ಶಿಶುವಿನ ಜನ್ಮ ನಕ್ಷತ್ರದ ಆಧಾರದ ಮೇಲೆ ಜಾತಕವನ್ನು (Horoscope) ವಿಮರ್ಶೆ ಮಾಡುತ್ತಾರೆ 27 ನಕ್ಷತ್ರಗಳಲ್ಲಿ ಪ್ರತಿಯೊಂದು ನಾಲ್ಕು ಪಾದಗಳು ಒಳಗೊಂಡಿರುತ್ತವೆ. ಈ ನಕ್ಷತ್ರ ಪಾದಗಳ ಕಾಲದಲ್ಲಿ ತಾಯಿ ಗರ್ಭದಿಂದ ಹೊರ ಬಂದ ಶಿಶುವಿನ ಭವಿಷ್ಯವನ್ನು ಬಹುಮಟ್ಟಿಗೆ ನಿರ್ಧರಿಸಿ ಹೇಳಬಹುದು ಇದು ಅನುಭವ ವೇದ್ಯ. ಅಶ್ವಿನಿ ನಕ್ಷತ್ರದ ಒಂದನೇ ಪಾದದಲ್ಲಿ ಹಾಗೂ ಭರಣಿ ನಕ್ಷತ್ರದ ಮೂರನೇ ಪಾದದಲ್ಲಿ ಜನಿಸಿದ ಶಿಶುವಿನಿಂದ ತಾಯಿ ಹಾಗು ತಂದೆಗೆ ಗಂಡಾಂತರವಿರುತ್ತದೆ.
ಕೃತಿಕಾ ನಕ್ಷತ್ರದ ಮೂರನೇ ಪಾದದಲ್ಲಿ ಜನಿಸಿದ ಗಂಡು ಮಗುವಿನ ತಂದೆಗೆ ಗಂಡಾಂತರವಾದರೆ ಹೆಣ್ಣು ಮಗುವಿನಿಂದ ತಾಯಿಗೆ ಗಂಡಾಂತರವಿರುತ್ತದೆ. ರೋಹಿಣಿ ಒಂದನೇ ಪಾದದಲ್ಲಿ ಜನನವಾದರೆ ತಾಯಿಗೆ ಕೇಡು ಎರಡು ಮೂರನೇ ಪಾದಗಳಲ್ಲಿ ಸೋದರ ಮಾವನಿಗೆ ಗಂಡಾಂತರ ಪುಷ್ಯ ನಕ್ಷತ್ರದ ಒಂದನೇ ಪಾದದಲ್ಲಿ ಜನಿಸಿದ ಶಿಶುವಿನಿಂದ ಗಂಡಾದರೆ ತಂದೆಗೂ ಹೆಣ್ಣಾದರೆ ತಾಯಿಗೂ ಸ್ವಲ್ಪ ತೊಂದರೆ.
ಆಶ್ಲೇಷ ಒಂದನೇ ಪಾದದಲ್ಲಿ ಜನನವಾದರೆ ಶುಭಫಲ
ಎರಡನೇ ಪಾದದಲ್ಲಿ ಧನನಾಶ,
ಮೂರು ಮತ್ತು ನಾಲ್ಕನೇ ಪಾದದಲ್ಲಿ ತಾಯಿ ತಂದೆಯರಿಗೆ ಗಂಡಾಂತರ
ಮುಖ ಒಂದನೇ ಪಾದದಲ್ಲಿ ಮಗುವಿಗೆ ಕೇಡು.
ಎರಡಾದರೆ ಅಲ್ಪ ದೋಷ ,
ಮೂರು ಮತ್ತು ನಾಲ್ಕು ತಂದೆ ತಾಯಿಗೆ ಅಲ್ಪ ತೊಂದರೆ.
ಉತ್ತರಾ ನಕ್ಷತ್ರದ ಒಂದನೇ ಪಾದದಲ್ಲಿ ಗಂಡು ಮಗು ಜನಿಸಿದರೆ ತಂದೆಗೂ ಹೆಣ್ಣು ಮಗು ಜನಿಸಿದರೆ ತಾಯಿಗೂ ಕೇಡಾಗುತ್ತದೆ.
