ಇಂದು ಕೊರೊನಾ ರ‍್ಭಟ ರಾಜ್ಯದಲ್ಲಿ ಜೋರಾಗಿಯೇ ಇದೆ. ಒಂದೇ ದಿನ ರಾಜ್ಯದಲ್ಲಿ ಒಟ್ಟು ೩೧೭೬ ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಬೆಂಗಳೂರಿನಲಿ ಹೊಸದಾಗಿ 1975 ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಆತಂಕಕಾರಿ ವಿಚಾರವೆಂದರೇ ಇಂದು ರಾಜ್ಯದಲ್ಲಿ ಮಾರಕ ಕೊರೊನಾಗೆ ಬಲಿಯಾದವರ ಸಂಖ್ಯೆ 87. ಅದ್ರಲ್ಲೂ ಬೆಂಗಳೂರು ಒಂದರಲ್ಲೇ 60 ಜನ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟಾರೆ ಇಲ್ಲಿಯವರೆಗೂ ರಾಜ್ಯದಲ್ಲಿ ಕೋವಿಡ್ ನಿಂದ ಸತ್ತವರ ಸಂಖ್ಯೆ 929ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 4753 ರ ಗಡಿ ದಾಟಿದೆ. ಪ್ರಸ್ತುತ ರಾಜ್ಯದಲ್ಲಿ 25835 ಆಕ್ಟಿವ್ ಕೇಸ್ ಗಳಿದ್ದು, ಇಂದು ಒಂದೇ ದಿನ 1075 ಜನರು ಗುಣಮುಖರಾಗಿ ಡಿಶ್ಚಾರ್ಜ್ ಆಗಿದ್ದಾರೆ.
ಇನ್ನೂ ಕೊರೊನಾ ರುದ್ರತಾಂಡವ ತೋರಿರುವ ಬೆಂಗಳೂರಿನಲ್ಲಿ ಒಟ್ಟು ಕೇಸ್ ಗಳನ್ನ ನೋಡುವುದಾದರೇ ಇಲ್ಲಿಯವರೆಗೂ 22944 ಕೇಸ್ ಗಳು ಪತ್ತೆಯಾಗಿದ್ದು, 437 ಜನರು ಪ್ರಾಣಕಕಳೆದುಕೊಂಡಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ಮಾರಕ ಕೊರೊನಾದಿಂದ ಗುಣಮುಖರಾಗಿ ಡಿಶ್ಚಾರ್ಜ್ ಆದವರ ಸಂಖ್ಯೆ 463. ಇನ್ನೂ ಆಕ್ಟೀವ್ ಕೇಸ್ ಗಳ ಸಂಖ್ಯೆ 15600 ಇದೆ.