ಪ್ರತಿಷ್ಠಿತ ಆಹಾರ ಪದಾರ್ಥಗಳ ತಯಾರಿಕಾ ಕಂಪನಿಯಾದ ಎಂಟಿಆರ್ ಕಂಪನಿಯ ೧೬ ಉದ್ಯೋಗಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಮೊದಲೇ ಕೊರೊನಾ ಮಾಹಾಮಾರಿಯಿಂದ ತತ್ತರಿಸಿಹೋಗಿರುವ ಜನರಿಗೆ ಈ ಸುದ್ದಿ ಮತ್ತಷ್ಟು ಆತಂಕ ಮೂಡಿಸಿದೆ. ಬೆಂಗಳೂರಿನ ಬೊಮ್ಮಸಂದ್ರ ಶಾಖೆಯಲ್ಲಿನ ಸಿಬ್ಬಂದಿಗಳಿಗೆ ಪಾಸಿಟಿವ್ ದೃಢವಾದ ಬೆನ್ನಲ್ಲೇ ಕಂಪನಿಯನ್ನ ಸೀಲ್ ಡೌನ್ ಮಾಡಲಾಗಿದೆ.
ವಾರದ ಹಿಂದೆಯಷ್ಟೇ ಓರ್ವ ನೌಕರನಿಗೆ ಪಾಸಿಟಿವ್ ಪತ್ತೆಯಾದ ಬೆನ್ನಲ್ಲೇ ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಸುಮಾರು ೪೦ ಜನರನ್ನ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಅಲ್ದೇ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದೀಗ ೧೬ ಉದ್ಯೋಗಿಗಳಿಗೆ ಸೋಂಕು ದೃಢಪಟ್ಟಿದೆ. ಇನ್ನೂ ಉಳಿದವರ ವರದಿ ಬರುವುದು ಬಾಕಿ ಇದೆ. ಈ ¨ಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.








