ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆ, ಮತ್ತು ಪಕ್ಷದ ಸಭೆಗೆ ಗೈರು ಹಾಜರಾದ ಕಾರಣ ಸಚಿನ್ ಪೈಲಟ್ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನ ಹಾಗೂ ಡಿಸಿಎಂ ಪದವಿಯಿಂದ ಕೆಳಗಿಳಿಸಲಾಗಿದೆ. ಇದೀಗ ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಪೈಲಟ್ ವಿರುದ್ಧ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಕಿಡಿಕಾರಿದ್ದು, ಅವರ ವಯಸ್ಸು ಎಷ್ಟು ಎಂದು ಪ್ರಶ್ನಿಸಿದ್ದಾರೆ.
ಸಚಿನ್ ಪೈಲಟ್ ವಿಚಾರವಾಗಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಚಿನ್ ಅವರನ್ನು ಸಂಸದರನ್ನಾಗಿ ಮಾಡಿತ್ತು. ಅಲ್ಲದೇ ಕೇಂದ್ರ ಸಚಿವ ಸ್ಥಾನವನ್ನು ನೀಡಿತ್ತು. ರಾಜಸ್ಥಾನ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರ ಸ್ಥಾನ ಹಾಗೂ ರಾಜ್ಯದ ಡಿಸಿಎಂ ಪದವಿಯನ್ನು ಅವರಿಗೆ ನೀಡಿದೆ. ಅವರ ವಯಸ್ಸು ಎಷ್ಟು? ಅವರು ಇನ್ನು ಯುವಕರಿದ್ದು, ಅವರಿಗೆ ತಾಳ್ಮೆಯ ಅಗ್ಯವಿದೆ. ಅವರ ನಡೆ ಪಕ್ಷದ ಶಿಸ್ತಿಗೆ ಧಕ್ಕೆ ತಂದಿದ್ದು, ಈ ಯುವಕರಿಗೆ ತಾಳ್ಮೆಯೇ ಇಲ್ಲ ಬೇಸರ ವ್ಯಕ್ತಪಡಿಸಿದ್ದಾರೆ.








