ADVERTISEMENT
Tuesday, December 16, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಒತ್ತಡ.. ನಿರೀಕ್ಷೆಗಳ ಭಾರ ನಿಭಾಯಿಸುವುದು ಹೇಗೆ..? ಸಚಿನ್ ಹೇಳುವುದೇನು..?

admin by admin
December 10, 2025
in Newsbeat, Sports, ಕ್ರಿಕೆಟ್
sachin

sachin

Share on FacebookShare on TwitterShare on WhatsappShare on Telegram

ಪ್ರತಿಭೆ..ಸಾಮರ್ಥ್ಯ..ನಂಬಿಕೆ.. ನಿರೀಕ್ಷೆ..ಭರವಸೆ..ಒತ್ತಡ..ಸಾಧನೆ..ಯಶಸ್ಸು..ಇದನ್ನೆಲ್ಲಾ ಬ್ಯಾಲೆನ್ಸ್ ಮಾಡಿಕೊಂಡು ಮುನ್ನಡೆದಾಗ ಮಾತ್ರ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು. ಪ್ರತಿಯೊಬ್ಬರಲ್ಲೂ ಒಂದಲ್ಲ ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಹಾಗಂತ ಪ್ರತಿಭೆ ಇದ್ರೆ ಮಾತ್ರ ಸಾಲಲ್ಲ. ಅದಕ್ಕೆ ತಕ್ಕಂತೆ ನಮ್ಮಲ್ಲಿರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಅದಕ್ಕೆ ಬೇಕಾಗಿರೋದು ನಂಬಿಕೆ. ನಮ್ಮ ಪ್ರತಿಭೆ, ಸಾಮರ್ಥ್ಯದ ಮೇಲೆ ನಂಬಿಕೆಯನ್ನಿಟ್ಟುಕೊಂಡಾಗ ಸಹಜವಾಗಿಯೇ ಭರವಸೆಗಳ ಬೆಳಕು ಮೂಡುತ್ತದೆ. ಹಾಗೇ ನಿರೀಕ್ಷೆಗಳ ಭಾರವೂ ಹೆಚ್ಚಾಗುತ್ತದೆ. ಆಗಲೇ ಎದುರಾಗೋದು ನಿಜವಾದ ಅಗ್ನಿಪರೀಕ್ಷೆ. ಎಲ್ಲರೂ ನಮ್ಮ ಪ್ರತಿಭೆ, ಸಾಮರ್ಥ್ಯದ ಮೇಲೆ ನಂಬಿಕೆ, ನಿರೀಕ್ಷೆ, ಭರವಸೆಗಳನ್ನು ಇಟ್ಟುಕೊಂಡಾಗ ಅದಕ್ಕೆ ತಕ್ಕಂತೆ ಮುನ್ನಡೆಯುವಾಗ ನಮ್ಮನ್ನು ಕಾಡುವುದೇ ಒತ್ತಡ. ಈ ಒತ್ತಡ ಯಾರನ್ನೂ ಬಿಡಲ್ಲ. ಆದ್ರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡವನ್ನು ನಿಭಾಯಿಸುವ ಕಲೆಯನ್ನು ಅರಿತುಕೊಂಡಾಗ ಮಾತ್ರ ಸಾಧನೆಯ ಹಾದಿಯಲ್ಲಿ ಸಾಗಬಹುದು. ಆಗ ಯಶಸ್ಸು ಪಡೆಯಬಹುದು.
ಹೌದು, ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ತೆಂಡುಲ್ಕರ್ ಈ ಸೂತ್ರವನ್ನು ಅಳವಡಿಸಿಕೊಂಡಿದ್ದಾರೆ. ಅದಕ್ಕಾಗಿ ವಿಶ್ವದ ಎವರ್ ಗ್ರೀನ್ ಕ್ರಿಕೆಟಿಗನಾಗಿ ರೂಪುಗೊಂಡಿದ್ದು. ನಿಜ, ಸಚಿನ್‍ನಲ್ಲಿ ಕ್ರಿಕೆಟ್ ಪ್ರತಿಭೆ ಇತ್ತು. ಅದನ್ನು ಮೊದಲು ಗುರುತಿಸಿದ್ದು ಅಣ್ಣ ಅಜಿತ್ ತೆಂಡುಲ್ಕರ್. ನಂತರ ಗುರು ರಮಕಾಂತ್ ಅಚ್ರೇಕರ್, ಸಚಿನ್ ಪ್ರತಿಭೆಯ ಸಾಮರ್ಥ್ಯವನ್ನು ಬೆಳೆಸಿದ್ರು. ಅಷ್ಟೇ ಅಲ್ಲ ಸಚಿನ್‍ಗೆ ತನ್ನ ಪ್ರತಿಭೆ ಮತ್ತು ಸಾಮರ್ಥ್ಯದ ಮೇಲೆ ನಂಬಿಕೆ ಹುಟ್ಟುವಂತೆ ಮಾಡಿದ್ರು. ಆಗ ಸಚಿನ್‍ಗೂ ತನ್ನ ಮೇಲೆ ಭರವಸೆಯ ಬೆಳಕು ಮೂಡಿತ್ತು. ತಾನು ಅಂದುಕೊಂಡಿದ್ದನ್ನು ಸಾಧಿಸಲು ಹೊರಟಾಗ ನಿರೀಕ್ಷೆಗಳು ಹೆಚ್ಚಾದವು. ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗಳನ್ನು ಈಡೇರಿಸುವ ಭರಾಟೆಯಲ್ಲಿ ಅವರನ್ನು ಕಾಡಿದ್ದು ಒತ್ತಡ. ಪ್ರತಿ ದಿನ, ಪ್ರತಿ ಪಂದ್ಯ ಸಚಿನ್‍ಗೆ ಅದು ದೈನಂದಿನ ದಿನಚರಿ. ತರಬೇತಿ, ಗೇಮ್ ಪ್ಲಾನ್ ಎಲ್ಲವೂ ಆಟದ ಒಂದು ಭಾಗ. ಆದ್ರೆ ಸಚಿನ್ ಅವರ ಇಡೀ ಕ್ರಿಕೆಟ್ ಬದುಕಿನಲ್ಲಿ ಕೋಟಿ ಕೋಟಿ ಭಾರತೀಯರ ನಿರೀಕ್ಷೆಗಳ ಭಾರ.. ಗೆಲುವಿನ ದಾಹ. ಇದನ್ನು ಈಡೇರಿಸಲು ಹೈವೋಲ್ಟೇಜ್ ಪವರ್ ಅನ್ನು ಸಹಿಸಿಕೊಳ್ಳುವ ವೈಯರ್ ನಂತೆ ಸಚಿನ್ ದೇಹವನ್ನು ಆವರಿಸಿಕೊಂಡಿದ್ದು ಕೂಡ ಒತ್ತಡವೇ.
ಒಂದಂತೂ ಸತ್ಯ.. ಸಚಿನ್ ಮಾತ್ರವಲ್ಲ. ಪ್ರತಿಯೊಬ್ಬ ಆಟಗಾರರು ಒತ್ತಡದಲ್ಲೇ ಆಡ್ತಾರೆ. ಅದು ಕೂಡ ಭಾರತೀಯ ಕ್ರಿಕೆಟ್ ಆಟಗಾರರಿಗೆ ಒತ್ತಡ ಅನ್ನೋದು ದೊಡ್ಡ ಶಾಪವಾಗಿ ಕಾಡುತ್ತಲೇ ಇರುತ್ತದೆ. ಇದರಲ್ಲಿ ಹೆಚ್ಚು ಒತ್ತಡಕ್ಕೆ ಸಿಲುಕಿದವರು ಸಚಿನ್ ತೆಂಡುಲ್ಕರ್. ಈ ಒತ್ತಡ ಎಂಬ ಶಾಪದಿಂದ ಹೊರಬರಲು ತೆಂಡುಲ್ಕರ್ ಮಾನಸಿಕವಾಗಿ ಮತ್ತು ದೈಹಿಕವಾಗಿ ತಯಾರಿ ಮಾಡಿಕೊಂಡು ಆಡುತ್ತಿದ್ದರು. ಹೀಗಾಗಿಯೇ ಸಾಧನೆಗಳ ಶಿಖರವೇರಿ, ಯಶಸ್ಸಿನ ಉತ್ತುಂಗಕ್ಕೇರಿದ್ದು.
ಹೀಗಾಗಿ ಸಚಿನ್ ಈ ಸೂತ್ರಗಳನ್ನು ಮುಂದಿಟ್ಟುಕೊಂಡು ಯುವ ಕ್ರಿಕೆಟಿಗರಿಗೆ ಸಲಹೆ ನೀಡಿದ್ದಾರೆ. ಒಬ್ಬ ಆಟಗಾರ ಬೆಳೆಯಬೇಕಾದ್ರೆ ಹಲವು ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು. ನಿಮ್ಮಲ್ಲಿ ಎಷ್ಟೇ, ಪ್ರತಿಭೆ, ಸಾಮರ್ಥ್ಯಗಳು ಇದ್ರೂ ಅದನ್ನು ಸರಿಯಾದ ಸಮಯದಲ್ಲಿ ಬಳಸಿಕೊಳ್ಳಬೇಕು. ಯಾಕಂದ್ರೆ ಅವಕಾಶಗಳು ಯಾವಾಗಲೂ ಬರಲ್ಲ. ಬಂದಾಗ ಅದನ್ನು ಎರಡೂ ಕೈಯಿಂದ ಬಾಚಿಕೊಳ್ಳಬೇಕು
