ADVERTISEMENT
Saturday, December 6, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಬೆಂಗಳೂರು

ರಾಷ್ಟ್ರೀಯ ಕಾರ್ಟಿಂಗ್‌: ಬೆಂಗಳೂರಿನ ಇಶಾನ್‌ ಮಾದೇಶ್‌ಗೆ ಗೆಲುವು

National Karting Championship: Bengaluru’s Ishan Madesh Wins Title in Thrilling Final Race

Saaksha Editor by Saaksha Editor
November 9, 2025
in ಬೆಂಗಳೂರು, Newsbeat, State, ರಾಜ್ಯ
National Karting Championship: Bengaluru’s Ishan Madesh Wins Title in Thrilling Final Race

ರಾಷ್ಟ್ರೀಯ ಕಾರ್ಟಿಂಗ್‌ ಬೆಂಗಳೂರಿನ ಇಶಾನ್‌ ಮಾದೇಶ್‌ಗೆ ಗೆಲುವು

Share on FacebookShare on TwitterShare on WhatsappShare on Telegram

ಬೆಂಗಳೂರು, ನ. 09: ಮಿಕೊ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ರೊಟಾಕ್ಸ್‌ ಕಾರ್ಟಿಂಗ್‌ ಚಾಂಪಿಯನ್‌ಶಿಪ್‌ನ (National Karting Championship) 5 ಹಾಗೂ 6ನೇ ಸುತ್ತು ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯಿತು. ಬೆಂಗಳೂರಿನವರೇ (Bengaluru) ಆದ ಇಶಾನ್‌ ಮಾದೇಶ್‌ ಹಿರಿಯರ ವಿಭಾಗದಲ್ಲಿ ಅಮೋಘ ಗೆಲುವು ಸಾಧಿಸಿದರು.

ಇನ್ನು, ಮುಂಬೈನ ಕಿಯಾನ್‌ ಶಾ (ರಾಯೊ ರೇಸಿಂಗ್‌) ಕಿರಿಯರ ವಿಭಾಗದಲ್ಲಿ ಅಮೋಘ ಪ್ರದರ್ಶನ ತೋರಿ ಗಮನ ಸೆಳೆದರು. ರಾಯೊ ರೇಸಿಂಗ್‌ ತಂಡವನ್ನು ಪ್ರತಿನಿಧಿಸುವ, ಮುಂಬೈನವರೇ ಆದ ಕೃಷ್ ಗುಪ್ತಾ ಆಕರ್ಷಕ ಪ್ರದರ್ಶನದೊಂದಿಗೆ ಹಿರಿಯರ ವಿಭಾಗದ ಕೊನೆ 2 ಸುತ್ತುಗಳಲ್ಲಿ ಕ್ರಮವಾಗಿ 3 ಹಾಗೂ 2ನೇ ಸ್ಥಾನ ಗಳಿಸಿದರು.

Related posts

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

December 5, 2025
ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

December 5, 2025

ಈ ಫಲಿತಾಂಶಗಳ ಸಹಾಯದಿಂದ ಕಿಯಾನ್‌ ಹಾಗೂ ಕೃಷ್‌ ಇಬ್ಬರೂ, ತಮ್ಮ ತಮ್ಮ ವಿಭಾಗಗಳಲ್ಲಿ ಒಟ್ಟಾರೆ 2ನೇ ಸ್ಥಾನ ಗಳಿಸಿ ಸಂಭ್ರಮಿಸಿದರು. 5 ಹಾಗೂ 6ನೇ ಸುತ್ತುಗಳನ್ನು ಒಟ್ಟಿಗೆ ನಡೆಸಿದ ಕಾರಣ, ರೇಸರ್‌ಗಳ ಫಿಟ್ನೆಸ್‌ ಹಾಗೂ ಮಾನಸಿಕ ಸದೃಢತೆ ತೀವ್ರ ಪರೀಕ್ಷೆಗೆ ಒಳಪಟ್ಟಿತು. ಕಿರಿಯರ ವಿಭಾಗದ ಅರ್ಹತಾ ಸುತ್ತು, ಕಿಯಾನ್‌ ಪಾಲಿಗೆ ನಿರೀಕ್ಷಿತ ಫಲಿತಾಂಶ ತಂದುಕೊಡಲಿಲ್ಲ. ಪೋಲ್‌ ಪೊಸಿಷನ್‌ ಪಡೆದ ಚೆನ್ನೈನ ಶಿವನ್ ಕಾರ್ತಿಕ್‌ಗಿಂತ 0.352 ಸೆಕೆಂಡ್‌ ಹಿಂದೆ ಉಳಿದ ಕಿಯಾನ್‌, 5ನೇ ಸ್ಥಾನ ತೃಪ್ತಿಪಟ್ಟರು.

5ನೇ ಸ್ಥಾನದೊಂದಿಗೆ ರೇಸ್‌ ಆರಂಭಿಸಿದರೂ, ಕಿಯಾನ್‌ ಧೃತಿಗೆಡಲಿಲ್ಲ. ಬಹಳ ಬೇಗನೆ 2ನೇ ಸ್ಥಾನಕ್ಕೆತಲುಪಿದ ಅವರು, 1.45 ಸೆಕೆಂಡ್‌ಗಳಲ್ಲಿ ಕಾರ್ತಿಕ್‌ಗೆ ಮೊದಲ ಸ್ಥಾನ ಬಿಟ್ಟುಕೊಟ್ಟು 2ನೇ ಸ್ಥಾನ ಪಡೆದರು. ಪ್ರಿ-ಫೈನಲ್‌ನಲ್ಲಿ ಕಿಯಾನ್‌ 2ನೇ ಸ್ಥಾನದಲ್ಲಿ ರೇಸ್‌ ಆರಂಭಿಸಿ, 2ನೇ ಸ್ಥಾನದಲ್ಲೇ ರೇಸ್‌ ಮುಕ್ತಾಯಗೊಳಿಸಿದರು.

ಫೈನಲ್‌ನಲ್ಲಿ ಕಿಯಾನ್‌ ಉತ್ತಮ ಆರಂಭ ಪಡೆದರು. ಆರಂಭದಲ್ಲೇ ಮೊದಲ ಸ್ಥಾನ ಪಡೆದರು. ಆದರೆ, ಪುಣೆಯ ಕ್ರೆಸ್ಟ್‌ ಮೋಟಾರ್‌ಸ್ಪೋರ್ಟ್‌ನ ಅರಾಫತ್‌ ಶೇಖ್‌ರಿಂದ ಪ್ರಬಲ ಪೈಪೋಟಿ ಎದುರಾಯಿತು. ರೇಸ್‌ ಸಾಗಿದಂತೆ ಅಗ್ರಸ್ಥಾನಕ್ಕಾಗಿ ಐವರು ರೇಸರ್‌ಗಳ ನಡುವೆ ಮೆಗಾ ಪೈಪೋಟಿ ಶುರುವಾಯಿತು. ಕೊನೆಗೆ ಕಿಯಾನ್‌ ತಮ್ಮ ತಾಳ್ಮೆ ಕಾಪಾಡಿಕೊಂಡು ಚೆನ್ನೈನ ಎಶಾಂತ್‌ ವೆಂಕಟೇಶನ್‌ (ಎಂಸ್ಪೋರ್ಟ್‌)ರನ್ನು ಹಿಂದಿಕ್ಕಿ ಜಯಿಸಿದರು.

ಇದನ್ನೂ ಓದಿ: ಸ್ವಚ್ಛ ಭಾರತಕ್ಕಾಗಿ ವಂದೇ ಮಾತರಂ ವಾಕಥಾನ್

ಹಿರಿಯರ ವಿಭಾಗದಲ್ಲಿ 5ನೇ ಸುತ್ತಿನ ಅರ್ಹತಾ ರೇಸ್‌ನಲ್ಲಿ ಬೆಂಗಳೂರಿನ ಇಶಾನ್‌ ಮಾದೇಶ್‌ (ಪೆರಿಗ್ರೈನ್ ರೇಸಿಂಗ್‌) ಪೋಲ್‌ ಪೊಸಿಷನ್‌ ಪಡೆದರು. ಕೃಷ್‌ ಗುಪ್ತಾ 0.216 ಸೆಕೆಂಡ್‌ ಹಿನ್ನಡೆಯೊಂದಿಗೆ 2ನೇ ಸ್ಥಾನ ಪಡೆದರು. ಹಿರಿಯರ ವಿಭಾಗದಲ್ಲಿ ಚೊಚ್ಚಲ ಬಾರಿಗೆ ಸ್ಪರ್ಧಿಸಿದ ಕಿಯಾನ್ ಶಾ ಕೇವಲ 0.055 ಸೆಕೆಂಡ್‌ ಹಿನ್ನಡೆಯೊಂದಿಗೆ 3ನೇ ಸ್ಥಾನಿಯಾದರು.

