ಪಾಂಡವರ ಅಗ್ರಜ, ಪರಶುರಾಮನ ಶಿಷ್ಯ, ಮಹಾನ್ ಧನುರ್ಧಾರಿ , ದುರ್ಯೋಧನನ ಪ್ರಿಯ ಮಿತ್ರ, ಮಹಾ ಯೋಧ ಮಹಾಭಾರತದ ಕರ್ಣನ ಬಗ್ಗೆ ಗೊತ್ತಿರದವರಾರು ಯಾರೂ ಇಲ್ಲ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಈಗ ಎಲ್ಲರ ಫೇವರೇಟ್. ಮಹಾಭಾರತದಲ್ಲಿನ ಮಹಾನ್ ವೀರ ಕರ್ಣನ ಪಾತ್ರವೂ ಜನರ ಅಚ್ಚುಮೆಚ್ಚಿನ ಪಾತ್ರಗಳಲ್ಲಿ ಒಂದು. ಈ ರೀಲ್ ಲೈಫ್ ನ ಕರ್ಣನ ರಿಯಲ್ ಲೈಫ್ ಹೇಗಿದೆ ಗೊತ್ತಾ..?
ಸೂರ್ಯ ಪುತ್ರ ಕುಂತಿಯ ಹಿರಿಯ ಪುತ್ರ, ತನ್ನ ದಿವ್ಯ ದೃಷ್ಠಿ, ಬಾಣ ಶಕ್ತಿಯಿಂದಲೇ ರಣರಂಗಕ್ಕೆ ಇಳಿದು, ಶಾಂತಚಿತ್ತ, ಆತ್ಮಬಲದಿಂದ ಎಲ್ಲಾ ಬಾಧೆಗಳನ್ನು ಎದುರಿಸವ ವೀರಾಧಿವೀರ ಸೂರ್ಯನ ಕವಚಧಾರಿ ಕರ್ಣನ ರಿಯಲ್ ಹೆಸರು ಎಹೆಮ್ ಶರ್ಮಾ… ಇವರು ಮೂಲತಹ ಸಲೀಂಪುರ ಬಿಹಾರದವರಾಗಿದ್ದು, 22 ಜುಲೈ 1989ರಲ್ಲಿ ಜನಿಸಿದ್ದಾರೆ. ಬಿಹಾರದ ಸೇಂಟ್ ಕ್ಷೇವಿಯರ್ ಸ್ಕೂಲ್‌ನಲ್ಲಿ ವಿದ್ಯಾಭಾಯಸ ಮುಗಿಸಿಕೊಂಡಿರುವ ಎಹೆಮ್ ಇಂಜಿನಿಯರಿಂಗ್ ಪದವಿಯನ್ನಇಂಜಿನಿಯರಿಂಗ್ ಟೆಕ್ನಾಲಜಿ ಇಂದೋರ್‌ನಲ್ಲಿ ಪಡೆದುಕೊಂಡಿದ್ದಾರೆ. ಇವರ ಪತ್ನಿ ಹೆಸರು ಪಲ್ಲವಿ ರಾಯ್. ಇವರಿಗೆ ಒಬ್ಬ ಮಗ ಸಹ ಇದ್ದಾನೆ.