ನಿಮ್ಮ ಮೇಲೆ ನಿರೀಕ್ಷೆ, ನಂಬಿಕೆ, ಭರವಸೆಗಳು ಮೂಡಿದ್ರೆ ಅದಕ್ಕಾಗಿ ನೀವು ಯಾವ ತ್ಯಾಗಕ್ಕೂ ಸಿದ್ಧವಾಗಿರಬೇಕು. ನಿಮ್ಮಲ್ಲಿ ಪ್ರತಿಭೆ ಇದ್ರೆ ನಿಮ್ಮ ಮೇಲೆ ನಿರೀಕ್ಷೆ ಹೆಚ್ಚಾಗುತ್ತದೆ. ನಿಮ್ಮಲ್ಲಿ ಸಾಮರ್ಥ್ಯವಿದ್ರೆ ನಂಬಿಕೆ ಜಾಸ್ತಿ ಬರುತ್ತೆ. ಆಗ ನಿಮ್ಮ ಮೇಲೆ ಭರವಸೆಗಳ ಬೆಳಕು ಮೂಡುತ್ತದೆ. ಅದಕ್ಕೆ ತಕ್ಕಂತೆ ಪೂರ್ವ ತಯಾರಿ ಮಾಡಬೇಕಾಗುತ್ತದೆ. ಕೇವಲ ಕೋಚ್ ಹೇಳಿದಂತೆ ಅಭ್ಯಾಸ ಮಾಡುವುದಲ್ಲ. ಪ್ರತಿ ಪಂದ್ಯ, ಪ್ರತಿ ಸರಣಿಗೆ ನಮ್ಮ ಪೂರ್ವ ತಯಾರಿ ಮಾಡಿಕೊಂಡು ನಮ್ಮದೇ ತಂತ್ರಗಳನ್ನು ರೂಪಿಸಿಕೊಳ್ಳಬೇಕು. ಹಾಗೇ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ಕಠಿಣ ಪರಿಶ್ರಮದ ಜೊತೆಗೆ ನೀವು ನಿರ್ದಿಷ್ಟವಾದ ಯೋಜನೆ ಹಾಕಿಕೊಳ್ಳಬೇಕು. ಶಿಸ್ತು, ಬದ್ಧತೆ ಹಾಗೂ ಸರಿಯಾದ ಮಾರ್ಗದರ್ಶನದಿಂದ ಅದನ್ನು ಕಾರ್ಯರೂಪಗೊಳಿಸಬಹುದು. ಹೀಗೆ ಮಾಡುವುದರಿಂದ ಆಟಗಾರ ಉತ್ತಮ ಪ್ರದರ್ಶನ ನೀಡಲು ಸಾಧ್ಯ ಎಂಬುದು ಸಚಿನ್ ಯುವ ಆಟಗಾರರಿಗೆ ನೀಡುವ ಭೋದನೆ.
ಸಚಿನ್ ಈ ರೀತಿ ಹೇಳುವುದಕ್ಕೂ ಕಾರಣವಿದೆ. ಇದು ಅವರ ಅನುಭವದ ಪಾಠ. ಯಾಕಂದ್ರೆ ಸಚಿನ್ ಯುಗದಲ್ಲಿ ಘಾತಕ ವೇಗಿಗಳಿದ್ರು. ಚತುರ ಸ್ಪಿನ್ನರ್ ಗಳಿದ್ರು. ಚಕ್ರವ್ಯೂಹದಂತೆ ಕಟ್ಟಿಹಾಕೋ ಎದುರಾಳಿ ನಾಯಕರಿದ್ದರು. ಇದನ್ನೆಲ್ಲಾ ದಾಟಿಯೇ ಸಚಿನ್ ಮೇರು ಕ್ರಿಕೆಟಿಗನಾಗಿ ರೂಪುಗೊಂಡಿದ್ದು.
ಅಷ್ಟಕ್ಕೂ ಸಚಿನ್ ಕ್ರಿಕೆಟ್ ಪಿಚ್ ಮೇಲೆ ರಕ್ತ ಸುರಿಸಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪ್ರವೇಶಿಸಿದ್ದು. ಪಾಕ್‍ನ ಘಾತಕ ಬೌಲರ್ ವಕಾರ್ ಯೂನಸ್ ಎಸೆತದಲ್ಲಿ ದವಡೆಗೆ ಪೆಟ್ಟು ತಿಂದು ರಕ್ತ ಸುರಿಸಿ ಆಡಿದ್ದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ವಾಸಿಂ ಅಕ್ರಂ, ವಕಾರ್ ಯೂನಸ್, ಅಬ್ದುಲ್ ಖಾದರ್, ಕಟ್ರ್ನಿ ವಾಲ್ಶ್, ಆಲನ್ ಡೊನಾಲ್ಡ್, ಚಾಮಿಂಡಾ ವಾಸ್, ಎಂಬ್ರೋಸ್, ಮೆಕ್‍ಗ್ರಾಥ್, ಬ್ರೆಟ್‍ ಲೀ, ಶೋಯಿಬ್ ಆಖ್ತರ್, ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಸಕ್ಲೇನ್ ಮುಸ್ತಾಕ್ ಹೀಗೆ ಘಟಾನುಘಟಿ ಬೌಲರ್ ಗಳ ಎದುರು ರನ್ ಗಳಿಸೋದು, ಶತಕದ ಮಹಾ ಶತಕ ದಾಖಲಿಸೋದು ಅಂದ್ರೆ ಅಂದ್ರೆ ಸುಮ್ಮನೆ ಮಾತಾನಾಡಿದಷ್ಟು ಸುಲಭವಲ್ಲ.

