ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ದೇಶದಲ್ಲಿ ಆಧಾರ್ ಕಾರ್ಡ್ ದುರ್ಬಳಕೆಯನ್ನು ತಡೆಯಲು ಹೊಸ ನಿಯಮವನ್ನು ಜಾರಿಗೆ ತಂದಿದೆ. ಈಗಿನಿಂದ ಗ್ರಾಹಕರ ಗುರುತಿನ ಪರಿಶೀಲನೆಗಾಗಿ ಆಧಾರ್ ಕಾರ್ಡ್ ಬಳಸಲು ಬಯಸುವ ಯಾವುದೇ ಸಂಸ್ಥೆ ಉದಾಹರಣೆಗೆ ಹೋಟೆಲ್ಗಳು, ಈವೆಂಟ್ ಆಯೋಜಕರು, ಸೇವಾ ಸಂಸ್ಥೆಗಳು, ಕಂಪನಿಗಳು UIDAIನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
ಈ ಹೊಸ ನಿಯಮ ಜಾರಿಯಾದ ನಂತರ ಸಂಸ್ಥೆಗಳು ಗ್ರಾಹಕರ ಆಧಾರ್ ಕಾರ್ಡ್ಗಳ ಫೋಟೊಕಾಪಿ ತೆಗೆದು ಭೌತಿಕವಾಗಿ ಸಂಗ್ರಹಿಸುವುದಕ್ಕೆ ಅವಕಾಶ ಇರೋದಿಲ್ಲ. ಆಧಾರ್ ಡೇಟಾ ತಪ್ಪಾಗಿ ಬಳಕೆಯಾಗುವುದು, ಲೀಕ್ ಆಗುವುದು, ಅಥವಾ ಮೋಸಕ್ಕೆ ಒಳಗಾಗುವುದು ತಡೆಯಲು UIDAI ಈ ಕಠಿಣ ನಿಯಮ ಜಾರಿಗೆ ತಂದಿದೆ.
ಸಂಸ್ಥೆಗಳು ಗ್ರಾಹಕರ ಅನುಮತಿ ಪಡೆದು, UIDAI ನ ಅಧಿಕೃತ ವ್ಯವಸ್ಥೆ ಮೂಲಕವೇ ಆಧಾರ್ ಪರಿಶೀಲನೆ ಮಾಡಬೇಕು.
ಗ್ರಾಹಕರ ಮಾಹಿತಿ ಸಂಗ್ರಹಣೆ ಮತ್ತು ಬಳಕೆಗಾಗಿ ಕಟ್ಟುನಿಟ್ಟಿನ ಭದ್ರತಾ ನಿಯಮಗಳನ್ನು ಪಾಲಿಸಬೇಕು.
ನಿಯಮ ಉಲ್ಲಂಘನೆಯಾದರೆ ಆ ಸಂಸ್ಥೆಗಳಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು UIDAI ಸ್ಪಷ್ಟಪಡಿಸಿದೆ.
ಈ ಕ್ರಮದಿಂದ ದೇಶದಲ್ಲಿ ಆಧಾರ್ ಮಾಹಿತಿಯ ಸುರಕ್ಷತೆ ಹೆಚ್ಚುವುದಷ್ಟೇ ಅಲ್ಲ, ಗುರುತಿನ ಕಳವು, ಮೋಸ, ಡೇಟಾ ಮಿಸ್ಯೂಸ್ ಪ್ರಕರಣಗಳು ಕಡಿಮೆಯಾಗಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.