ಚಿಕ್ಕನಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಎಹೆಮ್ ಮೊದಲ ಬಾರಿಗೆ ೨೦೦8ರಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ತೆರೆಕಂಡ ಚಾಂದ್ ಕೆ ಪಾರ್ ಚಲೋ ಎಂಬ ಧಾರಾವಾಹಿಯಲ್ಲಿ ಸಪರ‍್ಟಿಂಗ್ ರೋಲ್ ನಲ್ಲಿ ಕಾಣಿಸಿಕೊಂಡರು. ಈ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಎಹೆಮ್, ಬಳಿಕ ಅನೇಏಕ ಶೋಗಳಲ್ಲಿ ಅಭಿನಿಯಿಸಿದ್ರು. 2009ರಲ್ಲಿ ಬ್ಲೂ ಆರೇಂಜಸ್ ಚಿತ್ರದಲ್ಲಿ ನಡಿಸುವ ಮೂಲಕ ಬಿಗ್ screenಗೂ ಎಂಟ್ರಿಕೊಟ್ಟಿದ್ದರು. ಬಳಿಕ ಏ ಜೋ ಮೊಹಬ್ಬತ್ತೇ, ಕರ್ಲೇð ಪ್ಯಾರ್ ಕರ್ಲೇ , ಮೈ ಕಂಟ್ರಿ ಲ್ಯಾಂಡ್ ಸಿನೆಮಾಗಳಲ್ಲೂ ನಟನಾ ಅವಕಾಶ ಗಿಟ್ಟಿಸಿಕೊಂಡ್ರು. ಇದರ ಜೊತೆಜೊತೆಗೆ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದ ಎಹೆಮ್ ಸಾಥ್ ಫೇರೇ ಸಲೋನಿ ಕಾ ಸಫರ್, ಭೈರೇ ಪಿಯಾ, ಆಹಟ್, ಕಾಳಿ, ಏಕ್ ನಯೀ ಚೋಟಿ ಝಿಂದಗಿ, ಆಸ್‌ಮಾನ್ ಸೆ ಆಗೆ, ಫಿಯರ್ ಫೈಲ್ಸ್, ಸಿಐಡಿ, ಹಮ್ ನೇ ಲೇ ಲಿ ಹೇ ಶಪಥ್ ಹೀಗೆ ಅನೇಕ ದಾರಾವಾಹಿಗಳಲ್ಲಿ ಕಾಣಿಸಿಕೊಂಡರು ಅಷ್ಟು ಜನಪ್ರಿಯತೆ ಗಳಿಸಿರಲಿಲ್ಲ.
ಆದ್ರೆ ೨೦೧೩ ರಲ್ಲಿ ತೆರೆಕಂಡು ಜನಪ್ರಿಯತೆ ಗಳಿಸಿದ ಪೌರಾಣಿಕ ಧಾರಾವಾಹಿಯಲ್ಲಿನ ಕರ್ಣನ ಪಾತ್ರಕ್ಕೆ ಎಹೆಮ್ ಮನೆಮಾತಾಗಿಬಿಟ್ರು. ಕರ್ಣನ ಪಾತ್ರದಲ್ಲಿ ಅವರ ಅಭಿನಯ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಯ್ತು. ಹೀಗೆ ಮಹಾಭಾರತದಲ್ಲಿ ಹೆಸರುವಾಸಿಯಾದ ಎಹೆಮ್ ಅವರ ವೃತ್ತಿ ಜೀವನಕ್ಕೆ ಮಹಾಭಾರತ ರ‍್ನಿಂಗ್ ಪಾಯಿಂಟ್ ಎಂದೇ ಎನಿಸಿಕೊಳ್ತು. ಇದಾದ ಬಳಿಕ ದೋಸ್ತಿ ಮನ್ ಮರ್ಜಿಯಾ, ಭಾರತವರ್ಷ, ಬ್ರಹ್ಮರಾಕ್ಷಸದಂತಹ ಧಾರಾವಹಿಗಳಲ್ಲಿ ಎಹೆಮ್ ಬಣ್ಣ ಹಚ್ಚಿದ್ರು. ಆದ್ರೆ ಮಹಾಭಾರತದಷ್ಟೇ ಹೆಚ್ಚು ಪ್ರಖ್ಯಾತಿ ಪಡೆದದ್ದು, ಅವರ ವಿಕ್ರಮಾದಿತ್ಯನ ಪಾತ್ರ. ೨೦೧೯ರಲ್ಲಿ ತೆರೆಕಂಡ ವಿಕ್ರಮ ಬೇತಾಳ ಕಿ ರಹಸ್ಯ ಗಾಥಾದಲ್ಲಿ ರಾಜಾ ವಿಕ್ರಮನಾಗಿ ಮಿಂಚಿ ಜನರನ್ನ ರಂಜಿಸಿದ್ರು. ಮಹಾಭಾರತದಲ್ಲಿ ಹೊಸ ಗಾಥೆ ಬರೆದ ಕರ್ಣನ ಪಾತ್ರದಲ್ಲಿ ಮಿಂಚಿ ಜನ ಮನ್ನಣೆ ಪಡೆದ ಎಹೆಮ್ ಗೆ ಬೆಸ್ಟ್ ಆಕ್ಟರ್ ಇನ್ ಸಪರ‍್ಟಿಂಗ್ ರೋಲ್ ನ ಅವಾರ್ಡ್ ಸಿಕ್ಕಿದೆ. 