ಸನತ್ ರೈ

Related posts

ರಾಜ್ಯದಲ್ಲೂ ಡಿಜಿಟಲ್ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯದಲ್ಲೂ ಡಿಜಿಟಲ್ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

December 16, 2025
ಬಿಹಾರದ ಸೋಲಿನ ಕಹಿಯ ನಡುವೆಯೇ ಪ್ರಿಯಾಂಕಾ ಗಾಂಧಿ ಮನೆ ಬಾಗಿಲು ತಟ್ಟಿದ ಪ್ರಶಾಂತ್ ಕಿಶೋರ್ ದೆಹಲಿಯಲ್ಲಿ ನಡೆದ ರಹಸ್ಯ ಸಭೆಯ ಅಸಲಿ ರಹಸ್ಯವೇನು?

ಬಿಹಾರದ ಸೋಲಿನ ಕಹಿಯ ನಡುವೆಯೇ ಪ್ರಿಯಾಂಕಾ ಗಾಂಧಿ ಮನೆ ಬಾಗಿಲು ತಟ್ಟಿದ ಪ್ರಶಾಂತ್ ಕಿಶೋರ್ ದೆಹಲಿಯಲ್ಲಿ ನಡೆದ ರಹಸ್ಯ ಸಭೆಯ ಅಸಲಿ ರಹಸ್ಯವೇನು?

