನೀಡುತ್ತದೆ.
ರೆಡ್ಮಿ ನೋಟ್ 9 ಸ್ಕ್ರೀನ್ ಮೇಲಿನ ಎಡ ಮೂಲೆಯಲ್ಲಿ ಪಂಚ್-ಹೋಲ್ ಹೊಂದಿರುವ 6.53-ಇಂಚಿನ LED Display ಹೊಂದಿದೆ. 3 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್, ಹೆಲಿಯೊ ಜಿ 85 ಪ್ರೊಸೆಸರ್ ಇದೆ. 4 ಜಿಬಿ RAMಮತ್ತು 128 ಜಿಬಿ ಸ್ಟೋರೇಜ್ ಹೊಂದಿರುವ ವೇರಿಯಂಟ್ ಇದೆ. 48 MP + 8 MP + 2 MP + 2 MP ಕ್ವಾಡ್-ಕ್ಯಾಮೆರಾ ಸೆಟಪ್ ಫೋನ್‌ನ ಹಿಂಭಾಗದಲ್ಲಿ ಮತ್ತು 13 MP ಕ್ಯಾಮೆರಾ ಸೆಲ್ಫಿ.
5020mAh ಬ್ಯಾಟರಿ, 18W ಫಾಸ್ಟ್ ಚಾರ್ಜಿಂಗ್, NFC, IR ಬ್ಲಾಸ್ಟರ್, ಯುಎಸ್‌ಬಿ-ಸಿ ಪೋರ್ಟ್ ಮತ್ತು ಹಿಂಭಾಗದಲ್ಲಿ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇತರ ವೈಶಿಷ್ಟ್ಯಗಳಾಗಿವೆ.
ಭಾರತಕ್ಕೆ ಬರುವ ವೇರಿಯಂಟ್ ವಿಭಿನ್ನ RAM ಮತ್ತು ಸ್ಟೋರೇಜ್ ಸ್ವಲ್ಪ ವಿಭಿನ್ನಹೊಂದಿರಬಹುದು ಎಂದು ನಾವು ಭಾವಿಸುತ್ತೇವೆ. ಇದು ಎನ್‌ಎಫ್‌ಸಿ ಹೊಂದಿಲ್ಲದಿರಬಹುದು.