ಉಳಿದ ಮೂರು ಪಾದಗಳು ಶುಭಕರ.
ಹಸ್ತ 3ನೇ ಪಾದದಲ್ಲಿ ಮಗು ಜನಿಸಿದರೆ ತಂದೆ ತಾಯಿಯರಿಗೆ ತೀವ್ರವಾದ ತೊಂದರೆಗಳು.
ಚಿತ್ರ ಒಂದು ಎರಡು ಪಾದಗಳಲ್ಲಿ ಜನಿಸಿದ ಶಿಶುವಿಗೆ ತಂದೆ ತಾಯಿಯರಿಗೆ ಆರೋಗ್ಯಕ್ಕೆ ತೊಂದರೆಯಾಗುತ್ತದೆ
ವಿಶಾಖ ನಕ್ಷತ್ರದ ನಾಲ್ಕು ಪಾದಗಳಲ್ಲೂ
ಶ್ರೇಯಸ್ಕರವಲ್ಲ
ಇದರಲ್ಲಿ ಜನಿಸಿದ ಮಗುವಿನಿಂದ ತಂದೆ ಚಿಕ್ಕಪ್ಪ ಮತ್ತು ಚಿಕ್ಕಪ್ಪನ ಪತ್ನಿಗೆ ಗಂಡಾಂತರ’
ಜೇಷ್ಠ ನಕ್ಷತ್ರದ ಮೊದಲನೇ ಪಾದವಾದರೆ ಕಷ್ಟ ಎರಡನೇ ಪಾದವಾದರೆ ದ್ರವ್ಯನಾಶ.
ಮೂರನೇ ಪಾದ ದೊಡ್ಡಪ್ಪನಿಗೆ ತೊಂದರೆ,
ನಾಲ್ಕನೇ ಪಾದ ಸೋದರನಿಗೆ.
ಇದನ್ನೂ ಓದಿ: ಬೆಳಿಗ್ಗೆ ಎದ್ದ ತಕ್ಷಣ ಅಂಗೈ ನೋಡುವುದರ ಪ್ರಯೋಜನ ತಿಳಿಯಿರಿ
ಗಂಡಾಂತರ
ಮೂಲ ನಕ್ಷತ್ರದ ಮೊದಲನೇ ಪಾದದಲ್ಲಿ ಜನಿಸಿದರೆ ತಂದೆಗೆ ಗಂಡಾಂತರ
ಎರಡರಲ್ಲಿ ಜನಿಸಿದರೆ ತಾಯಿಗೆ ಗಂಡಾಂತರ
ಮೂರರಲ್ಲಿ ಜನಿಸಿದರೆ ಧನನಾಶ,
ನಾಲ್ಕನೆಯ ಪಾದವು ಬಹಳ ಶ್ರೇಯಸ್ಕರವಾದದ್ದು.
ಪೂರ್ವಾಷಾಡ ಮೂರನೇ ಪಾದದಲ್ಲಿ ಜನಿಸಿದ ಮಗುವಿನಿಂದ ತಂದೆಗೆ ಗಂಡಾಂತರ
ರೇವತಿ ನಾಲ್ಕನೇ ಪಾದದಲ್ಲಿ ಜನಿಸಿದ ಮಗುವಿಗೆ ತೀವ್ರವಾಗಿ ಆರೋಗ್ಯಕೆಟ್ಟು ತೊಂದರೆಯಾಗುತ್ತದೆ.
ಪಾತಾಳ ಭೈರವಿಯೈ ನಮಃ.
ಲೇಖನ: ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಧಾರ್ಮಿಕಚಿಂತಕರು,ಜೋತಿಷ್ಯರು ,ಸಲಹೆಗಾರರು, ಸಂಶೋಧಕರು. ಹಾಗು ಬರಹಗಾರರು
ಮತ್ತಷ್ಟು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ






