ಕಾಂಗ್ರೆಸ್ ಸರ್ಕಾರದ ಒಳಜಗಳ ಮತ್ತಷ್ಟು ಹೆಚ್ಚಾಗುವಂತೆ, ಎಮ್ಎಲ್ಸಿ ಛಲವಾದಿ ನಾರಾಯಣಸ್ವಾಮಿಯವರು ಭಾರೀ ವಿವಾದ ಕೆರಳಿಸುವಂತಹ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ, ಸಚಿವ ಸ್ಥಾನಕ್ಕಾಗಿ ಕೋಟಿಗಟ್ಟಲೆ ಹಣದ ವ್ಯವಹಾರಗಳು ನಡೆಯುತ್ತಿವೆ ಎಂಬ ಆರೋಪವನ್ನು ಅವರು ಹೊರಹಾಕಿದ್ದಾರೆ.
ಕಾಂಗ್ರೆಸ್ ಪಕ್ಷದ ಶಾಸಕರನ್ನೇ ₹50 ಕೋಟಿಯಿಂದ ₹75–100 ಕೋಟಿವರೆಗೆ ನೀಡಿ ಖರೀದಿಸುವ ಕೆಲಸ ನಡೆಯುತ್ತಿದೆ. ಪಕ್ಷದ ಒಳಗೆ ಇಷ್ಟು ಕೆಟ್ಟ ಪರಿಸ್ಥಿತಿ ಬಂದಿದ್ದು, ತಮ್ಮದೇ ಶಾಸಕರನ್ನು ತಾವು ಖರೀದಿಸುವ ಮಟ್ಟಕ್ಕೆ ಕಾಂಗ್ರೆಸ್ ಬಂದಿದೆ ಎಂದು ಅವರು ಹೇಳಿದ್ದಾರೆ.
ಮಂತ್ರಿ ಸ್ಥಾನ ಬಯಸುವವರಿಗೆ AICC ನಾಯಕ ಸುರ್ಜೇವಾಲಾ ₹200 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಛಲವಾದಿ ಬಾಂಬ್ ಸಿಡಿಸಿದ್ದಾರೆ.
ಛಲವಾದಿಯವರ ಆರೋಪದ ಪ್ರಕಾರ ಸಂಪುಟ ವಿಸ್ತರಣೆ ಪುನರ್ ರಚನೆಯ ಹೆಸರಿನಲ್ಲಿ ಭಾರೀ ಹಣದ ವ್ಯವಹಾರ ನಡೆಯುತ್ತಿದೆ.
ಹೈಕಮಾಂಡ್ ಮಟ್ಟದಲ್ಲೇ ಹಣ ಕೇಳಲಾಗುತ್ತಿದೆ ಎಂಬ ಆರೋಪದಿಂದ ಪಕ್ಷದ ಒಳಗಿನ ಗೊಂದಲ ಮತ್ತಷ್ಟು ಗಂಭೀರವಾಗಿದೆ.