ಹೀಟ್‌ 1ರಲ್ಲಿ ಮಾದೇಶ್ ಸುಲಭವಾಗಿ ಗೆದ್ದರು. ಪುಣೆಯ ಅರಾಫತ್‌ ಶೇಖ್‌ ಹಾಗೂ ಗುರುಗ್ರಾಮದ ಆರವ್‌ ದೆವಾನ್ (ಲೀಫ್‌ಫ್ರಾಗ್‌ ರೇಸಿಂಗ್‌)ರನ್ನು ಹಿಂದಿಕ್ಕಿದರು. ಪ್ರಿ ಫೈನಲ್‌ನಲ್ಲೂ ಮಾದೇಶ್‌ ಗೆಲುವು ಸಾಧಿಸಿದರು. ಹಿರಿಯರ ವಿಭಾಗದ ಫೈನಲ್‌ನಲ್ಲಿ ಬೆಂಗಳೂರಿನ ಮಾದೇಶ್‌ ಮೊದಲ ಸ್ಥಾನಿಯಾದರೆ, ದೆವಾನ್‌ ಹಾಗೂ ಕೃಷ್‌ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು. ಕಿಯಾನ್‌ ಶಾ ಮುಂದಿನ ವಾರಾಂತ್ಯದಲ್ಲಿ ಎಫ್‌ಐಎ ಕಾರ್ಟಿಂಗ್‌ ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಕೂಟವು ನ.15-16ರಂದು ಮಲೇಷ್ಯಾದಲ್ಲಿ ನಡೆಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Tags: Bengaluru racerGo-kart racing IndiaIndian motorsport newsIshan MadeshKarting BengaluruKarting championship winnersMotorsports India 2025National Karting ChampionshipNational karting resultsRacing talent Indiaಇಶಾನ್ ಮದೇಶ್ಕಾರ್ಟಿಂಗ್ ಬೆಂಗಳೂರುಕಾರ್ಟಿಂಗ್ ಸ್ಪರ್ಧೆ ಫಲಿತಾಂಶಗಳುಗೋ-ಕಾರ್ಟ್ ರೇಸಿಂಗ್ ಇಂಡಿಯಾಬೆಂಗಳೂರು ರೇಸರ್ಭಾರತೀಯ ಮೋಟಾರ್‌ಸ್ಪೋರ್ಟ್ ಸುದ್ದಿಮೋಟಾರ್ ರೇಸಿಂಗ್ ಸುದ್ದಿರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್ರೇಸಿಂಗ್ ಪ್ರತಿಭೆ ಭಾರತ
ShareTweetSendShare
Join us on:

Related Posts

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

by admin
December 5, 2025
0

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ ಜೀವನದ (Life) ಕಂಪನಗಳನ್ನು ಗ್ರಹಗಳ ಚಲನೆಯಿಂದ ಪ್ರಭಾವಿತವಾಗಿರುವ ಮಂತ್ರಗಳನ್ನು (Mantra) ಪಠಿಸುವುದರಿಂದ ಸಮನ್ವಯಗೊಳಿಸಬಹುದು, ಜೀವನದ ಅನೇಕ...

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

by admin
December 5, 2025
0

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ...! ಅಡಕೆ ಕೃಷಿ ನಮ್ಮ ಜೀವಾಳ..ಇಡೀ ಕರಾವಳಿ, ಮಲೆನಾಡು ಕೃಷಿಕರ ಬದುಕನ್ನು ಹಸನಾಗಿಸಿರೋದು ಇದೇ ಅಡಕೆ ಬೆಳೆ. ಹೌದು.. ಹಚ್ಚ ಹಸಿರಿನಿಂದ ಕಂಗೊಳಿಸುವ...

ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

by Shwetha
December 5, 2025
0

ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಎಂದು ಸುಳ್ಳು ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಭ್ರಷ್ಟಾಚಾರದ ತೊಟ್ಟಿಯಲ್ಲಿ ಮುಳುಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ...

ರೂಪಾಯಿ ಮೌಲ್ಯ ಕುಸಿತ: ‘ನಮ್ಮ ರೂಪಾಯಿಗೆ ಜಗತ್ತಿನಲ್ಲಿ ಬೆಲೆಯೇ ಇಲ್ಲ’ — ಖರ್ಗೆ

ರೂಪಾಯಿ ಮೌಲ್ಯ ಕುಸಿತ: ‘ನಮ್ಮ ರೂಪಾಯಿಗೆ ಜಗತ್ತಿನಲ್ಲಿ ಬೆಲೆಯೇ ಇಲ್ಲ’ — ಖರ್ಗೆ

by Shwetha
December 5, 2025
0

ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದಿರುವ ಹಿನ್ನೆಲೆ, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಕಿಡಿ ಕಾರಿದ್ದಾರೆ. ರೂಪಾಯಿ...

ಸಂಚಾರ್ ಸಾಥಿ ಆಪ್ ಕಡ್ಡಾಯವಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

ಸಂಚಾರ್ ಸಾಥಿ ಆಪ್ ಕಡ್ಡಾಯವಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

by Shwetha
December 5, 2025
0

ದೇಶದಲ್ಲಿ ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಸೈಬರ್​ ಭದ್ರತಾ ಆಪ್ ಅನ್ನು ಕಡ್ಡಾಯವಾಗಿ ಪೂರ್ವ ಅಳವಡಿಕೆ ಮಾಡುವಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಇದೀಗ ಹಿಂಪಡೆಯಲಾಗಿದೆ. ಈ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram