ದೆಹಲಿಯಲ್ಲಿ ಸಿಎಎ ಪರ ಮತ್ತು ವಿರೋಧದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
“ಮನುಷ್ಯನೊಬ್ಬನ ತಲೆಗೆ ಡ್ರಿಲ್ಲಿಂಗ್ ಯಂತ್ರ ಇಟ್ಟು ಕೊರೆಯುವುದು ಯಾವ ಪ್ರತಿಭಟನೆಯ ಲಕ್ಷಣ!” ಎಂದು ಸಚಿವರು ಟ್ವೀಟ್ ಮಾಡಿ ದೆಹಲಿ ಪ್ರತಿಭಟನಾಕಾರರನ್ನು ಪ್ರಶ್ನಿಸಿದ್ದಾರೆ.
ದೆಹಲಿ ಸರ್ಕಾರ, ಹಿಂಸಾಚಾರದಿಂದಾಗಿ ಮೃತಪಟ್ಟ ಹೆಡ್ ಕಾನ್ಸ್ ಟೇಬಲ್ ರತನ್ ಲಾಲ್ ಕುಟುಂಬಕ್ಕೆ 1 ಕೋಟಿ ರೂಪಾಯಿ ಮತ್ತು ಹಿಂಸಾಚಾರದಲ್ಲಿ ಮೃತಪಟ್ಟ ಇತರರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ.