ಸುಮಾರು ಏಳು ವರ್ಷಗಳ ನಂತರ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ದೇಸಿ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ.
ಮುಂಬರುವ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡುವುದಾಗಿ ರೋಹಿತ್ ಶರ್ಮಾ ಮುಂಬೈ ಕ್ರಿಕೆಟ್ ಸಂಸ್ಥೆಗೆ ತಿಳಿಸಿದ್ದಾರೆ. ಡಿಸೆಂಬರ್ ೨೪ರಿಂದ ಶುರುವಾಗಲಿರುವ ವಿಜಯ್ ಹಜಾರೆ ಟೂರ್ನಿಯಲ್ಲಿ ರೋಹಿತ್ ಶರ್ಮಾ ಮುಂಬೈ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಅದಕ್ಕೆ ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಆಡುವುದಾಗಿಯೂ ಹೇಳಿದ್ದಾರೆ. ಟಿ-೨೦ ಕ್ರಿಕೆಟ್‌ಗೆ ವಿದಾಯ ಹೇಳಿದ್ರೂ ಶರ್ಮಾ ನವೆಂಬರ್ ೨೬ರಿಂದ ಶುರುವಾಗಲಿರುವ ದೇಸಿ ಟಿ-೨೦ ಟೂರ್ನಿಯಲ್ಲಿ ಆಡಲಿದ್ದಾರೆ.
ಬಿಸಿಸಿಐ ಮತ್ತು ಆಯ್ಕೆ ಸಮಿತಿಯು ಹಿರಿಯ ಆಟಗಾರರಿಗೂ ದೇಸಿ ಟೂರ್ನಿಯಲ್ಲಿ ಆಡುವಂತೆ ಸೂಚನೆ ನೀಡಿದೆ. ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯನ್ನು ಮುಂದಿಟ್ಟುಕೊAಡು ಆಯ್ಕೆ ಸಮಿತಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅದರಂತೆ ರೋಹಿತ್ ಶರ್ಮಾ ವಿಜಯ್ ಹಜಾರೆ ಟೂರ್ನಿಗೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲೂ ಆಡಲಿದ್ದಾರೆ. ಡಿಸೆಂಬರ್ ೩ರಿಂದ ೯ರವರೆಗೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಬಳಿಕ ಜನವರಿ ೧೧ರಿಂದ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಶರ್ಮಾ ತಯಾರಿ ಕೂಡ ನಡೆಸಲಿದ್ದಾರೆ.
ಆದ್ರೆ ವಿರಾಟ್ ಕೊಹ್ಲಿ ದೇಸಿ ಟೂರ್ನಿಯಲ್ಲಿ ಆಡುವ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಸದ್ಯ ಲಂಡನ್‌ನಲ್ಲಿರುವ ಕೊಹ್ಲಿ ದೆಹಲಿ ಕ್ರಿಕೆಟ್ ಸಂಸ್ಥೆಗೆ ವಿಜಯ್ ಹಜಾರೆ ಟೂರ್ನಿಯಲ್ಲಿ ಭಾಗಿಯಾಗುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈಗಾಗಲೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಹಾಗೂ ಟಿ-೨೦ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕೇವಲ ಏಕದಿನ ಕ್ರಿಕೆಟ್‌ನತ್ತ ಮಾತ್ರ ಗಮನಹರಿಸುತ್ತಿದ್ದಾರೆ. ಅದರಲ್ಲೂ ೨೦೨೭ರ ಏಕದಿನ ವಿಶ್ವಕಪ್‌ನತ್ತ ಇಬ್ಬರು ಮಹಾ ಆಟಗಾರರು ಚಿತ್ತವನ್ನಿಟ್ಟಿದ್ದಾರೆ.








