ಸಂಧ್ಯಾಕಾಲದಲ್ಲಿ ವೆದಾಂಮೃತವಾದ ಗಾಯತ್ರಿ ಮಂತ್ರವನ್ನು ಜಪಿಸುವುದು ಒಂದು ಭಾಗ್ಯ. ಈ ಮಂತ್ರವನ್ನು ಯಾರು ಜಪಿಸುತ್ತಾರೋ ಅವರಿಗೆ ಪುಣ್ಯ ಲಭಿಸಲಿದೆ. ಹಾಗಾದರೆ ಗಾಯಿತ್ರಿ ಮಂತ್ರವನ್ನು (Gayatri Mantra) ಜಪಿಸುವುದರಿಂದ ಸಿಗುವ ಲಾಭಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಯಾರು ಪ್ರತಿನಿತ್ಯ ಗಾಯತ್ರಿ ಮಂತ್ರವನ್ನು ಪಠಣೆ ಮಾಡುತ್ತಾರೋ ಅವರ ಬದುಕಿನಲ್ಲಿ ಭಗವಂತನ ದಿವ್ಯ ಜ್ಯೋತಿ ಸದಾಕಾಲ ಬೆಳಗುತ್ತಿರುತ್ತದೆ. ಜೀವನದ ಹಾದಿಯಲ್ಲಿ ಭಗವಂತನೇ ಅಂಬೆಗಾಲನ್ನು ಇಡಿಸುತ್ತಾನೆ ಎಂದರೂ ಕೂಡ ತಪ್ಪಾಗಲಾರದು. ಎಲ್ಲಾ ಮಂತ್ರಗಳಿಗಿಂತ ಶಕ್ತಿಶಾಲಿಯಾದ ಮಂತ್ರವೆಂದರೆ ಗಾಯತ್ರಿ ಮಂತ್ರ. ಗಾಯತ್ರಿ ಮಂತ್ರವನ್ನು ಯಾವಾಗಲೂ ದೇವರ ಪೂಜೆಯ ವೇಳೆ, ದೇವರಿಂದ ಆಶೀರ್ವಾದ ಪಡೆಯುವ ವೇಳೆ ಮತ್ತು ಬ್ರಹ್ಮಜ್ಞಾನವನ್ನು ಪಡೆಯುವಾಗ ಮಾತ್ರ ಗಾಯತ್ರಿ ಮಂತ್ರವನ್ನು ಜಪಿಸಬೇಕು.
ಗಾಯತ್ರಿ ಮಂತ್ರವನ್ನು ಎಲ್ಲಾ ಸಮಯದಲ್ಲೂ ಜಪಿಸುವಂತೆ ಇಲ್ಲ,ಅದಕ್ಕೆ ನಿರ್ದಿಷ್ಟವಾದ ಸಮಯವಿದೆ. ದಿನಕ್ಕೆ ಮೂರು ಬಾರಿ ಮಾತ್ರ ಗಾಯತ್ರಿ ಮಂತ್ರವನ್ನು ಜಪಿಸಬೇಕು. ಮೊದಲಿಗೆ ಗಾಯತ್ರಿ ಮಂತ್ರವನ್ನು ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಪ್ರಾರಂಭಿಸಿ ಸೂರ್ಯ ಉದಯಿಸುವುದರ ತನಕ ಜಪಿಸಬೇಕು. ತದನಂತರ ಮಧ್ಯಾಹ್ನದ ವೇಳೆ ಒಂದು ಬಾರಿ ಜಪಿಸಬೇಕು. ಅಂತಿಮವಾಗಿ ಸೂರ್ಯ ಮುಳುಗಲು ಆರಂಭವಾಗುವ ಹೊತ್ತಿನಲ್ಲಿ ಪ್ರಾರಂಭಿಸಿ ಚಂದ್ರೋದಯ ಆಗುವವರೆಗೂ ಗಾಯತ್ರಿ ಮಂತ್ರವನ್ನು ಜಪಿಸಬಹುದು.
ಇದನ್ನೂ ಓದಿ: ಸಂತಾನ ಪ್ರಾಪ್ತಿಗಾಗಿ ಪೂಜಿಸಬೇಕಾದ ದೇವತೆ
ಗಾಯತ್ರಿ ಮಂತ್ರವನ್ನು ಜಪಿಸಬೇಕಾದರೆ ಏಕಾಗ್ರತೆಯಿಂದ, ಶಾಂತಚಿತ್ತ ಮನಸ್ಸಿಂದ ಜಪಿಸಬೇಕು. ಯಾವ ಮಕ್ಕಳು ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಪಟಿಸುತ್ತಾರೋ ಅವರ ಬುದ್ಧಿ ಚುರುಕುಗೊಳ್ಳುತ್ತದೆ. ಶುಕ್ರವಾರದ ದಿನ ಯಾರು ಗಾಯತ್ರಿ ಮಂತ್ರವನ್ನು ಜಪಿಸುತ್ತಾರೋ ಅವರಿಗೆ ಭಗವಂತನು ಸದಾಕಾಲ ಕಾವಲಾಗಿ ನಿಲ್ಲುತ್ತಾನೆ. ಸಂತಾನಭಾಗ್ಯ ಆಗದೆ ಇರುವವರು ಪ್ರತಿನಿತ್ಯ ಬಿಳಿ ಬಟ್ಟೆಯನ್ನು ಧರಿಸಿ ಗಾಯತ್ರಿ ಮಂತ್ರವನ್ನು ಜಪಿಸಬೇಕು.
ಶತ್ರು ಬಾಧೆ ಇದ್ದವರು ಮಂಗಳವಾರ, ಭಾನುವಾರ ಹಾಗೂ ಅಮಾವಾಸ್ಯೆಯ ದಿನದಂದು ಈ ಮಂತ್ರವನ್ನು ಜಪಿಸುವುದರಿಂದ ಶತ್ರು ಬಾದೆಗಳು ದೂರವಾಗುತ್ತದೆ. ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಆರೋಗ್ಯವೃದ್ಧಿಯಾಗುತ್ತದೆ. ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಜಪಿಸುವುದರಿಂದ ಮನುಷ್ಯನಲ್ಲಿ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಯಾರು ಪ್ರತಿನಿತ್ಯ ಗಾಯತ್ರಿ ಮಂತ್ರವನ್ನು ಜಪಿಸುತ್ತಾರೋ ಅವರಿಗೆ ಉಸಿರಾಟದ ಸಮಸ್ಯೆ ಬರುವುದಿಲ್ಲ.
ಲೇಖನ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ಮತ್ತಷ್ಟು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








