ತವರಿನಲ್ಲಿ ಟೀಮ್ ಇಂಡಿಯಾಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ಯಂಗ್ ಇಂಡಿಯಾದ ಮೇಲೆ ಸಾಕಷ್ಟು ಸವಾಲುಗಳಿವೆ. ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಸರಣಿಯನ್ನು 2-2ರಿಂದ ಸಮಮಾಡಿಕೊಂಡಿರುವ ಟೀಮ್ ಇಂಡಿಯಾ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದು ಸಹಜವಾಗಿಯೇ ಗಿಲ್ ಹುಡುಗರ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ರೂ ಈಗ ಎದುರಿಸುತ್ತಿರುವುದು ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎಂಬುದನ್ನು ಮರೆಯುವ ಹಾಗಿಲ್ಲ.
ಹಾಗೇ ನೋಡಿದ್ರೆ ತವರಿನಲ್ಲಿ ಟೀಮ್ ಇಂಡಿಯಾವನ್ನು ಮಣಿಸುವುದು ಅಂದುಕೊಂಡಷ್ಟು ಸುಲಭವಿಲ್ಲ. ಕಳೆದ 12 ವರ್ಷಗಳಲ್ಲಿ ಸತತ 18 ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡು ತವರಿನ ಹುಲಿ ಎಂಬ ಖ್ಯಾತಿ ಪಡೆದಿದ್ದ ಟೀಮ್ ಇಂಡಿಯಾದ ಗರ್ವಭಂಗ ಮಾಡಿದ್ದು ಕಳೆದ ವರ್ಷ ನ್ಯೂಜಿಲೆಂಡ್. ಮೂರು ಟೆಸ್ಟ್ ಪಂದ್ಯಗಳನ್ನು ಗೆದ್ದು ಬೀಗಿದ್ದ ನ್ಯೂಜಿಲೆಂಡ್ ಟೀಮ್ ಇಂಡಿಯಾಗೆ ಎಚ್ಚರಿಕೆಯ ಕರೆಯನ್ನು ನೀಡಿದ್ದು ಈಗ ಇತಿಹಾಸ.
ಇದೀಗ ದಕ್ಷಿಣ ಆಫ್ರಿಕಾ ಕೂಡ ಭಾರತದಲ್ಲಿ 15 ವರ್ಷಗಳ ನಂತರ ಸರಣಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಸದ್ಯ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯನ್ನು 1-1ರಿಂದ ಗೆದ್ದುಕೊಂಡಿರುವ ಹರಿಣಗಳು ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಉಮೇದಿನಲ್ಲಿದೆ.
ಹಾಗೇ ನೋಡಿದ್ರೆ, ಈ ಹಿಂದಿನ ಅಂಕಿಅಂಶಗಳು ದಕ್ಷಿಣ ಆಫ್ರಿಕಾಗೆ ಪೂರಕವಾಗಿವೆ. ಉಭಯ ತಂಡಗಳು ಈಗಾಗಲೇ 16 ಟೆಸ್ಟ್ ಸರಣಿಗಳನ್ನು ಆಡಿವೆ. ಇದರಲ್ಲಿ ಎಂಟು ಸರಣಿಗಳನ್ನು ದಕ್ಷಿಣ ಆಫ್ರಿಕಾ ಗೆದ್ದುಕೊಂಡ್ರೆ, ಭಾರತ ನಾಲ್ಕು ಟೆಸ್ಟ್ ಸರಣಿಗಳನ್ನು ಮಾತ್ರ ಕೈ ವಶಮಾಡಿಕೊಂಡಿದೆ. ನಾಲ್ಕು ಟೆಸ್ಟ್ ಸರಣಿಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಅದರಲ್ಲೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತಕ್ಕೆ ಇಲ್ಲಿಯವರೆಗೆ ಒಂದೇ ಒಂದು ಟೆಸ್ಟ್ ಸರಣಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ.
ಇನ್ನು ತವರಿನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ನಾಲ್ಕು ಟೆಸ್ಟ್ ಸರಣಿಗಳನ್ನು ಆಡಿದ್ದವು. ಇದರಲ್ಲಿ ಭಾರತ ನಾಲ್ಕು ಪಂದ್ಯಗಳನ್ನು ಗೆದ್ರೆ, ದಕ್ಷಿಣ ಆಫ್ರಿಕಾ ಒಂದು ಸರಣಿಯನ್ನು ಗೆದ್ದುಕೊಂಡಿದೆ. ಎರಡು ಸರಣಿಗಳು ಡ್ರಾದಲ್ಲಿ ಅಂತ್ಯಗೊಂಡಿವೆ.
ಹಾಗೇ ದಕ್ಷಿಣ ಆಫ್ರಿಕಾದಲ್ಲಿ 9 ಸರಣಿಗಳು ನಡೆದಿದ್ದು, ದಕ್ಷಿಣ ಆಫ್ರಿಕಾ ಏಳು ಸರಣಿಗಳನ್ನು ಗೆದ್ದುಕೊಂಡ್ರೆ, ಎರಡು ಸರಣಿಗಳು ಡ್ರಾನಲ್ಲಿ ಕೊನೆಗೊಂಡಿವೆ.
2000ದಲ್ಲಿ ಹ್ಯಾನ್ಸಿ ಕ್ರೊನಿಯೆ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ಸಚಿನ್ ಸಾರಥ್ಯದ ಭಾರತ ತಂಡವನ್ನು 2-0ಯಿಂದ ಸೋಲಿಸಿತ್ತು. ಬಳಿಕ 2008 ಮತ್ತು 2010ರಲ್ಲಿ ಧೋನಿ ನಾಯಕತ್ವದ ಟೀಮ್ ಇಂಡಿಯಾ 1-1ರಿಂದ ಸರಣಿಯನ್ನು ತವರಿನಲ್ಲಿ ಡ್ರಾ ಮಾಡಿಕೊಂಡಿತ್ತು.
ಹಾಗೇ ತವರಿನಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 19 ಟೆಸ್ಟ್ ಪಂದ್ಯಗಳನ್ನು ಆಡಿವೆ. ಇದರಲ್ಲಿ 11 ಪಂದ್ಯಗಳನ್ನು ಭಾರತ ಗೆದ್ರೆ, ಐದು ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಗೆದ್ದಿದೆ. ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳು ಡ್ರಾಗೊಂಡಿವೆ.
ಇನ್ನುಳಿದಂತೆ ಟೀಮ್ ಇಂಡಿಯಾ ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣುತ್ತಿದೆ. ತಂಡದಲ್ಲಿರುವ ಆಟಗಾರರು ಅತ್ಯುತ್ತಮ ಲಯದಲ್ಲಿದ್ದಾರೆ. ಅದರಲ್ಲೂ ರಿಷಬ್ ಪಂತ್ ತಂಡವನ್ನು ಮತ್ತೆ ಸೇರಿಕೊಂಡಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಪಂತ್ ಆಗಮನದಿಂದ ಧ್ರುವ್ ಜುರೇಲ್ ಹೆಚ್ಚುವರಿ ಬ್ಯಾಟರ್ ಆಗಿ ಆಡಿದ್ರೂ ಅಚ್ಚರಿ ಏನಿಲ್ಲ.
ಇನ್ನುಳಿದಂತೆ ನಾಯಕ ಶುಭ್ಮನ್ ಗಿಲ್ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್ ಮೇಲೆ ಸಹಜವಾಗಿ ನಿರೀಕ್ಷೆಗಳು ಹೆಚ್ಚಿವೆ.
ಮತ್ತೊಂದೆಡೆ, ಸ್ಪಿನ್ ಜೊತೆ ಬ್ಯಾಟಿಂಗ್‍ನಲ್ಲೂ ಮೋಡಿ ಮಾಡುವ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ಆಧಾರವಾಗಲಿದ್ದಾರೆ. ಅಲ್ಲದೆ ಕುಲದೀಪ್ ಯಾದವ್ ಸ್ಪಿನ್ ಮ್ಯಾಜಿಕ್ ಹರಿಣಗಳಿಗೆ ತಲೆನೋವಾಗಿ ಪರಿಣಮಿಸುವುದದರಲ್ಲಿ ಎರಡು ಮಾತಿಲ್ಲ. ಉಳಿದಂತೆ ವೇಗಿಗಳಾದ ಜಸ್ಪ್ರಿತ್ ಬೂಮ್ರಾ, ಮೊಹಮ್ಮದ್ ಸೀರಾಜ್, ಆಕಾಶ್ ದೀಪ್ ದಕ್ಷಿಣ ಆಫ್ರಿಕಾದ ಬ್ಯಾಟರ್‍ಗಳಿಗೆ ಅಪಾಯಕಾರಿಗಳಾಗಿ ಪರಿಣಮಿಸಬಹುದು.
ಇತ್ತ ದಕ್ಷಿಣ ಆಫ್ರಿಕಾ ತಂಡದಲ್ಲಿರುವ ಹೆಚ್ಚಿನ ಆಟಗಾರರಿಗೆ ಭಾರತದಲ್ಲಿ ಆಡಿರುವ ಅನುಭವ ಕಮ್ಮಿ ಇದೆ. ಕಾಗಿಸೊ ರಬಾಡ, ಆಡೇನ್ ಮಾರ್ಕಮ್, ಟ್ರಿಸ್ಟನ್ ಸ್ಟಬ್ಸ್, ಮಾರ್ಕೊ ಜನ್ಸನ್, ರ್ಯಾನ್ ರಿಕೆಲ್ಟನ್, ಡೆವಾಲ್ಡ್ ಬ್ರೇವಿಸ್ ಐಪಿಎಲ್‍ನಲ್ಲಿ ಆಡಿದ ಅನುಭವ ಇದ್ರೂ ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತದಲ್ಲಿ ಆಡಿರುವ ಅನುಭವ ಹೆಚ್ಚು ಇಲ್ಲ.
ಅದೇ ರೀತಿ ಕಾಗಿಸೊ ರಬಾಡ ಭಾರತದಲ್ಲಿ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ರೂ ಗಳಿಸಿದ್ದು 9 ವಿಕೆಟ್ ಮಾತ್ರ. ಅದೇ ರೀತಿ ನಾಯಕ ಟೆಂಬಾ ಬಾವುನಾ ನಾಲ್ಕು ಪಂದ್ಯಗಳಲ್ಲಿ 152 ರನ್ ಗಳಿಸಿದ್ದಾರೆ. ಒಟ್ಟಾರೆ, 15 ಸದಸ್ಯರ ದಕ್ಷಿಣ ಆಫ್ರಿಕಾ ತಂಡದಲ್ಲಿ ಎಂಟು ಆಟಗಾರರು ಭಾರತದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡಿಲ್ಲ.
ಒಟ್ಟಾರೆ, ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವೆ ಒಟ್ಟು 44 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 16 ಪಂದ್ಯಗಳನ್ನು ಗೆದ್ರೆ, ದಕ್ಷಿಣ ಆಫ್ರಿಕಾ 18 ಪಂದ್ಯಗಳನ್ನು ಗೆದ್ದಿವೆ. 10 ಪಂದ್ಯಗಳು ಡ್ರಾ ಆಗಿವೆ.
ಕೈಜಾರಿದ ಕ್ಯಾಚ್, ಕೈಕೊಟ್ಟ ಮ್ಯಾಚ್! ಜೈಸ್ವಾಲ್ ಎಡವಟ್ಟು, ಭಾರತಕ್ಕೆ ಸೋಲಿನ ಪೆಟ್ಟು
ರಾಯ್‌ಪುರ: ಕ್ರಿಕೆಟ್ ಜಗತ್ತಿನಲ್ಲಿ ಒಂದು ಮಾತಿದೆ, ಕ್ಯಾಚ್ ಡ್ರಾಪ್ ಆದರೆ ಮ್ಯಾಚ್ ಡ್ರಾಪ್ ಎಂದು. ರಾಯ್‌ಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಈ...