December 16, 2025
Source: How to handle the pressure.. the weight of expectations..? What does Sachin say..?
Via: How to handle the pressure.. the weight of expectations..? What does Sachin say..?
Tags: #saakshatv#sachintendulkarbcciCricketkarnatakateamindia
ShareTweetSendShare
Join us on:

Related Posts

ರಾಜ್ಯದಲ್ಲೂ ಡಿಜಿಟಲ್ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯದಲ್ಲೂ ಡಿಜಿಟಲ್ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

by Shwetha
December 16, 2025
0

ರಾಜ್ಯ ಸರ್ಕಾರವೂ ಇದೀಗ ಡಿಜಿಟಲ್ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಹಾಗೂ ಪಾರದರ್ಶಕ ಜಾಹೀರಾತು ನೀತಿಯನ್ನು ಜಾರಿಗೆ ತಂದಿದೆ. ಡಿಜಿಟಲ್ ಜಾಹೀರಾತು ಮಾರ್ಗಸೂಚಿ–2024 ಅನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ...

ಬಿಹಾರದ ಸೋಲಿನ ಕಹಿಯ ನಡುವೆಯೇ ಪ್ರಿಯಾಂಕಾ ಗಾಂಧಿ ಮನೆ ಬಾಗಿಲು ತಟ್ಟಿದ ಪ್ರಶಾಂತ್ ಕಿಶೋರ್ ದೆಹಲಿಯಲ್ಲಿ ನಡೆದ ರಹಸ್ಯ ಸಭೆಯ ಅಸಲಿ ರಹಸ್ಯವೇನು?

ಬಿಹಾರದ ಸೋಲಿನ ಕಹಿಯ ನಡುವೆಯೇ ಪ್ರಿಯಾಂಕಾ ಗಾಂಧಿ ಮನೆ ಬಾಗಿಲು ತಟ್ಟಿದ ಪ್ರಶಾಂತ್ ಕಿಶೋರ್ ದೆಹಲಿಯಲ್ಲಿ ನಡೆದ ರಹಸ್ಯ ಸಭೆಯ ಅಸಲಿ ರಹಸ್ಯವೇನು?

by Shwetha
December 16, 2025
0

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ದೇಶದ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತಮ್ಮ ತಂತ್ರಗಾರಿಕೆಗಳಿಂದಲೇ ಖ್ಯಾತಿ ಗಳಿಸಿದ್ದ ಪ್ರಶಾಂತ್ ಕಿಶೋರ್, ಬಿಹಾರದಲ್ಲಿ ತಮ್ಮ...

ಜಿಬಿಎ ಚುನಾವಣಾ ರಣಕಹಳೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ 50 ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಮಾಡಿದ ಡಿಕೆಶಿ

ಜಿಬಿಎ ಚುನಾವಣಾ ರಣಕಹಳೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ 50 ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಮಾಡಿದ ಡಿಕೆಶಿ

by Shwetha
December 16, 2025
0

ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯ ಬೆನ್ನಲ್ಲೇ ಇದೀಗ ಚುನಾವಣಾ ಸಿದ್ಧತೆಗೆ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಚಾಲನೆ ನೀಡಿದೆ. ಜಿಬಿಎ ವ್ಯಾಪ್ತಿಯ 369 ವಾರ್ಡ್‌ಗಳಲ್ಲಿ ಸ್ಪರ್ಧಿಸಲು...

ದೆಹಲಿ ಪೊಲೀಸರ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳುವೆ: ಡಿಕೆ ಶಿವಕುಮಾರ್

ದೆಹಲಿ ಪೊಲೀಸರ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳುವೆ: ಡಿಕೆ ಶಿವಕುಮಾರ್

by Shwetha
December 16, 2025
0

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೀಡಿರುವ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ...

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ಸ್ವೀಕಾರ

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ಸ್ವೀಕಾರ

by Shwetha
December 16, 2025
0

ಬಿಹಾರ ಸಚಿವ ನಿತಿನ್ ನಬಿನ್ ಅವರು ಭಾರತೀಯ ಜನತಾ ಪಕ್ಷದ (BJP) ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram