ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸ್ಪಷ್ಟ ಸೂಚನೆ ನಡುವೆಯೂ ಕೊರೊನಾ ಸೋಂಕಿತರನ್ನು ದಾಖಲಿಸಿಕೊಳ್ಳಲು ಬೆಂಗಳೂರಿನ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿರುವುದು ಮುಂದುವರೆದಿದೆ. ಪರಿಣಾಮ ಸಕಾಲಕ್ಕೆ ಚಿಕಿತ್ಸೆ ಸಿಗದೆ ಉಸಿರಾಟದ ತೊಂದರೆಯಿಂದ ಬಳುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 58 ವರ್ಷದ ಸಿಬ್ಬಂದಿಯೊಬ್ಬರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಅವರು ಸಮೀಪದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋಗಿದ್ದಾರೆ. ಆದರೆ, ಖಾಸಗಿ ಆಸ್ಪತ್ರೆಯವರು ಅವರನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದಾರೆ.
ಬಳಿಕ ವ್ಯಕ್ತಿಯನ್ನು ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಬೆಡ್ ಇಲ್ಲ ಎಂಬ ನೆಪ ಹೇಳಿ ಸಿಬ್ಬಂದಿ ವಾಪಸ್ ಕಳಿಸಿದ್ದಾರೆ. ಬೇರೆ ದಾರಿಯಿಲ್ಲದೆ ವ್ಯಕ್ತಿಯನ್ನು ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಕೆ.ಸಿ ಜನರಲ್ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ದಾಖಲು ಮಾಡಿಕೊಳ್ಳದ ಕಾರಣ ಆಸ್ಪತ್ರೆ ಎದುರೇ ವ್ಯಕ್ತಿ ಮೃತಪಟ್ಟಿದ್ದಾರೆ.
ಕಳೆದ ವಾರವಷ್ಟೇ ದೇವನಹಳ್ಳಿ ಮೂಲದ ವೃದ್ಧೆಗೆ ಚಿಕಿತ್ಸೆ ಸಿಗದೇ ವಿಕ್ಟೋರಿಯಾ ಆಸ್ಪತ್ರೆ ಎದುರೇ ಮೃತಪಟ್ಟಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ಯಾರೇ ರೋಗಿಗಳು ಬಂದರೂ ಬೆಡ್ ಇಲ್ಲ ಎಂದು ದಾಖಲಿಸಿಕೊಳ್ಳದೆ ವಾಪಸ್ ಕಳಿಸುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದ್ದರು. ಆದರೆ, ಮುಖ್ಯಮಂತ್ರಿಗಳ ಯಾವ ಸೂಚನೆಗೂ ಆಸ್ಪತ್ರೆ ವೈದ್ಯರು ಹಾಗೂ ಮುಖ್ಯಸ್ಥರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದಕ್ಕೆ ಈ ಪ್ರಕರಣ ಮತ್ತೊಮ್ಮೆ ಸಾಬೀತಾಗಿದೆ.
ನಿನ್ನೆಯಷ್ಟೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರನ್ನು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಬೆಂಗಳೂರಿನ ವಸಂತನಗರದ ವಿಕ್ರಂ ಆಸ್ಪತ್ರೆ ಹಾಗೂ ಜಯನಗರದ ಅಪೊಲೋ ಆಸ್ಪತ್ರೆಗಳ ಒಪಿಡಿಯನ್ನು 2 ದಿನಗಳ ಕಾಲ ಬಂದ್ ಮಾಡಿಸಿ ಸರ್ಕಾರ ಬಿಸಿ ಮುಟ್ಟಿಸಿದೆ. ಆದರೂ ಖಾಸಗಿ ಆಸ್ಪತ್ರೆಗಳ ಮೊಂಡಾಟ ಮುಂದುವರೆದಿದೆ.
ಪಾಠ ಪರೀಕ್ಷೆ ಮೌಲ್ಯಮಾಪನದ ಬೆನ್ನಲ್ಲೇ ಶಿಕ್ಷಕರಿಗೆ ಜನಗಣತಿ ಕಂಟಕ ಬೇಸಿಗೆ ರಜೆಯೂ ಇಲ್ಲದೆ ಹೈರಾಣಾದ ಶಿಕ್ಷಕ ವರ್ಗದಿಂದ ತೀವ್ರ ಆಕ್ರೋಶ
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಸದ್ಯ ಬಿಡುವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಷಪೂರ್ತಿ ಪಾಠ, ಪ್ರವಚನ, ಬಿಸಿಯೂಟ ನಿರ್ವಹಣೆ ಸೇರಿದಂತೆ ನಾನಾ ಜವಾಬ್ದಾರಿಗಳನ್ನು ಹೊತ್ತು ಸುಸ್ತಾಗಿರುವ ಶಿಕ್ಷಕರಿಗೆ ಈಗ...








